ಭಾರತ ದೇಶದ ಪರಂಪರೆಯಲ್ಲಿ ಪ್ರತಿ ಮಾಸವು ವಿಶೇಷ

0
99

ಕಲಬುರಗಿ: ಜ್ಞಾನದಾಸೋಹ ಹಾಗೂ ಅನ್ನದಾಸೋಹ ಮೂಲಕ ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಮುಗುಳನಾಗಾವಿ ಕಟ್ಟಿಮನಿ ಸಂಸ್ಥಾನ ಹಿರೇಮಠದ ಒಡೆಯರಾದ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಹೇಳಿದರು.

ನಗರದ ಬಸವೇಶ್ವರ ಕಾಲೊನಿಯ ನೂತನ ಬಡಾವಣೆಯ ಶಿವ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಮೂರನೇ ವರ್ಷದ ಮಹಾದಾಸೋಹೀ ಶ್ರೀ ಶರಣಬಸವೇಶ್ವರ ಪುರಾಣದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

Contact Your\'s Advertisement; 9902492681

ಜಗತ್ತಿನಲ್ಲಿ ಬಹಳ ಕಿಮ್ಮತ್ತಿನ ಮೂರು ರತ್ನಗಳು ಅದರಲ್ಲಿ ಸುಭಾಷಿತ ಒಂದು ಸುಭಾಷಿತ ಅಂದರೆ ಉತ್ತಮವಾದ ಮಾತು ಎಂದು ಅರ್ಥ ಭಾರತ ದೇಶದ ಪರಂಪರೆಯಲ್ಲಿ ಪ್ರತಿಮಾಸವು ಬಹಳ ವಿಶೇಷತೆಯಿಂದ ಕೂಡಿದೆ ಶ್ರಾವಣ ಮಾಸ ಒಂದು ತಿಂಗಳು ಒಳ್ಳೆಯ ಮಾತು ಆಲಿಸುವುದಕ್ಕಾಗಿ ಇರುವ ಮಾಸ ಶ್ರಾವಣ ಇದರ ಅರ್ಥ ಶ್ರವಣ ಅಂದೆ ಕೇಳುವುದು ಏನನ್ನ ಕೇಳುವುದು ಎಂದರೆ ಶರಣರ ,ಸಂತರ, ಸತ್ಪುರುಷರ ಜೀವನದ ಸಾರವನ್ನು ಆಲಿಸುವುದಕ್ಕಾಗಿ ಮೀಸಲಿರುವ ತಿಂಗಳು ಎಂದು ತಿಳಿಸಿದರು.

ಪುರಾಣಿಕರಾದ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸ್ತ್ರಿಗಳು ಶರಣಬಸವೇಶ್ವರ ಪ್ರಾಣಿ ಪಕ್ಷಿಗಳಲ್ಲಿಯೂ ಕೂಡ ದೇವರನ್ನು ಕಂಡು ದಾಸೋಹವನ್ನು ಮಾಡಿದರು ಎಂದು ಪುರಾಣ ಹೇಳಿದರು.

ಕಲಾವಿದರಾದ ಚೇತನ ಸ್ವಾಮಿ ಬೀದಿಮನಿ, ತಬಲಾ ವಾದಕ ಕಲ್ಮೇಶ ದೇಸಾಯಿ ಕಲ್ಲೂರ ಅವರಿಂದ ಸಂಗೀತ ಜರುಗಿತು ಶಿವ ಮಂದಿರ ಸಮಿತಿ ಅಧ್ಯಕ್ಷರಾದ ಭಿಮಾಶಂಕರ ಚಕ್ಕಿ, ಉಪಾಧ್ಯಕ್ಷರಾದ ಮಲ್ಲಿನಾಥ ಭೋಳಶೆಟ್ಟಿ , ಕಾರ್ಯದರ್ಶಿಯಾದ ಉಮೇಶ ಸಂಗೊಳ್ಳಿ, ವಚನೋತ್ಸವ ಮಹಿಳಾ ಘಟಕದ ಸರ್ವ ಪದಾಧಿಕಾರಿಗಳು. ಶಿವ ಮಂದಿರ ಸಮಿತಿ ಸದಸ್ಯರು ಕಾಲೊನಿಯ ಸಮಸ್ತ ಸದ್ಭಕ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here