ಕಲಬುರಗಿ: ಆ. 25 ರಂದು ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ 27 ಸ್ಥಾನಗಳಿಗೆ ( ಪುರುಷರು ) ಕಾರ್ಯನಿರ್ವಾಹಕ ಸಮಿತಿಯ ಚುನಾವಣೆಗೆ ಒಟ್ಟು 57ಜನ ಕಣದಲ್ಲಿದ್ದಾರೆ. ಕಲಬುರಗಿ ಜಿಲ್ಲೆಯ ಮೂರು ಜನ ರಾಜಶೇಖರ ಸೀರಿ, ಶಶಿಕಾಂತ ಪಾಟೀಲ ಹಾಗೂ ಸಂತೋಷ ಪಾಟೀಲ್ ಸರಡಗಿ ಇವರು ಕಣದಲ್ಲಿದ್ದಾರೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ತಿಳಿಸಿದರು.
ಈಗಾಗಲೇ ರಾಜ್ಯ ಘಟಕದ ಅಧ್ಯಕ್ಷರಾಗಿ ಶಂಕರ ಬಿದರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಘಟಕದ ಕಾರ್ಯಕಾರಿ ಸಮಿತಿಗೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಹಾಗೂ ಚಂದು ಪಾಟೀಲ್ ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂಜ್ಯ ಹಾನಗಲ್ ಕುಮಾರಸ್ವಾಮಿಯವರು 1904ರಲ್ಲಿ ಸ್ಥಾಪಿಸಿದರು. ಅಂದಿನಿಂದ ಪೂಜ್ಯ ಶ್ರೀ ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪನವರು, ಈಶ್ವರ ಖಂಡ್ರೆ ಅವರು ಹಾಗೂ ಅನೇಕರು ಸಮಾಜದ ಎಲ್ಲಾ ಒಳ ಪಂಗಡದವರನ್ನು ತೆಗೆದುಕೊಂಡು ಎಲ್ಲಾ ಪೂಜ್ಯರುಗಳ ಆಶೀರ್ವಾದ, ಗಣ್ಯರ ಸಹಕಾರದಿಂದ ಮುನ್ನಡೆಸುತ್ತಿದ್ದಾರೆ. ಇಲ್ಲಿಯವರೆಗೂ ಮಹಾಸಭಾವು ಅನೇಕ ಸಮಾಜ ಪರ ಕಾರ್ಯಕ್ರಮಗಳನ್ನು ಮಾಡಿದೆ. ಇಂದು ಅನೇಕ ಜಿಲ್ಲೆಗಳಲ್ಲಿ ಬಾಲಕ ಬಾಲಕಿಯರ ವಸತಿ ನಿಲಯಗಳನ್ನು ನಿರ್ಮಿಸಿದೆ. ಅದರಲ್ಲಿ ನಮ್ಮ ಜಿಲ್ಲಾ ಘಟಕವು ಕಲಬುರಗಿಯಲ್ಲಿ ಎಲ್ಲರ ಸಹಕಾರದಿಂದ ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಾಲಕಿಯರ ವಸತಿ ನಿಲಯವು ಒಂದು ಎಂದರು.
ಮಹಾಸಭಾದ ರಾಜ್ಯ ಘಟಕದ ಚುನಾವಣೆಗೆ ರಾಜ್ಯದಲ್ಲಿ ಸುಮಾರು ಮೂವತ್ತೊಂದು ಸಾವಿರ ಮತದಾರಿದ್ದಾರೆ. ಅದರಲ್ಲಿ ಕಲಬುರಗಿ ಜಿಲ್ಲೆಯಲ್ಲಿ 1933 ಮತದಾರರು ಇರುವರು ಮತದಾನವು 25ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉದ್ಯಾನ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಅಂದು ಸಮಾಜದ ಎಲ್ಲಾ ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಬೇಕಾಗಿ ವಿನಂತಿಸಿದರು.
ಸೋಮಶೇಖರ ಹಿರೇಮಠ, ರಾಜಶೇಖರ ಸೀರಿ, ಶರಣು ಪಪ್ಪಾ, ಡಾ.ಸುಧಾ ಹಾಲಕಾಯಿ, ಶಶಿಕಾಂತ ಪಾಟೀಲ, ರವಿ ಕೋಳಕೂರ ಇತರರಿದ್ದರು.