ತೆಗ್ಗು ಗುಂಡಿಯಲ್ಲಿ 21 ದಿನಗಳ ಉಪವಾಸ ಅನುಷ್ಠಾನ: ಕಲಬುರಗಿಯಲ್ಲಿ ವಿಶಿಷ್ಟ ಘಟನೆ

0
364

ಕಲಬುರಗಿ: ಶ್ರಾವಣಮಾಸದ ನಿಮಿತ್ತ ಭೂಮಿಯೊಳೆಗೆ ಐದು ಅಡಿ ಉದ್ದ ಮತ್ತು ಎತ್ತರದ ತೆಗ್ಗು ತಗೆದು ಅದರ ಆಳದಲಿ 21 ದಿನಗಳ ಕಾಲ ಉಪವಾಸ ಅನುಷ್ಠಾನ ಕುಂತಿರುವ ವಿಶಿಷ್ಟ ಘಟನೆ ಅಫಜಲಪೂರ ತಾಲ್ಲೂಕಿನ ಗೊಬ್ಬುರ (ಕೆ) ಗ್ರಾಮದ ಶ್ರೀ ಬೆಳ್ಳಿಗುತಿ ಪ್ರಸನ್ನ ದೇವಸ್ಥಾನದಲ್ಲಿ ನಡೆಯುತ್ತಿದೆ.

ಕುಮಾರ ಬಸವರಾಜ (ಬಸ್ಸು) ಹಣಮಂತ ಸಜ್ಜನ (27) ಅನುಷ್ಠಾನ ಕುಂತಿರುವರು ವ್ಯಕ್ತಿ ಹೇಳಲಾಗುತ್ತಿದೆ. ಲೋಕದ ಒಳತಿಗಾಗಿ ಶ್ರೀ ಬೆಳ್ಳಿ ಗುತ್ತಿ ದೇವಸ್ಥಾನದ ಆವರಣದಲ್ಲಿ ಐದು ಅಡಿ ಉದ್ದ ಎತ್ತರದ ತೆಗ್ಗು ತಗೆದು ಅದರ ಆಳದಲಿ ಉಪವಾಸ ಅನುಷ್ಠಾನ ಕುಂತು  ಒಂದು ವಾರ ಕಳೆದಿದೆ. ವಾರದ ಹಿಂದೆ ಭೂಮಿ ಅಗೆದು ಗುಂಡಿಯಲ್ಲಿ ಉಪವಾಸ ಅನುಷ್ಠಾನ ಕೈಗೊಂಡಿದ್ದು, ನಂತರ ಗುಂಡಿಯಲ್ಲಿ ಗಾಳಿ, ಬೆಳಕು ಪ್ರವೇಶಿಸದಂತೆ ಪರಸಿ ಕಲ್ಲುಗಳು ಹಾಕಿ ಮುಚ್ಚಲಾಗಿತ್ತು ಎನ್ನಲಾಗಿದೆ.

Contact Your\'s Advertisement; 9902492681

ಮೂರುದಿನಗಳ ಹಿಂದೆ ಗಾಣಗಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗುಂಡಿಯ ಮೇಲೆ ಹಾಕಲಾಗಿರುವ ಒಙದು ಪರಸಿಯನ್ನು ತೆಗೆದು ಅನುಷ್ಠಾನ ಕುಂತಿರುವ ಮುತ್ಯಾಗೆ ಉಸಿರಾಟದ ಸಮಸ್ಯೆ ಆಗದಂತೆ ಗಾಳಿ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಿ ಇಕ್ಷೀಸಿದ್ದಲ್ಲಿ ಅನುಷ್ಠಾನ ಮುಂದುವರೆಸಲು ತಿಳಿಸಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ ಹಿಂದೆಯು ಭೂಮಿಯ ಮೇಲೆ ಕುಂತು ಉಪವಾಸ ಅನುಷ್ಠಾನ ಕೈಗೊಂಡಿದ್ದರು, ಆದರೆ ಈ ಬಾರಿ ಭೂಮಿಯ ಒಳಗೆ ತೆಗ್ಗು ಗುಂಡಿಯನ್ನು ಅಗೆದು ಅನುಷ್ಠಾನ ಮಾಡುತ್ತಿರುವುದು ವಿಶಿಷ್ಟವಾಗಿರುವ ಘಟನೆ ಜರುಗುತ್ತಿದೆ.

ಈ ಘಟನೆ ತಿಳಿದು ಸುತ್ತ ಮುತ್ತಲಿನ ಗ್ರಾಮಗಳಿಂದ ನೂರಾರು ಜನರು ದಿನದಿಂದ ದಿನಾಲು ವಾಹನಗಳ ವ್ಯವಸ್ಥೆ ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದ್ದಾರೆ. ಈ ಅನುಷ್ಠಾನ ಪ್ರಕ್ರಿಯೆ 21 ದಿನದವರಿಗೆ ಯಾವುದೇ ಊಟ, ನೀರು ಸೇವಿಸದೆ ಉಪವಾಸ ಅನುಷ್ಠಾನ ಜರುಗಲಿದೆ ಎಂದು ತಿಳಿದುಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here