ಸುರಪುರ: 12ನೇ ಶತಮಾನದ ಬಸವಾದಿ ಶರಣರ ಸವiಕಾಲಿನ ಶರಣರಲ್ಲಿ ನುಲಿಯ ಚಂದಯ್ಯನವರು ಕಾಯಕ ಜೀವಿ ಶರಣರಾಗಿದ್ದರು ಎಂದು ತಹಸಿಲ್ದಾರ್ ಕೆ.ವಿಜಯಕುಮಾರ ತಿಳಿಸಿದರು.
ತಾಲೂಕ ಆಡಳಿತ ದಿಂದ ನಗರದ ತಹಸಿಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ನುಲಿಯ ಚಂದಯ್ಯನವರು ಕಾಯಕಕ್ಕೆ ಕೊಟ್ಟಿರುವ ಮಹತ್ವ ದಿಂದ ಅವರ ಹೆಸರು ಇಂದಿಗೂ ಅಜರಾಮರವಾಗಿದೆ.ಬಸವಾದಿ ಶರಣರು ತಮ್ಮ ವಚನಗಳ ಮೂಲಕ ನೀಡಿದ ಸಂದೇಶವು ಎಲ್ಲರು ಬದುಕಿನಲ್ಲಿ ಅಳವಡಿಸಿಕೊಂಡು ಶರಣರು ಕನಸು ಕಂಡಿದ್ದ ಸಮ ಸಮಾಜ ನಿರ್ಮಾಣದ ಕನಸು ನನಸು ಮಾಡಬೇಕು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು.ಈ ಸಂದರ್ಭದಲ್ಲಿ ಭಾಗವಹಿಸಿದ್ದ ಎಲ್ಲರು ಪುಷ್ಪಾರ್ಚನೆ ಮಾಡಿ ಘೋಷಣೆಗಳನ್ನು ಕೂಗಿ ಜಯಂತಿ ಆಚರಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ-2 ತಹಸಿಲ್ದಾರ್ ಮಲ್ಲಯ್ಯ ದಂಡು,ಶ್ರೀನಿವಾಸ ಕುಲಕರ್ಣಿ,ಅಶೋಕ ಸೊನ್ನದ್,ಭೀಮರಾಯ ಯಾದವ್ ನಿಸರ್ಗ,ಕಾವ್ಯ,ಶ್ವೇತಾ,ಸೀಮಾದೇವಿ ಹಾಗೂ ಸಮಾಜದ ಮುಖಂಡರಾದ ಭೀಮರಾಯ ಭಜಂತ್ರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.