ಕಲಬುರಗಿ : ರೈತರ ಹಿತಕ್ಕಾಗಿ ಸ್ಥಾಪನೆಯಾಗಿರುವ ಸಿದ್ದಸಿರಿ ಇಥೆನಾಲ್ ಕಂಪನಿ ಪ್ರಾರಂಭಕ್ಕೆ ಈಗಾಗಲೇ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ. ಆದರೂ ರಾಜ್ಯದ ವಾಯು ಮಾಲಿನ್ಯ ಇಲಾಖೆ ಅಧಿಕಾರಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅಧಿಕಾರಿಗಳ ನಡೆ ