ಕಲಬುರಗಿ: ದಿ. ಡಿ. ದೇವರಾಜ್ ಅರಸು ಒಬ್ಬ ಮುತ್ಸದ್ಧಿ ರಾಜಕಾರಣೆಯಾಗಿದ್ದರು ಬಡವರ ಮತ್ತು ಹಿಂದುಳಿದ ವರ್ಗದ ಏಳಿಗೆಗಾಗಿ ರಾಜ್ಯಕ್ಕೆ ಅನೇಕ ಕೊಡುಗೆ ನೀಡಿದರು ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಮಂಗಳವಾರದಂದು ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಲಬುರಗಿ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಡಿ ದೇವರಾಜ ಅರಸುರವರ 109ನೇ ಜನ್ಮದಿನಾಚರಣೆಯ ಅಂಗವಾಗಿ ದಿ. ಡಿ.ದೇವರಾಜ್ ಅರಸು ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಶಿಕ್ಷಣದಲ್ಲಿ ಅನೇಕ ಬದಲಾವಣೆಗಳನ್ನು ತಂದು ಹಿಂದುಳಿದ ವರ್ಗಗಳಿಗೆ ಸಿಗುವಂತಹ ಸೌಲಭ್ಯಗಳನ್ನು ಕಲ್ಪಿಸಿದರು. ಅವರು ಒಂಬತ್ತು ವರ್ಷ ಮುಖ್ಯಮಂತ್ರಿಯಾಗಿದ್ದರು. ಅದೇ ರೀತಿ ನಮ್ಮ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನೇಕ ಯೋಜನೆಗಳು ಜಾರಿಗೆ ತಂದಿದ್ದಾರೆ ಎಂದರು
ರಾಜ್ಯ ಸರ್ಕಾರ 5 ಗ್ಯಾರಂಟಿಗಳನ್ನು 5 ತಿಂಗಳ ಒಳಗೆ ಜಾರಿಗೊಳಿಸಿ ಕೊಟ್ಟ ಮಾತನ್ನು ಉಳಿಸಿಕೊಂಡ ಮುನ್ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಈ ಇಬ್ಬರು ನೇತೃತ್ವದ ನಮ್ಮ ರಾಜ್ಯ ಸರ್ಕಾರದ ಒಳ್ಳೆಯ ರೀತಿಯಲ್ಲಿ ಆಡಳಿತ ನೀಡುತ್ತಿದೆ. ಎಂದರು
ಭ್ರಷ್ಟಚಾರ ಮಾಡದೆ ಸರ್ವರ ಕಲ್ಯಾಣಕ್ಕಾಗಿ.ಶ್ರಮಿಸಿದ ಮಹಾನಾಯಕ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ ರಾಜಕಾರಣಿಗಳು ಯಾರು ಇದ್ದರೆ ಅದು ಎಸ್ ನಿಜಲಿಂಗಪ್ಪ ಹಾಗೂ ಡಿ ದೇವರಾಜ ಅರಸುರವರಿಗೆ.ಸಲ್ಲುತ್ತದೆ ಎಂದರು.
ವಿಧಾನ ಪರಿಷತ್ತಿನ ಸದಸ್ಯರಾದ ತಿಪ್ಪಣಪ್ಪ ಕಮಕನೂರ ಅವರು ಮಾತನಾಡಿ, ದೇವರಾಜ ಅರಸುರವರ ಭವನವನ್ನು ಕೆ.ಕೆ.ಆರ್.ಡಿ.ಬಿಯಿಂದ 5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ಅಲ್ಲಮ್ ಪ್ರಭು ಅವರಿಗೆ ಹೇಳುತ್ತೇನೆ ಎಂದರು.
ಬಡವರಿಗಾಗಿ ದೀನದಲಿತರಿಗಾಗಿ ಅನೇಕ ಯೋಜನೆಗಳು ಜಾರಿಗೆ ತಂದರು ಸಾಮಾಜಿಕ ಕಾರ್ಯಕರ್ತ ಎಸ್.ಕೆ. ಕಾಂತ ಅವರಿಗೆ ದೇವರಾಜ್ ಪ್ರಶಸ್ತಿ ನೀಡಿದಕ್ಕಾಗಿ ನಮಗೆ ಸಂತೋಷ ತಂದಿದೆ ಎಂದರು.
