ಪ್ರತಿಯೊಬ್ಬರು ಬದುಕನ್ನು ಸಾರ್ಥಕ ಮಾಡಿಕೊಳ್ಳುವುದು ಅಗತ್ಯ

0
80

ಕಲಬುರಗಿ: ದೇವರು ಅಮೂಲ್ಯವಾದ ದೇಹವನ್ನು ನೀಡಿದ್ದಾನೆ. ಬದುಕು ಬೊಗಸೆಯಲ್ಲಿ ಹಿಡಿದಿಟ್ಟ ನೀರಿನಂತೆ. ಬಸಿದು ಹೋಗುವ ಮುನ್ನ ಬಳಸಬೇಕು ಪ್ರತಿಕ್ಷಣ ವ್ಯರ್ಥವಾಗದಂತೆ. ಸ್ವಾರ್ಥ ಜೀವನಕ್ಕಿಂತ ಪರೋಪಕಾರಿ ಜೀನವ ಶ್ರೇಷ್ಟವಾಗಿದೆ. ಪ್ರತಿಯೊಬ್ಬರು ಬದುಕಿನ ಮರ್ಮವನ್ನು ಅರ್ಥ ಮಾಡಿಕೊಂಡು ಸಾರ್ಥಕ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಆಳಂದ-ಎಲೆನಾವದಗಿ ಹಿರೇಮಠದ ಪೂಜ್ಯ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.

ಆಳಂದ ತಾಲೂಕಿನ ಎಲೆನಾವದಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ನೀಲಕಂಠಯ್ಯ ಬಿ.ಹಿರೇಮಠರ ವಯೋನಿವೃತ್ತಿ, ವರ್ಗಾವಣೆಗೊಂಡ ವಿಜಯಕುಮಾರ ಮುಣಜಿ ಹಾಗೂ ಗ್ರಾಮದ ನಿವೃತ್ತ ಸರ್ಕಾರಿ ನೌಕರರಿಗೆ ಶಾಲೆ, ಎಸ್.ಡಿ.ಎಂ.ಸಿ ಹಳೆ ವಿದ್ಯಾರ್ಥಿಗಳ ಸಂಘ, ಕಾಯಕಯೋಗಿ ಸೇವಾ ಸಂಸ್ಥೆ ಮತ್ತು ಸಮಸ್ಥ ಗ್ರಾಮಸ್ಥರ ವತಿಯಿಂದ ಶಾಲಾ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ‘ಅಭಿನಂದನಾ ಸಮಾರಂಭ’ವನ್ನು ಉದ್ಘಾಟಿಸಿ ಅವರು ಆಶಿರ್ವಚನ ನೀಡಿದರು.

