ಸುರಪುರ: ನಗರದಲ್ಲಿನ ಐತಿಹಾಸಿಕ ಸ್ಮಾರಕಗಳ ಬಳಿ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ಆರ್.ಸಿ.ನಾಯಕ ಜನಸೇವ ಶೈಕ್ಷಣಿಕ ಟ್ರಸ್ಟ್ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಮೂರ್ತಿಯ ಸುತ್ತಲು ಸ್ವಚ್ಛತೆ ಇಲ್ಲದೆ ಕಲುಷಿತವಾಗಿದೆ.ಅಲ್ಲದೆ ಮೂರ್ತಿಯ ಸುತ್ತಲು ಭಿತ್ತಿ ಪತ್ರಗಳನ್ನು ಅಂಟಿಸಿ ಅಂದವನ್ನು ಹಾಳು ಮಾಡಲಾಗುತ್ತಿದೆ.ಆದ್ದರಿಂದ ಕೂಡಲೇ ಮೂರ್ತಿ ವೃತ್ತದ ಬಳಿ ಸದಾಕಾಲ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಮತ್ತು ಯಾವುದೇ ಪೋಸ್ಟರ ಅಂಟಿಸದಂತೆ ಎಚ್ಚರಿಕೆ ವಹಿಸಬೇಕು ಹಾಗೂ ವೃತ್ತದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ ನಗರದ ವೆಂಕಟಾಪುರಕ್ಕೆ ಹೋಗುವ ಮಾರ್ಗದಲ್ಲಿ ಡಿಗ್ಗಿ ಅಗಸಿ ಹತ್ತಿರ ಸ್ಥಳಿಯರು ಮಣ್ಣು ಕಸ ಹಾಗೂ ಇತರೆ ವಸ್ತುಗಳನ್ನು ಹಾಕಿ ಅದನ್ನು ಕಾಣದಂತೆ ಮಾಡುತ್ತಿದ್ದಾರೆ.ಕೂಡಲೇ ನಗರಸಭೆ ಅಧಿಕಾರಿಗಳು ಅದನ್ನು ತೆಗೆಯಿಸುವ ಕ್ರಮ ಕೈಗೊಳ್ಳಬೇಕು,ಮತ್ತು ನಗರದಲ್ಲಿನ ಎಲ್ಲಾ ಐತಿಹಾಸಿಕ ಸ್ಮಾರಕಗಳ ಬಳಿಯಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಂತರ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಆರ್.ಸಿ.ನಾಯಕ,ರಾಜಾ ದೇವೆಂದ್ರ ನಾಯಕ,ಅಬಿದ್ ಹುಸೇನ್ ಪಗಡಿ,ಯಂಕಪ್ಪ ಕೋಸಿಗಿ,ಶರೀಫ್ ಎಮ್,ಶ್ರೀಕಾಂತ ಹೂಗಾರ,ಹಣಮಂತ್ರಾಯ ಕಬಾಡಗೇರ,ಮಹಾದೇವಪ್ಪ ಮಡಿವಾಳ,ಮಹಿಬೂಬ ಪಟೇಲ್,ಸಾಲೇಸಾಬ ಅಗ್ನಿ,ಮಲ್ಲಪ್ಪ,ಪರಶುರಾಮ,ಹೊನ್ನಪ್ಪ,ಅಯ್ಯಾಳಪ್ಪ,ಈಶಪ್ಪ,ಬಸವರಾಜ ಗುಂಡಗುರ್ತಿ,ಮಲ್ಲಣ್ಣ ಗುಂಡಗುರ್ತಿ,ಕಲ್ಯಾಣ ಸ್ವಾಮಿ,ಚನ್ನಬಸಯ್ಯ ಹಿರೇಮಠ ಸೇರಿದಂತೆ ಅನೇಕರಿದ್ದರು.