ಯಾದಗಿರಿ: ಜಿಲ್ಲೆಯ ಗುರಮಿಠಕಲ್ ಮತಕ್ಷೇತ್ರದ ಎಸ್ ಹೊಸ್ಸಳ್ಳಿ ತಾಂಡದ ಸುರೇಶ ಚಂದ್ರು ರಾಠೋಡ ಸಿಡಿಲು ಬಡೆದು ಸಾವನಪ್ಪಿರುವ ಘಟನೆ ನಡೆದಿದೆ.
ಮೃತ ಕುಟುಂಬಕ್ಕೆ ಸಂಸದ ಡಾ. ಉಮೇಶ ಜಾಧವ್ ಅವರು ಭೇಟಿ ನೀಡಿ ಸಾಂತ್ವನ ಹೇಳಿ ತಕ್ಷಣವೇ ಸರ್ಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿ, ಸುರೇಶ ಕುಟುಂಬಕ್ಕೆ ಮುಖ್ಯಮಂತ್ರಿ ಯಡಿಯೂರಪಪ್ಪ 5 ಲಕ್ಷ ಪರಿಹಾರ ಒದಗಿಸುವ ಕ್ರಮಕೈಗೊಳುವುದಾಗಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಸೇರಿದಂತೆ ಗ್ರಾಮದ ಹಿರಿಯರು ಮತ್ತು ಕುಟುಂಬಸ್ಥರು ಇದ್ದರು.