Contact Your\'s Advertisement; 9902492681

ವಿಶೇಷ ಉಪನ್ಯಾಸ ನೀಡಿದ ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಎಚ್.ಬಿ.ಪಾಟೀಲ, ನೌಕರ ತಾನು ಸೇವೆ ಸಲ್ಲಿಸುವ ಸ್ಥಳದಲ್ಲಿ ಬೀಳ್ಕೊಡುಗೆಗೊಳ್ಳುವುದು ವಾಡಿಕೆ. ಆದರೆ ತಾನು ಸಲ್ಲಿಸಿದ ಎಲ್ಲಾ ಸ್ಥಳಗಳಲ್ಲಿ ಗೌರವ ಪಡೆಯುವುದು ವಿಶಿಷ್ಟವಾಗುತ್ತದೆ. ಸರ್ಕಾರಿ ಸೇವೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಎಲೆನಾವದಗಿ ಗ್ರಾಮದವರಿಗೆ ‘ಗ್ರಾಮ ಸನ್ಮಾನ’ ಮಾಡಿರುವುದು ಒಳ್ಳೆಯ, ಅನುಕರಣೀಯ ಪದ್ದತಿಯಾಗಿದೆ. ಶೈಕ್ಷಣಿಕ ಬಎಳವಣಿಗೆಯಲ್ಲಿ ಸಮುದಾಯದ ಪಾತ್ರವನ್ನು ಮನಗಂಡ ಇಲ್ಲಿನ ಜನರು, ಶಾಲೆಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ತಾಲೂಕಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ತಾಲೂಕಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ನಿವೃತ್ತ ಶಿಕ್ಷಕ ನೀಲಕಂಠಯ್ಯ ಬಿ.ಹಿರೇಮಠ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಯಕಯೋಗಿ ಸೇವಾ ಸಂಸ್ಥೆ ವತಿಯಿಂದ ನೀಲಕಂಠಯ್ಯ ಬಿ.ಹಿರೇಮಠರಿಗೆ ‘ಕಾಯಕ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸರ್ಕಾರಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಗ್ರಾಮದವರಾದಆನಂದರಾಯ ಶೇರಿಕಾರ, ಶಿವಾನಂದ ಎಸ್.ರಡ್ಡಿ, ಮಲ್ಲಿಕಾರ್ಜುನ ಬಿ.ಬಿರಾದಾರ, ನಾಗೇಂದ್ರರಡ್ಡಿ ಎ.ಪೊಲೀಸ್ ಪಾಟೀಲ, ರಾಮಚಂದ್ರ ಈ.ಹಾದಿಮನಿ, ನಾಗೀಂದ್ರಪ್ಪ ಆರ್.ಭಜಂತ್ರಿ, ಕುಪೇಂದ್ರ ಎಸ್.ಮಾಲಿಪಾಟೀಲ, ತುಕಾರಾಮ ಎ.ಚೌಕೆ, ಶರಣಪ್ಪ ಕೆ.ಬಿಲಗುಂದಿ ಅವರಿಗೆ ಗ್ರಾಮ ಸನ್ಮಾನ ಜರುಗಿತು.

ಕಾರ್ಯಕ್ರಮದಲ್ಲಿ ತಾಲೂಕಾ ದೈಹಿಕ ಶಿಕ್ಷಣ ಅಧಿಕಾರಿ ಅರವಿಂದ ಎಚ್.ಭಾಸಗಿ, ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ಕುಕಲರ್ಣಿ, ಶಾಲೆಯ ಮುಖ್ಯ ಶಿಕ್ಷಕ ಶಿವಾನಂದ ಯಳಮೇಲಿ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸೂರ್ಯಕಾಂತ ಎಸ್.ಕೌಂಟೆ, ಗ್ರಾಪಂ ಸದಸ್ಯ ಮಲ್ಲಿನಾಥ ಪೋಳೆ, ಪ್ರಮುಖರಾದ ಶಂಕ್ರೆಮ್ಮ ಎನ್.ಹಿರೇಮಠ, ಶ್ರೀಧರ ಎನ್.ಹಿರೇಮಠ, ಬಂಡಯ್ಯ ಶಾಸ್ತ್ರಿ, ಸಿದ್ದಯ್ಯ ಶಾಸ್ತ್ರೀ, ಶಿವಯೋಗೆಪ್ಪಾ ಎಸ್.ಬಿರಾದಾರ, ಅಣ್ಣಾರಾಯ ಎಚ್.ಮಂಗಾಣೆ, ಕೇದರನಾಥ ಕುಲಕರ್ಣಿ, ಶರಣಬಸಪ್ಪ ಪವಾಡಶೆಟ್ಟಿ, ವಿನೋದ ಮಡಿವಾಳ, ಸಿದ್ದರಾಮ ಕುಲಕರ್ಣಿ, ನಾಗೇಂದ್ರಪ್ಪ ಪಾಟೀಲ, ಕರಬಸಪ್ಪ ಮಡಿವಾಳ, ಶಿವಲಿಂಗಪ್ಪ ಹಾದಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here