ಕಲಬುರಗಿ: ನಾಳೆ ಕರ್ಮಯೋಗಿ ದಿವಂಗತ ಡಾ. ಎಸ್ ಎಸ್ ಪಾಟೀಲ್ ಅವರ ದ್ವಿತೀಯ ಪುಣ್ಯ ಸ್ಮರಣೆಯ ಪ್ರಯುಕ್ತ ಕರ್ಮಯೋಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜನೆ ಮಾಡಲಾಗಿದೆ ಎಂದು ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಠಪೂರ್ವ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎಸ್ ಆರ್ ಪಾಟೀಲ್ ಫೌಂಡೇಶನ್ ಹಾಗೂ ಪಾಟೀಲ್ ಗ್ರೂಫ್ ಇಂಡಸ್ಟ್ರೀಸ್ ವತಿಯಿಂದ ಆಗಸ್ಟ್ 23ರಂದು ನಗರದ ಎಸ್ ಎಮ್ ಪಂಡಿತ ರಂಗಮಂದಿರದಲ್ಲಿ ಕರ್ಮಯೋಗಿ ದಿವಂಗತ ಡಾ. ಎಸ್ ಎಸ್ ಪಾಟೀಲ್ ಅವರ ದ್ವಿತೀಯ ಪುಣ್ಯ ಸ್ಮರಣೆ ಹಾಗೂ ಕರ್ಮಯೋಗಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ಅಂದು ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಡಾ.ದ್ರಾಕ್ಷಾಯಿಣಿ ಎಸ್ ಅಪ್ಪ ಅವರು ವಹಿಸಿಕೊಳ್ಳಲಿದ್ದು, ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಇನ್ನು ಅನೇಕ ರಾಜಕೀಯ ಗಣ್ಯರು, ಚಿಂತಕರು ಸಮಾರಂಭದಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ವರು ಸಾಧಕರಿಗೆ ಕರ್ಮಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಪ್ರಶಸ್ತಿಯನ್ನು 50ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಿದ್ಧಲಿಂಗ ಪಾಟೀಲ್, ನಾಗೇಶ್, ಸಂದೀಪ ಬಿ, ರಾಜು ಕಣ್ಣಿ, ಶಿವಶರಣ ಕಣ್ಣಿ, ನಾಗೇಂದ್ರಪ್ಪಾ ಬಿರಾದಾರ, ಅಜಯ್ ಹಂಚಾಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.