ಗಾಣಿಗ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳು ನೊಂದಣಿಗೆ ಮನವಿ

0
326

ಕಲಬುರಗಿ: ಜಿಲ್ಲಾ ಗಾಣಿಗ ನೌಕರದ ಕಲ್ಯಾಣ ಸಂಘ(ರಿ) ಕಲಬುರಗಿ .ಸಂಘದ ಪ್ರತಿವರ್ಷದಂತೆ ಈ ವರ್ಷವೂ 2024 – 25 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗುತ್ತದೆ.

ಸಮಸ್ತ ಜಿಲ್ಲಾ ಗಾಣಿಗ ಕುಲಬಾಂಧವರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ 2023 – 24ನೇ ಸಾಲಿನ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ 80% ಕ್ಕಿಂತ ಹೆಚ್ಚು ಮತ್ತು ಪಿ.ಯು.ಸಿ.ಯಲ್ಲಿ 85% ಹೆಚ್ಚು ಅಂಕವನ್ನು ಪಡೆದ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ನೌಕರರ ಕಲ್ಯಾಣ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಸರನ್ನು ನೋಂದಾಯಿಸುವ ಕೊನೆಯ 30 ನಿಗದಿಯಾಗಿರುತ್ತದೆ.ಸಮಾಜದ ಎಲ್ಲಾ ಕುಲಬಾಂಧವರು ಆದಷ್ಟು ಬೇಗ ಬೇಗನೆ ತಮ್ಮ ಮಕ್ಕಳ ಹೆಸರನ್ನು ಎಂ. ಎನ್. ದೇಸಾಯಿ ಪ್ರಥಮ ದರ್ಜೆ ಕಾಲೇಜು. ಯಾತ್ರಿಕ ನಿವಾಸ ಹೋಟೆಲ್ ಹಿಂದುಗಡೆ ಜೇವರ್ಗಿ ರಸ್ತೆ ಈ ಸ್ಥಳದಲ್ಲಿ ಹೆಸರನ್ನು ನೋಂದಾಯಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ‌. ಹೆಚ್ಚಿನ ಮಾಹಿತಿಗಾಗಿ ಸಂದೀಪ ದೇಸಾಯಿ 9611148555, ರುದ್ರಗೌಡ ಪಾಟೀಲ ಯತ್ನಾಳ, 9880280286 ಮಹದೇವ ದ್ಯಾಮ 9972080867, ಗುರು ಮುದ್ದಾ ನೆಲೋಗಿ 9900948848, ಶಂಕರಲಿಂಗ ಕಲಶೆಟ್ಟಿ 9880351809 ಇವರನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಎಂದು ಅಧ್ಯಕ್ಷರಾದ ಸಂಗನಗೌಡ ಎಚ್. ಪಾಟೀಲ ಕಲ್ಲೂರ ಮತ್ತು ಕಾರ್ಯದರ್ಶಿಗಳು ಹಾಗೂ ಸಂಘದ ಸದಸ್ಯರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here