ಸೇಡಂ ತಾಲ್ಲೂಕಿನ ನೃಪತುಂಗ ನಿವೃತ್ತ ಪ್ರಾಧ್ಯಾಪಕರಾದ ಡಾ.ಚಂದ್ರಕಲಾ ಬಿದರಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಹಿಂದೂಳಿದ ವರ್ಗದ ದಿನದಲಿತ, ಬಡವರ ಕನಸು ನನಸು ಮಾಡಿದ ವ್ಯಕ್ತಿ ದೇವರಾಜ ಅರಸು ಮಲಹೊರವ ಪದ್ಧತಿಯಿಂದ ಸಾವಿರಾರು ಜನರನ್ನು ವಿಮುಕ್ತ ಮಾಡಿ ಹೊಸ ಬದುಕನ್ನು ಕಟ್ಟಿಕೊಟ್ಟಿದ ಮಹಾನಾಯಕ ಅರಸುರವರಿಗೆ ಸಲ್ಲುತ್ತದೆ ಎಂದು ಸಂಕ್ಷಿಪ್ತ ಮಾಹಿತಿ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಪ್ರಭುದೊರೆ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ 1 ಲಕ್ಷ ಸಹಾಯಧನ ಇಬ್ಬರು ಫಲಾನುಭವಿಗಳಿಗೆ ಸುದೀಪ್ ತಂದೆ ಚಂದ್ರಕಾಂತ, ಪ್ರವೀಣಕುಮಾರ ತಂದೆ ಶಾಂತಪ್ಪ ದಿ.ಡಿ. ದೇವರಾಜ ಅರಸು ನಿಗಮದಿಂದ ನೀಡಲಾಯಿತು.
2023-24ನೇ ಸಾಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ಸೇಡಂ ತಾಲ್ಲೂಕಿನ ಮಳಖೇಡ ಮೆಟ್ರಿಕ್ ಪೂರ್ವ ಮೂರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿ ಗೌಡೇಶ, ಮೆಟ್ರಿಕ್ ಪೂವ ಮೂರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ಭಾಗ್ಯಶ್ರಿ ಭಂಡಾರಿ, ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿಹೆಚ್ಚು. ಆಳಂದ ತಾಲ್ಲೂಕಿನ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ನಿಂಬರ್ಗಾ,ದ ಶಿವಕುಮಾರ, ತಂದೆ ವಿಶ್ವನಾಥ, ಸೇಡಂ ತಾಲೂಕಿನ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಶ್ರೀದೇವಿ ತಂದೆ ವಿಜಯಕುಮಾರ, ಆಳಂದ ತಾಲೂಕಿನ ಲಕ್ಷ್ಮಿ ತಂದೆ ನಾಗಪ್ಪ, ಬಾಲಕರ ಶಿವಕುಮಾರ ತಂದೆ ಕಲ್ಯಾಣಿ, ಪದವಿ ಪೂರ್ವ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಕಲಬುರಗಿ ತಾಲ್ಲೂಕಿನ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ಶಾಂತಿನಗರ ಕಲಬುರಗಿ ಜ್ಯೋತಿ ತಂದೆ ಅಶೋಕ ಬುಕಾ, ಬಾಲಕರ ವಸತಿ ನಿಲಯ ಮಮತಾ ಎಸ್. ಸ್ನಾತಕೋತ್ತರ ಬಾಲಕಿಯರ ವಸತಿ ನಿಲಯದ ಆನಂದಮ್ಮ ದೇವಿಂದ್ರಪ್ಪ, ಬಾಲಕರ ವಸತಿ ನಿಲಯದ ಅಂಬಿಕಾ ಮಲ್ಲಣ್ಣ, ಪ್ರಶಸ್ತಿ ಪತ್ರಗಳನ್ನು ನೀಡಿದರು.
ವೇದಿಕೆ ಮೇಲೆ ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ, ಜೆಸ್ಕಾಂ ಪ್ರಧಾನ ವ್ಯವಸ್ಥಾಪಕ ಆಶಪ್ಪ ಪೂಜಾರಿ, ದಿ. ಡಿ. ದೇವರಾಜ್ ಅರಸ್ ನಿಗಮ ಮಂಡಳಿಯ ವ್ಯವಸ್ಥಾಪಕ ಜಗದೇವಪ್ಪ ಮೂಗವಿ,ಕರ್ನಾಟಕ ರಾಜ್ಯ ಹಿಂದಳಿದ ಜಾತಿಗಳ ಒಕ್ಕೂಟ ಜಿಲ್ಲಾಧ್ಯಕ್ಷರಾದ ಮಹಾಂತೇಶ ಎಸ್. ಕೌಲಗಿ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆನಂದ ವಾರಿಕ, ಉಪಸ್ಥಿತರಿದ್ದರು.
ವಿವಿಧ ಕಲಾ ತಂಡಗಳಿಂದ ಸರ್ದಾರ ವಲ್ಲಭ ಬಾಯಿ ಪಟೇಲ್ ವೃತ್ತದಿಂದ ಡಾ. ಎಸ್. ಎಂ. ಪಂಡಿತ ರಂಗಮAದಿರವರೆಗೆ ಡೊಳ್ಳು ಕುಣಿತ ಅನೇಕ ಕಲಾವಿದರಿಂದ ನೃತ್ಯಗಳನ್ನು ಮೂಲಕ ಆಗಮಿಸಿದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.