“ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ”

0
17

ಕಲಬುರಗಿ: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪ.ಪೂ. ವಿಜ್ಞಾನ ಮಹಾವಿದ್ಯಾಲಯದಲ್ಲಿ “ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ” ನಿಮಿತ್ಯವಾಗಿ ಪಿ.ಯು.ಸಿ. ತರಗತಿಯ ಮಕ್ಕಳಿಗೆ ಬಾಹ್ಯಾಕಾಶ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಶರಣಬಸವ ವಿಶ್ವವಿದ್ಯಾಲಯ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ಎಮ್.ಮುಲಗೆ ಮಾತನಾಡಿ “ಜಗತ್ತಿನ 5ನೇ ಆರ್ಥಿಕ ಶಕ್ತಿ ಭಾರತವಾಗಿದೆ. ನಮ್ಮ ದೇಶದಲ್ಲಿನ ಕೃಷಿ, ಕೈಗಾರಿಕೆ ಉತ್ಪಾದನೆ ವಿಜ್ಞಾನದ ಬೆಳವಣಿಗೆಯಿಂದ ಭಾರತ ದೇಶದ ಆರ್ಥಿಕ ಪ್ರಗತಿ ಇನ್ನೂ ಹೆಚ್ಚಾಗುತ್ತದೆ. ಬಾಹ್ಯಾಕಾಶ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಬಹಳಷ್ಟಿದೆ. ವಿದ್ಯಾರ್ಥಿಗಳು ಅದನ್ನರಿತು ಆ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

Contact Your\'s Advertisement; 9902492681

ದೇಶದ ರಕ್ಷಣೆಗಾಗಿ ಇರುವ ಉಪಗ್ರಹಗಳನ್ನು ಅರಿತು ಅಧ್ಯಯನ ಮಾಡಬೇಕು. ಇಸ್ರೊ ಸಂಸ್ಥೆಯ ಬಾಹ್ಯಾಕಾಶ ಸಂಸ್ಥೆಯ ಮೂಲ ಉದ್ದೇಶ ಎಲ್ಲರಲ್ಲಿಯೂ ಬಾಹ್ಯಾಕಾಶದ ಬಗ್ಗೆ ಅರಿವು ಮೂಡಿಸುವದಾಗಿದೆ. ಭಾರತವು ತನ್ನ ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು “ಚಂದ್ರನನ್ನು ಸ್ಪರ್ಶಿಸುವಾಗ ಜೀವನವನ್ನು ಸ್ಪರ್ಶಿಸುವುದು : ಭಾರತದ ಬಾಹ್ಯಾಕಾಶ ಸಾಗಾ” ಎಂಬ ಧ್ಯೇಯವಾಕ್ಯ ಹೊಂದಿದೆ. ನಕ್ಷತ್ರಗಳ ಲೋಕದಲ್ಲಿ ಭಾರತದ ಯಾನ, ಆಧುನಿಕ ಸ್ಪರ್ಶ ಪಡೆದ ಜನಜೀವನ” ಚಂದ್ರಯಾನ-3 ಯೋಜನೆಯ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಮಹತ್ವದ ಮೈಲಿಗಲ್ಲು ಸಾಧನೆಯ ದಿನವಾಗಿದೆ ಎಂದು ತಿಳಿಸಿದರು.

ಭಾರತದ ಬಾಹ್ಯಾಕಾಶ ಯೋಜನೆಗಳು ಚಂದ್ರನನ್ನು ಸ್ಪರ್ಶಿಸುವದರಷ್ಟೇ ಸೀಮಿತವಾಗಿರದೆ, ಜನರು ದೈನಂದಿನ ಜೀವನವನ್ನು ಉತ್ತಮ ಪಡಿಸುವುದಾಗಿದೆ. ಈ ಬಾಹ್ಯಾಕಾಶ ಸಾಧನೆಗಳು ಸಂವಹನ ಮತ್ತು ಹವಾಮಾನ ಮುನ್ಸೂಚನೆಯಲ್ಲಿ ಅಭಿವೃದ್ದಿ ತಂದು ವಿಪತ್ತು ನಿರ್ವಹಣೆಗೆ ನೆರವು ನೀಡುತ್ತವೆ. ಅವು ಅತ್ಯಂತ ಅವಶ್ಯಕ ಮತ್ತು ಅನಿವಾರ್ಯವಾಗಿವೆ. ದೂರವಾಣಿ ಕರೆ, ಮಾಹಿತಿ ಪ್ರಸಾರ, ಅಂತರ್ಜಾಲ ಸಂಪರ್ಕ, ವಾಯು ಸಂಚಾರ ನಿಯಂತ್ರಣಗೈದು ಹವಾಮಾನ ವರದಿ ವೀಕ್ಷಣೆ, ಭೂ ಕುಸಿತದ ಅಪಾಯ ಮುಂತಾದ ವಿಪತ್ತು ಎದುರಿಸಲು ಸಿದ್ಧತೆ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಆ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದು ಸಾಧನೆ ಮಾಡಲು ಮುಂದಾಗಬೇಕು. 1960 ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡಲು ಆರಂಭಿಸಿದರು. ಚಂದ್ರಯಾನ-3 ಯಶಸ್ವಿಯಾಗಿದ್ದು 2023 ಆಗಸ್ಟ್ 23, ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಆಚರಿಸುವ ಅವಕಾಶ ಸಿಕ್ಕಿದ್ದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.

ಸಾವಿರಾರು ಶಿಕ್ಷಕರು, ವಿಜ್ಞಾನಿಗಳು, ತಂತ್ರಜ್ಞರು, ನಿರಂತರ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಯಿತು. ವಿದ್ಯಾರ್ಥಿಗಳು ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರು. ಡಾ. ಎ.ಪಿ.ಜೆ. ಕಲಾಂ ಅವರು ಈ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರವಾದುದು ಎಂದರು. ಸರ್ವಜ್ಞ ಕಾಲೇಜಿನಲ್ಲಿ ಮಕ್ಕಳಿಗೆ ಉತ್ತಮ ಅಂಕಗಳೊಂದಿಗೆ ಮಾನವೀಯ ಮೌಲ್ಯ ನೀಡುತ್ತಿರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾದ ಡಾ. ನಾಗಭೂಷಣ ಡೀನ್, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಮುಖ್ಯಸ್ಥರು ಭೌತಶಾಸ್ತ್ರ ವಿಭಾಗ, ಶರಣಬಸವ ವಿಶ್ವವಿದ್ಯಾಲಯ ಕಲಬುರಗಿ ಅವರು ಮಾತನಾಡುತ್ತ, “ಬಾಹ್ಯಾಕಾಶ ಕುರಿತ ಜಾಗೃತಿ ಕಾರ್ಯಕ್ರಮದ ಮೂಲಕ ಸರಕಾರದ ಮೂಲ ಉದ್ದೇಶವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಂಡು ಚಿಂತನೆ ಮಾಡಿ ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಡಾಕ್ಟರ್, ಶಿಕ್ಷಕ, ಇಂಜಿನಿಯರ್ ಯೊಂದಿಗೆ ವಿಜ್ಞಾನಿಗಳು ಆಗುವ ಸಾಮಥ್ರ್ಯ ಹೊಂದಿದ್ದೀರಿ ಅದಕ್ಕಾಗಿ ಶ್ರಮಿಸಿ ಯಶಸ್ಸು ಪಡೆಯಿರಿ ಎಂದು ಪ್ರೇರೇಪಿಸಿದರು.

ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಅವರು ಮಾತನಾಡುತ್ತ, ‘ವಿಜ್ಞಾನ ಮತ್ತು ತಂತ್ರಜ್ಞಾನದಿಂದ ವಿದ್ಯಾರ್ಥಿಗಳು ಪ್ರಯೋಜನವನ್ನು ಉತ್ತಮ ರೀತಿಯಲ್ಲಿ ಪಡೆದು ದೊಡ್ಡ ಸಾಧನೆ ಮಾಡಬೇಕು. ಕಠಿಣ ಪರಿಶ್ರಮ ಪಡುವ, ನಿರಂತರ ಅಧ್ಯಯನ ಮಾಡುವ ವಾತಾವರಣವಿದ್ದಲ್ಲಿ ಎಲ್ಲವೂ ಸಾಧ್ಯವಾಗುತ್ತದೆ. ಗೌರವಾನ್ವಿತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ‘ಸಾಧನೆಯೆಂಬುದು ಪ್ರಾಮಾಣಿಕ ಪ್ರಯತ್ನ, ಉತ್ತಮ ಗುರಿಯತ್ತ ನಿರಂತರ ಅಧ್ಯಯನದಿಂದ ಮಾತ್ರ ಸಾಧ್ಯ’ ಎಂಬ ನುಡಿಮುತ್ತಿನಂತೆ ವಿದ್ಯಾರ್ಥಿಗಳು ಸಾಧನೆ ಮಾಡಬೇಕು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಮಾಜ ಸೇವೆ, ದೇಶ ಪ್ರೇಮ, ದೇಶಕ್ಕಾಗಿ ಮಾಡಿದ ಅವರ ಸಾಧನೆ ಮಕ್ಕಳಿಗೆ ಪ್ರೇರಣೆಯಾಗಬೇಕು. ವಿದ್ಯಾರ್ಥಿಗಳು ಉತ್ತಮ ಅಂಕದೊಂದಿಗೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಪ್ರೇರೇಪಿಸಿದರು.

ಕಾರ್ಯಕ್ರಮದಲ್ಲಿ ಪ್ರಶಾಂತ ಕುಲಕರ್ಣಿ, ಪ್ರಭುಗೌಡ ಸಿದ್ಧಾರೆಡ್ಡಿ, ಕರುಣೇಶ್ ಹಿರೇಮಠ,  ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗುರುರಾಜ ಕುಲಕರ್ಣಿ ಸ್ವಾಗತಿಸಿದರು. ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು. ಕು. ಸೃಜಲ್ಯ ಪ್ರಾರ್ಥಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here