ಕಲಬುರಗಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೌಡೂರ ಗ್ರಾಮ ಪಂಚಾಯತಿ ದುರ್ಗಾ ನಗರದ ಯುವತಿಯನ್ನು ರಂಗಂಪಲ್ಲಿ ನಿರ್ಜನ ಪ್ರದೇಶದಲ್ಲಿ ಕರೆದು ಅತ್ಯಾಚಾರ ಎಸಿಗಿದ ಕಾಮುಕರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಸೇನೆ ಸಂಸ್ಥಾಪಕ ಅಧ್ಯಕ್ಷ ಜಿ.ಶಿವಶಂಕರ ಆಗ್ರಹಿಸಿದ್ದಾರೆ.
ಓರ್ವ ವ್ಯಕ್ತಿ ಇನ್ಸ್ಟಾಗ್ರಾಮ್ ಮುಖಾಂತರ ಪರಿಚಯವಾಗಿ ಸ್ನೇಹಿತರ ಜೊತೆಗೂಡಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವಂತಹ ಕೃತ್ಯ ಖಂಡನೀಯವಾಗಿದ್ದು, ಇಂತಹ ಕೃತ್ಯ ನಡೆಸುವ ಅಪರಾಧಿಗಳಿಗೆ ಸರ್ಕಾರ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಆವರು ಒತ್ತಾಯಿಸಿದರು.
ಹಿಂದೆ ತೆಲಂಗಾಣ ಪ್ರದೇಶದಲ್ಲಿ ಅತ್ಯಾಚಾರ ಮಾಡಿರುವ ಕಾಮುಕರನ್ನು ಅಲ್ಲಿನ ಸರ್ಕಾರ ಕಾಮುಕರನ್ನು ಗುಂಡಿಟ್ಟು ಕೋಲ್ಲಲಾಯಿತು ಅದೇ ರೀತಿ ನಮ್ಮ ಕರ್ನಾಟಕದಲ್ಲೂ ಆಗಬೇಕು. ಇಂಥ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಇವರು ಪ್ರಕಟಣೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀಕೃಷ್ಣ ಕುಶಲಕರ್ ಹಾಗೂ ನಾಗೇಶ ಕುಶಲಕರ್, ಸುರೇಶ್ ಕುಶಲಕರ್, ಅರ್ಜುನ್ ಬೇಲೂರ್ ಇದ್ದರು.