ಕಲಬುರಗಿ: ಪ್ರಸ್ತುತ 2024ನೇ ಸಾಲಿನ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಗೆ 371ನೇ ಕಲಂ ಸೇರಿದಂತೆ, ಕಲ್ಯಾಣ ಕರ್ನಾಟಕದ ಸವಾರ್ಂಗೀಣ ಪ್ರಗತಿಗೆ ದಶಕಗಳಿಂದ ಯಶಸ್ವಿ ಹೋರಾಟ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ ಹೋರಾಟಗಾರರು ಮತ್ತು ನಿಸ್ವಾರ್ಥವಾಗಿ ಸಾಮಾಜ ಸೇವೆಗೆ ತೊಡಗಿಸಿಕೊಂಡು ದಶಕಗಳಿಂದ ಅಭಿವೃದ್ಧಿ ಪರ ಹೋರಾಟ ಮಾಡುತ್ತಾ ಬರುತಿರುವ ಲಕ್ಷ್ಮಣ ದಸ್ತಿಯವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿರುವುದು ಸಂತಸ ತಂದಿದೆ ಎಂದು ಉರ್ದು ಸಾಹಿತಿ ಮತ್ತು ಹಿರಿಯ ಪತ್ರಕರ್ತರಾದ ಅಜೀಜುಲ್ ಸರಮರಸ್ತ ರವರು ಹೇಳಿದರು.
ಕಲಬುರ್ಗಿ ನಗರದ ರಿಂಗ್ ರೋಡ್ ನಲ್ಲಿ ಬರುವ ಮುಜೀಬ ಅಲಿ ಖಾನ್ ಮ್ಯೂಜಿಯಂ ಸಭಾಂಗಣದಲ್ಲಿ ವಿವಿಧೋದ್ದೇಶ ಸಾಮಾಜ ಸೇವಾ ಸಮಿತಿಯ ವತಿಯಿಂದ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತ್ನಾಡಿದ ಸರಮರಸ್ತರವರು ದಸ್ತಿಯವರಿಗೆ ನೀಡಿರುವ ಗೌರವ ಡಾಕ್ಟರೇಟ್ ದಿಂದ ಸೇರಿದಂತೆ ಕಲ್ಯಾಣ ಕರ್ನಾಟಕದ ಎಲ್ಲಾ ಕ್ಷೇತ್ರದ ಜನರಿಗೆ ಬಹಳ ಸಂತೋಷ ತಂದಿದೆ ಎಂದರು.
ಡಾ.ರಹೇಮಾನ ಪಟೇಲ್ ಮಾತ್ನಾಡಿ ತಡವಾಗಿಯಾದರೂ ಪರವಾಗಿಲ್ಲ ಸೈದ್ಧಾಂತಿಕ ತಳಹದಿಯ ಮೇಲೆ ಪ್ರಾಮಾಣಿಕವಾಗಿ ಹೋರಾಟ ಮಾಡಿಕೊಂಡು ಬರುತಿರುವ ಹೋರಾಟಗಾರ ಲಕ್ಷ್ಮಣ ದಸ್ತಿಯವರಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಅವರ ನಿಸ್ವಾರ್ಥ ಸಾಮಾಜ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿರುವದಕ್ಕೆ ಭರಿಸಲಾರದಷ್ಟು ಆನಂದ ತಂದಿದೆ ಎಂದರು.
ಈ ಸಂದರ್ಭದಲ್ಲಿ ಅಯಾಜೂದ್ದಿನ್ ಪಟೇಲ್,ಡಾ.ರಫೀಕ ಕಮಲಾಪುರಿ, ಪೆÇ್ರ.ಬಸವರಾಜ ಕುಮ್ಮನೂರ್, ಮುಜೀಬ ಅಲಿ ಖಾನ್, ಮಕ್ಬೂಲ್ ಅಹ್ಮದ್ ನಾಯರ್,ಗಝನ್ಪರ್ ಇಕ್ಬಾಲ್, ಅಸ್ಲಂ ಚೌಂಗೆ,ಮಹ್ಮದ್ ಇದ್ರೀಸ್,ಮಂಜೂರ್ ವಿಗರ್,ಮುಖೀಮ ಬಾಬಾ ತಾರೀಖ ಅಜೀಜುಲ್,ಮೈನೋದ್ದಿನ್ ಕಲ್ಯಾಣಕರ್,ವಹೀಮ ಅರೀಫ ಸೇರಿದಂತೆ ಅನೇಕರು ಭಾಗವಹಿಸಿ ಮಾತ್ನಾಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವಿವಿಧೋದ್ದೇಶ ಸಾಮಾಜ ಸೇವಾ ಸಮಿತಿಯ ಅಧ್ಯಕ್ಷರಾದ ಸಾಜೀದ ಅಲಿ ರಂಜೊಳ್ವಿರವರು ಮಾತ್ನಾಡಿ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ನಿರಂತರ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಎಲ್ಲಾ ಕ್ಷೇತ್ರದ ಜನರಿಗೆ ಸೇರಿಸಿ ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಶುದ್ಧ ರಾಜಕೀಯೇತರ ತಳಹದಿಯ ಮೇಲೆ ನಿರಂತರ ಸಾಮಾಜ ಸೇವೆಗೆ ತೊಡಗಿಸಿಕೊಂಡು ದಶಕಗಳಿಂದ ಅಭಿವೃದ್ಧಿ ಪರ ಹೋರಾಟ ನಡೆಸಿಕೊಂಡು ಬರುತ್ತಿರುವ ಹೋರಾಟಗಾರ ಲಕ್ಷ್ಮಣ ದಸ್ತಿಯವರಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿರುವುದು, ಭವಿಷ್ಯದಲ್ಲಿ ಸೈದ್ಧಾಂತಿಕ ತಳಹದಿಯ ಮೇಲೆ ಪ್ರಾಮಾಣಿಕ ಹೋರಾಟ ಮಾಡಲು ಇದು ಒಂದು ಮೈಲಿಗಲ್ಲು ಮತ್ತು ಪ್ರೇರಣೆಯಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಕಲಬುರಗಿ ಉತ್ತರ ಮತ ಕ್ಷೇತ್ರದ ಗಣ್ಯರು, ಚಿಂತಕರು ಆಯಾ ಕ್ಷೇತ್ರದ ಜನರು ಭಾಗವಹಿಸಿದರು.