ಕಲಬುರಗಿ: ಶ್ರಾವಣ ಮಾಸ ಪ್ರಕೃತಿ ಮೂಲಕ ಕಣ್ಣಿಗೆ ಹಬ್ಬ ಮನಸ್ಸಿಗೂ ನೆಮ್ಮದಿ ನೀಡಲು ಸಂಗೀತ ಬೇಕು ಅಂತಹ ಸಂಗೀತ ರಸದೌತಣ ನೀಡಲು ಜಿಲ್ಲೆಯ ಪ್ರಸಿದ್ಧ ಸುಕಿ ಸಾಂಸ್ಕೃತಿಕ ಸಂಸ್ಥೆಯ ತಂಡವು ನಮ್ಮ ವಿವೇಕಾನಂದ ವಿದ್ಯಾನಿಕೇತನ ಶಾಲೆಯ ಸಿಬ್ಬಂದಿ ಹಾಗು ವಿದ್ಯಾರ್ಥಿಗಳಿಗೆ ಶ್ರಾವಣ ಮಾಸದ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಮೆಚ್ಚುವಂತ ಕಾರ್ಯವಾಗಿದೆ ಎಂದು ವಿವಿಎಸ್ ಶಾಲೆಯ ಪ್ರಾಚಾರ್ಯರಾದ ಸಿದ್ದಪ್ಪ ಭಗವತಿ ಹೇಳಿದರು.
ನಗರದ ವಿವೇಕಾನಂದ ವಿದ್ಯಾನಿಕೇತನ ಶಾಲೆಯ ಆವರಣದಲ್ಲಿ ಸುಕಿ ಸಂಗೀತ ತಂಡದವರು ಆಯೋಜಿಸಿದ ಶ್ರಾವಣ ಮಾಸದ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಆಳಂದ ಯುವ ಬಾಲ ಪ್ರತಿಭೆ ಎಸ್ ರಾಜ್ ಶಿವಕುಮಾರ ಬಾಲಕನನ್ನು ಆತನ ಗಾಯನಕ್ಕೆ ಮನಸೋತು ಸಂಗೀತ ಲೋಕದಲ್ಲಿ ಉಜ್ವಲ ಭವಿಷ್ಯ ಕಾಣು ಎಂದು ವಿವಿಎಸ್ ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ ಅವರು ಸನ್ಮಾನಿಸಿದರು.
ಸುಕಿ ತಂಡದ ಅಧ್ಯಕ್ಷ ಕಿರಣ್ ಪಾಟೀಲ್ ಆವರ ಗಾಯನದಿಂದ ಆರಂಭವಾದ ಶ್ರಾವಣ ಮಾಸದ ಸಂಗೀತ ಸಂಭ್ರಮ ಗಾಯನವನ್ನುಆರಂಭಿಸಿದರು ತಂಡದ ಶರಣು ಪಟ್ಟಣಶೆಟ್ಟಿ ಪ್ರಕಾಶ ದಂಡೋವತಿ ಆನಂದ ಪಾಟೀಲ ಮಹೇಶ ನಿಪ್ಪಾಣಿ ಕವಿರಾಜ್ ನಿಂಬಾಳ ಅಂಬರೀಶ್ ಕುಲಕರ್ಣಿ ಅನ್ನಪೂರ್ಣ ಚವಾಣ್ ಭೀಮರಾವ್ ಅರಕೇರಿ ಎಸ್ ರಾಜ್ ಹಾಗು ಸಂಸ್ಥೆಯ ಪ್ರಾಧ್ಯಾಪಕರು ಮುದ್ದು ಮಕ್ಕಳು ಗಾಯನ ಸಂಭ್ರಮದಲ್ಲಿ ಭಾಗಿಯಾಗಿ ಭಕ್ತಿ ಗೀತೆಗಳನ್ನು ಹಾಡಿ ಭಕ್ತಿ ಪರವಶರಾದರು.
ನೆರೆದಿದ್ದ ಮಕ್ಕಳು ಶ್ರಾವಣ ಮಾಸದ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದರು .