ಕಲಬುರಗಿ: ದಿನನಿತ್ಯದ ವ್ಯವಹಾರ ಹಾಗೂ ಪ್ರತಿಯೊಂದು ಕೆಲಸದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವದರಿಂದ ಇಡೀ ಪರಿಸರ ಮಾಲಿನ್ಯವಾಗುತ್ತದೆ. ಇದರಿಂದ ಪೆಪರ್ ಬ್ಯಾಗ್ ಬಳಕೆ ಮಾಡುವುದು ಉತ್ತಮ ಮತ್ತು ಆರೋಗ್ಯ ಕಾಪಾಡುವದಾಗಿದೆ ಎಂದು ಪ್ರೋ. ಪಂಚಶೀಲಾ ಬಿ. ಅಪ್ಪಾ ಹೇಳಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಎಮ್.ಎ ವಿಜ್ಯುವಲ್ ಆರ್ಟ್ ವಿಭಾಗದಲ್ಲಿ ಪೆಪರ್ ಬ್ಯಾಗ್ ಬಳಕೆ ಕುರಿತು ಹಮ್ಮಿಕೊಂಡ ಒಂದು ದಿನದ ಕಾರ್ಯಗಾರದಲ್ಲಿ ಅವರು ಮಾತನಾಡಿ, ಸರಕಾರ ಪ್ಲಾಸ್ಟಿಕ್ ನಿಷೇಧ ಮಾಡಿದರೂ. ಸಾರ್ವಜನಿಕರು ಇನ್ನೂ ಜಾಗೃತಿ ಹೊಂದಿಲ್ಲ. ಆದರೆ ವಿಭಾಗದ ವಿದ್ಯಾರ್ಥಿಗಳು ಪೆಪರ್ ಬ್ಯಾಗ್ ತಯಾರು ಮಾಡಿರುವುದು ಸಮಾಜಕ್ಕೆ ಒಳ್ಳೆಯ ಸಂದೇಶವಾಗಿದೆ ಎಂದು ವಿದ್ಯಾರ್ಥಿಗಳ ಪ್ರಯತ್ನಕ್ಕೆ ಬೆನ್ನು ತಟ್ಟಿದರು.
ವಿವಿ ಡೀನ್ ಲಕ್ಷ್ಮೀ ಮಾಕಾ ಮಾತನಾಡಿ, ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆ ಮಾಡದೇ ಪೆಪರ್ ಬ್ಯಾಗ್ ಬಳಕೆ ಮಾಡುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು. ವಿಭಾಗದ ಮುಖ್ಯಸ್ಥ ರಾದಡಾ. ಸುಬ್ಬಯ್ಯ ಎಂ. ನೀಲಾ ಅವರು ಮಾತನಾಡಿ, ವಿಧ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಿದರು.
ಎಂ.ಎ. ವಿಜ್ಯವಲ್‌ಆರ್ಟ್ ವಿಭಾಗದ ಮೂರನೇ ಸೇಮಿಸ್ಟರ್ ವಿಧ್ಯಾರ್ಥಿಯಾದ ಶಿವರಾಜಕುಮಾರ ಎನ್. ಹಳ್ಳಿ ಅವರು ಪೇಪರ್ ಬ್ಯಾಗ್ ಮಾಡುವ ವಿಧಾನ ಕಲಿಸಿಕೊಟ್ಟರು.
ಪ್ರೋ.ಗಾಯತ್ರಿ ಕಲ್ಯಾಣಿ ನಿರೂಪಿಸಿದರು. ಪ್ರೋ.ನಿಜಲಿಂಗ ಮುಗಳಿ ವಂದಿಸಿದರು.
ಗೋದುತಾಯಿ ಮಹಿಳಾ ಮಹಾವಿದ್ಯಾಲಯ, ಎಂ.ಬಿ.ಎ. ಎಂ.ಟಿ.ಎ. ಎಂ. ಎ. ಪತ್ರಿಕೋದ್ಯಮ, ಎಂ.ಎ.ಇಂಗ್ಲೀಷ್, ಎಂ. ಕಾಮ್., ಬಿ.ಇ. ಮ್ಯಾಕನಿಕಲ್, ಸಿವಿಲ್ ಇಂಜಿನಿಯರಿಂಗ್, ಎಂ.ಸಿಎ., ಬಿ.ಸಿ.ಎ., ಎಂ.ಬಿ.ಎ., ಇ.ಸಿ.ಇ., ಬಿ.ಬಿ.ಎ., ಬಿ.ಬಿ.ಎಂ., ಸಿವಿಲ್ ಮಹಿಳಾ, ಎಂ.ಎಚ್.ಎ., ಎಂ.ಎಸ್ಸಿ., ಸಿವಿಲ್ (ಎ.ಐ.ಇ.ಟಿ.) ಎಂ.ಎ. ವಿಜ್ಯಲ್‌ಆರ್ಟ್, ಎಂ. ಎಸ್ಸಿ ಜಿಯಾಲೋಜಿ ಗೋದುತಾಯಿ, ಬಿ.ಇ., ಬಿ.ಸಿ.ಎ. ಮಹಿಳಾ, ಒಟ್ಟು ೨೨ ವಿಭಾಗಗಳಿಂದ ೧೨೦ ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಹಾಗೂ ಎಲ್ಲಾ ವಿಭಾಗಗಳ ಉಪನ್ಯಾಸಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.