ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಕಲಿಕಾ ಸಾಮಗ್ರಿ ವಿತರಣೆ

0
70

ಆನೇಕಲ್: ಗಂಧದನಾಡು ಜನಪರ ವೇದಿಕೆ-ಗಜವೇ ಹೆಮ್ಮೆಯ ಕಾರ್ಯಕ್ರಮವಾದ “ಸಮಾಜಕ್ಕೆ ಮರಳಿ ನೀಡು” ಅಭಿಯಾನದ 2024ರ ಸಮಾರೋಪ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಆಫ್ ಚಂದಾಪುರ ನೋಬೆಲ್, ಲಯನ್ಸ್ ಕ್ಲಬ್ ಆಫ್ ರಾಗಿನಾಡು ಆನೇಕಲ್ ಹಾಗೂ ನಿಸರ್ಗ ಸೇವಾ ಟ್ರಸ್ಟ್ ಸಹಯೋಗದಲ್ಲಿ 78ನೇ ಸ್ವಾತಂತ್ರ್ಯ ದಿನದಂದು ಆನೇಕಲ್ ಗಡಿಭಾಗವಾದ ಚಿಕ್ಕ ಹೊಸಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿತ್ತು.

ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.ಲಯನ್ಸ್ ಕ್ಲಬ್ ಆಫ್ ರಾಗಿನಾಡು ಆನೇಕಲ್ ಅಧ್ಯಕ್ಷರಾದ ಶಾಮರಾಜ್ ಅರಸ್ ರವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಗಜವೇ ರಾಜ್ಯ ಸಹಕಾರ್ಯದರ್ಶಿ ಜಗದೀಶ್ ಅರಸು ರವರು ಪ್ರಾಸ್ಥಾವಿಕ ಮಾತುಗಳನ್ನಾಡಿದರು.

Contact Your\'s Advertisement; 9902492681

ಇಂಡ್ಲವಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಭಾಸ್ಕರ್, ಗಜವೇ ರಾಜ್ಯ ಖಜಾಂಚಿ ಬಂಡಾಪುರ ಶ್ರೀನಿವಾಸ್, ಲೆಕ್ಕ ಪರಿಶೋಧಕರಾದ ಮಹೇಶ್ ದಿವಾಕರ್, ಲಯನ್ಸ್ ಕ್ಲಬ್ ಆಫ್ ಚಂದಾಪುರ ನೋಬೆಲ್ ಅಧ್ಯಕ್ಷರಾದ ಮಧು ಕುಮಾರ್ ಹಾಗೂ ಹಳೇ ವಿದ್ಯಾರ್ಥಿ ವಿನಯ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಯ ಮುಂಭಾಗದಲ್ಲಿ ಗಜವೇ ಸಂಸ್ಥಾಪಕ ಅಧ್ಯಕ್ಷ ವಿಜಯರಾಮ, ಗಜವೇ ರಾಜ್ಯ ಕಾರ್ಯದರ್ಶಿ/ನಿಸರ್ಗ ಸೇವಾ ಟ್ರಸ್ಟ್ ಅಧ್ಯಕ್ಷ ದೇವರಾಜ್ ನಾಯ್ಕ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸ್ವಾಭಿಮಾನಿ ಸತೀಶ್, ಕಾರ್ಯದರ್ಶಿ ರಾಜೇಶ್, ಗಜವೇ ಪದಾಧಿಕಾರಿಗಳಾದ ಮಹಂತಲಿಂಗಾಪುರ ಮಂಜು, ಕೌಶಿಕ್ ರೆಡ್ಡಿ, ಅರ್ಜುನ್, ಕುಮಾರ್, ಲಯನ್ಸ್ ಕ್ಲಬ್ ಆಫ್ ರಾಗಿನಾಡು ಆನೇಕಲ್ ಪದಾಧಿಕಾರಿಗಳಾದ ಲಯನ್ ಮಹಾದೇವ, ಲಯನ್ ಶ್ರೀಧರ್ ಬಾಬು, ಲಯನ್ ಅಂಬರೀಷ್, ಲಯನ್ ಶಾಂತಾ, ಲಯನ್ ಶ್ಯಾಮಲಾ, ಲಯನ್ ನರಸಿಂಹಮೂರ್ತಿ, ಲಯನ್ ಅನುರಾಧಾ, ಗಜವೇ ಸದಸ್ಯರುಗಳಾದ ಅನಿಲ್, ಜೈಪಾಲ್, ಚರಣ್, ಶಾಲೆಯ ಶಿಕ್ಷಕ ವೃಂದ ಹಾಗೂ ಸಾರ್ವಜನಿಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here