ಶಹಾಪುರ : ತಾಲೂಕಿನ ಸಗರ ಗ್ರಾಮದ ಕಡಗುಡ ಮಠದ ಲಿಂಗೈಕ್ಯ ವೇ.ಗುರುಸ್ವಾಮಿ ಕಡಗುಡಮಠ ರವರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಎಂದೇ ಪ್ರಖ್ಯಾತಿಯನ್ನು ಗಳಿಸಿದ್ದರು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸನಗೌಡ ಮಾಲಿ ಪಾಟೀಲ್ ಹೇಳಿದರು.
ಸಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಇತ್ತೀಚಿಗೆ ನಮ್ಮನ್ನಗಲಿದ ಲಿಂ. ವೇ.ಗುರುಸ್ವಾಮಿ ಕಡಗುಡ ಮಠ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಪ್ರತಿಯೊಬ್ಬರನ್ನು ಸ್ನೇಹ ಪ್ರೀತಿಯಿಂದ ಕಾಣುತ್ತಿದ್ದರು ಎಂದು ಹೇಳಿದರು.
ಹಿರಿಯ ಸಾಹಿತಿ ಲಿಂಗಣ್ಣಪಡಶೆಟ್ಟಿ ಮಾತನಾಡಿ ಗುರುಸ್ವಾಮಿ ಅವರು ವ್ಯಕ್ತಿಗಳಾಗಿರಲಿಲ್ಲ,ಶಕ್ತಿಯಾಗಿದ್ದರು. ಮಂತ್ರ ಸಿದ್ಧಿಯ ಜೊತೆಗೆ ವಾಕ್ ಸಿದ್ದಿ ಪುರುಷರಾಗಿದ್ದರು.ಅಲ್ಲದೆ ಸರಳ ಜೀವನ ನಡೆಸಿ ಎಲ್ಲರಿಗೂ ಆದರ್ಶಮಯವಾಗಿದ್ದರು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಒಕ್ಕಲಿಗೇರಿ ಹಿರೇಮಠದ ಮರುಳ ಮಾಹಾಂತ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು,ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ನಾಗನಗೌಡ ಸುಬೇದಾರ,ತಿರುಪತಿ ಸೇರಿ,ಶಿವರುದ್ರಪ್ಪ ದೇಸಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ,ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ಈ ಕಾರ್ಯಕ್ರಮವನ್ನು ಶಿವಶರಣಪ್ಪ ನಾಗಲೋಟ ನಿರೂಪಿಸಿ ಸ್ವಾಗತಿಸಿ ವಂದಿಸಿದರು.