ಡಿ.ದೇವರಾಜ ಅರಸು ಜಯಂತಿ ಅರ್ಥಪೂರ್ಣವಾಗಿ ಆಚರಿಸೋಣ

0
24

ಸುರಪುರ: ಕರ್ನಾಟಕದ ಅಭಿವೃದ್ಧಿಯ ಹರಿಕಾರರೆಂದೆ ಕರೆಯಲ್ಪಡುವ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರ 109ನೇ ಜಯಂತಿಯನ್ನು ಆಗಷ್ಟ್ 20 ರಂದು ತಾಲೂಕ ಆಡಳಿತ ದಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಸಿಲ್ದಾರ್ ಕೆ.ವಿಜಯಕುಮಾರ ತಿಳಿಸಿದರು.

ನಗರದ ತಹಸಿಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,20 ರಂದು ಬೆಳಿಗ್ಗೆ ಎಲ್ಲಾ ಕಚೇರಿ,ಶಾಲಾ ಕಾಲೇಜುಗಳಲ್ಲಿ ಆಚರಣೆ ಮಾಡಿ,ನಂತರ 10 ಗಂಟೆಗೆ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ತಪ್ಪದೆ ಭಾಗವಹಿಸುವಂತೆ ಕರೆ ನೀಡಿದರು.

Contact Your\'s Advertisement; 9902492681

ಸಭೆಯಲ್ಲಿ ಭಾಗವಹಿಸಿದ್ದ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪಾರಡ್ಡಿ ಮಾಲಿ ಪಾಟೀಲ್ ಮಾತನಾಡಿ,ತಾಲೂಕ ಆಡಳಿತ ದಿಂದ ನಡೆಯುವ ಕಾರ್ಯಕ್ರಮದಲ್ಲಿ ನಮ್ಮ ವಸತಿ ನಿಲಯಗಳಲ್ಲಿದ್ದು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ನಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ,ವಿದ್ಯಾರ್ಥಿಗಳಿಗಾಗಿ ಡಿ.ದೇವರಾಜ ಅರಸು ಕುರಿತು ಭಾಷಣ,ಪ್ರಬಂಧ ಸ್ಪರ್ಧೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ಅಲ್ಲದೆ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ಉಪ ಖಜಾನೆ ಪತ್ರಾಂಕಿತ ಅಧಿಕಾರಿ ಸಣ್ಣೆಕೆಪ್ಪ ಕೊಂಡಿಕಾರ ನೀಡಲಿದ್ದಾರೆ ಎಂದು ತಿಳಿಸಿದರು.ಈ ಬಾರಿಯ ಕಾರ್ಯಕ್ರಮವನ್ನು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.

ಸಭೆಯ ಪಶು ಸಂಗೋಪನಾ ಇಲಾಖೆಯ ತಾಲೂಕ ಅಧಿಕಾರಿ ಸುರೇಶ ಅಚ್ಚಡ ಸೇರಿದಂತೆ ಮಹಿಳಾ ಮಕ್ಕಳ ಅಭಿವೃಧ್ಧಿ ಇಲಾಖೆ,ನಗರಸಭೆ ಸೇರಿ ವಿವಿಧ ಇಲಾಖೆಗಳ ಸಿಬ್ಬಂದಿಗಳು ಭಾಗವಹಿಸಿದ್ದರು.

ಪ್ರಮುಖ ಇಲಾಖೆ ಅಧಿಕಾರಿಗಳಿಗೆ ಬೇಡವಾದ ಡಿ.ದೇವರಾಜ ಅರಸು ಜಯಂತಿ ಸಭೆ
ಈಗಾಗಲೇ ಕಳೆದ ಒಂದು ವಾರದ ಹಿಂದೆಯೇ ಆಗಷ್ಟ್ 12 ರಂದು ಡಿ.ದೇವರಾಜ ಅರಸು ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ ಕರೆದಿರುವ ಕುರಿತು ತಹಸಿಲ್ದಾರರು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಯಾವುದೇ ಇಲಾಖೆ ಅಧಿಕಾರಿಗಳು ಸಭೆಗೆ ಬರದೆ ಸಭೆಗೆ ಅವಮಾನಿಸಿದ ಘಟನೆ ನಡೆಯಿತು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಪಶು ಸಂಗೋಪನಾ ಇಲಾಖೆ ಹೊರತು ಪಡಿಸಿ ಇನ್ನುಳಿಗೆ ಕೆಲ ಇಲಾಖೆಗಳ ಸಿಬ್ಬಂದಿಗಳು ಸಭೆಯಲ್ಲಿದ್ದರು.ಪ್ರಮುಖವಾಗಿ ಸಮಾಜ ಕಲ್ಯಾಣ ಇಲಾಖೆ,ಪೊಲೀಸ್ ಇಲಾಖೆ,ಅರಣ್ಯ,ಲೊಕೋಪಯೋಗಿ,ತಾಲೂಕ ಪಂಚಾಯತಿ,ಅಕ್ಷರ ದಾಸೋಹ,ಸಾರ್ವಜನಿಕ ಶಿಕ್ಷಣ ಇಲಾಖೆ,ಕೃಷಿ ಇಲಾಖೆ,ತೋಟಗಾರಿಕೆ ಸೇರಿದಂತೆ ಪ್ರಮುಖ ಇಲಾಖೆಗಳ ಅನುಷ್ಠಾನಧಿಕಾರಿಗಳು ಬಾರದೆ ಸಭೆಗೆ ಅವಮಾನಿಸಿದಂತಿತ್ತು.ಇದರ ಕುರಿತು ಹೋರಾಟಗಾರ ಚಂದ್ರಶೇಖರ ನಾಯಕ ಬಿಚ್ಚಗತ್ತಿಕೇರಾ ಬೇಸರ ವ್ಯಕ್ತಪಡಿಸಿದರು.

ತಹಸಿಲ್ದಾರ್ ಕೆ.ವಿಜಯಕುಮಾರ ಅವರು ಸಭೆಗೆ ಬಾರದಿರುವ ಅಧಿಕಾರಿಗಳಿಗೆ ನೋಟಿಸ್ ನೀಡುವುದಾಗಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here