ಕಲಬುರಗಿ: ಶ್ರಾವಣ ಮಾಸದ ಹಿನ್ನೆಲೆ ನಗರದ ತುಂಗಾ ಕಾಲೋನಿಯ ಸೀಮೆ ಲಕ್ಷ್ಮೀ ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮ ನಡೆಯಿತು. ದಿನಂ ಪ್ರತಿ ಮಹಿಳೆಯರು ದೇವಿಯ ಭಜನಾ ಪದಗಳನ್ನು ಭಕ್ತಿಯಿಂದ ಹಾಡಿದರು.
ಭಜನೆಯು ಒಂದು ಆಧ್ಯಾತ್ಮಿಕ ಅಭ್ಯಾಸವಾಗಿದ್ದು ಇದು ಭಕ್ತಿಯಿಂದ ಕೂಡಿದ ಹೃದಯದಿಂದ ದೇವರನ್ನು ಸ್ತುತಿಸುವುದನ್ನು ಒಳಗೊಂಡಿರುತ್ತದೆ ಎಂಬುದು ವಿಶೇಷ. ಇನ್ನೂ ಶ್ರಾವಣ ಮಾಸವು ಹಿಂದು ಧರ್ಮದಲ್ಲಿ ಒಂದು ಪವಿತ್ರ ಮಾಸವಾವಿದೆ.
ಈ ಮಾಸವು ವಿಶೇಷವಾಗಿ ಭಕ್ತಿ, ಧರ್ಮ, ಮತ್ತು ಆಧ್ಯಾತ್ಮಿಕತೆಗೆ ಸಂಭಂದಿಸಿದೆ ಎಂಬುದು ವಿಶೇಷ. ಕಾಲೋನಿ ಮಹಿಳೆಯರು ರಾತ್ರಿ 8 ಗಂಟೆಯಿಂದ 11 ಗಂಟೆಯವರೆಗೂ ಭಜನೆ ಮಾಡುವರು. ನಂತರ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸವಿಯುವರು.
ಈ ಸಂದರ್ಭದಲ್ಲಿ ಕಾಲೋನಿಯ ಬಂಡೆಮ್ಮ ಬೀದರ್, ಶ್ರೀದೇವಿ, ಪಾರ್ವತಿ, ಗುರುತಾಯಿ, ಶ್ರೀದೇವಿ ಉಪ್ಪಿನ್, ಶಾಂತಾಬಾಯಿ ಪೂಜಾರಿ ಹಾಗೂ ಸುರೇಶ್ ಜಮಾದಾರ್, ಸೇರಿದಂತೆ ಹಲವರು ಭಜನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.