ಕಲಬುರಗಿ ಕನ್ನಡ ಭವನದಲ್ಲಿ 78 ನೇ ಸ್ವಾತಂತ್ರ್ಯೋತ್ಸವ 

0
97

ಕಲಬುರಗಿ: ಭಾರತ ಸ್ವಾಂತ್ರ್ಯ ಪಡೆಯಲು ಲಕ್ಷಾಂತರ ದೇಶಪ್ರೇಮಿಗಳ ಬಲಿದಾನ, ತ್ಯಾಗವಿದೆ. ಅಂಯಹ ಮಹಾನ್ ನಾಯಕರ ಇತಿಹಾಸವನ್ನು ತಿಳಿದುಕೊಂಡು ಇಂದಿನ ಯುವ ಜನತೆಗೆ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಜರುಗಿದ ಭಾರತದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪಡೆಯಲಿಕ್ಕೆ ಕನ್ನಡಿಗರ ಕೊಡುಗೆ ಅಪಾರವಾಗಿದೆ. ಕರ್ನಾಟಕದಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ಮಾಡುವ ಕಾರ್ಯ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತದೆ ಎಂದರು.

Contact Your\'s Advertisement; 9902492681

ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಪ್ರಮುಖರಾದ ಡಾ. ಅರುಣಕುಮಾರ ಲಗಶೆಟ್ಟಿ, ಡಾ. ಬಾಬುರಾವ ಪಾಟೀಲ, ಸಂತೋಷ ಕುಡಳ್ಳಿ, ಸೋಮಶೇಖರಯ್ಯ ಹೊಸಮಠ, ಪ್ರಭವ ಪಟ್ಟಣಕರ್, ಬಾಬುರಾವ ಪಾಟೀಲ, ರವೀಂದ್ರಕುಮಾರ್ರ ಭಂಟನಳ್ಳಿ, ನವಾಬ್ ಖಾನ್, ಸೈಯದ್ ನಜಿರುದ್ದೀನ್ ಮುತ್ತವಲಿ, ಮಹಾದೇವಪ್ಪ ಪಾಟೀಲ, ರಾಜೇಂದ್ರ ಮಾಡಬೂಳ, ಶಕುಂತಲಾ ಪಾಟೀಲ, ಗಣೇಶ ಚಿನ್ನಾಕಾರ, ಚಂದ್ರಕಾಂತ ಸೂರನ್, ನಾಗನ್ನಾಥ ಯಳಸಂಗಿ, ಡಾ. ರೆಹಮಾನ್ ಪಟೇಲ್, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ವಿನೋದ ಜೇನವೇರಿ, ಬಸಯ್ಯಾ ಸ್ವಾಮಿ, ಚಂದ್ರಶೇಖರ ಮ್ಯಾಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here