ಶ್ರೀ ರೇವಣಸಿದ್ದೇಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ನಾಳೆ

0
164

ಕಲಬುರಗಿ: ಧಾರ್ಮಿಕ ದತ್ತಿ ಇಲಾಖೆಯ ಕಾಳಗಿ ತಾಲ್ಲೂಕಿನ ರೇವಗ್ಗಿ ರಟಕಲ್ ಶ್ರೀ ರೇವಣಸಿದ್ದೇಶ್ವರ ಗುಡ್ಡದಲ್ಲಿ ನಾಳೆ ಶ್ರಾವಣ ಮಾಸದ ನಡುವಿನ ಸೋಮವಾರ ನಿಮಿತ್ತ 4;30 ಬೆಳ್ಳಿ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಜರುಗಲಿದೆ.

ರಟಕಲ್ ಗ್ರಾಮದ ಶ್ರೀರೇವಣಸಿದ್ದೇಶ್ವರ ಹಿರೇಮಠದಿಂದ ವಾದ್ಯ ವೃಂದ ಭಜನೆ ಡೊಳ್ಳು ದೊಂದಿಗೆ ಗುಡ್ಡದ ಗರ್ಭಗುಡಿಗೆ ತೆರಳಿ ಶ್ರೀ ರುದ್ರಶೇಟ್ಟಿ ಗುರಮಿಠಕಲ್ ರಟಕಲ್ ಅವರು ಪವಿತ್ರ ಶ್ರೀರೇವಣಸಿದ್ದೇಶ್ವರವರ ಮೂರ್ತಿ ಗರ್ಭಗುಡಿಯಿಂದ ಪಲ್ಲಕ್ಕಿಯಲ್ಲಿ ಇಟ್ಟು ಶ್ರೀರೇವಣಸಿದ್ದೇಶ್ವರ ಮಹಾರಜ ಕೀ ಜೈ ಎನ್ನುವ ಘೋಷವಾಕ್ಯಗಳೊಂದಿಗೆ ಮೆರವಣಿಗೆ ನಡೆಯಲಿದೆ.

Contact Your\'s Advertisement; 9902492681

ಈ ಪಲ್ಲಕ್ಕಿ ಉತ್ಸವದಲ್ಲಿ ಲಕ್ಷಾಂತರ ಭಕ್ತರು ದರ್ಶನ ಮಾಡಿ ಬಾಳೆಹಣ್ಣು ಟ್ಯಾಂಗು, ಉತತ್ತಿ ದೇವರಿಗೆ ಸಮರ್ಪಣೆ ಮಾಡಿ ಪ್ರಸಾದ ಹಂಚಿ ದಾಸೋಹ ಮಾಡಿ ತಮ್ಮ ಹರಕೆಯನ್ನು ತೀರಿಸಿಕೊಂಡು ಪುನೀತರಾಗುತ್ತಾರೆ.

ಶ್ರೀ ರೇವಣಸಿದ್ದೇಶ್ವರ ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಕಾಳಗಿ ತಾಲ್ಲೂಕಿನ ರೈತ ಸೇನೆ ಅಧ್ಯಕ್ಷರಾದ ವೀರಣ್ಣ ಗಂಗಾಣಿ ಅವರು ಭಕ್ತಾದಿಗಳಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಸ್ವಾಗತ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here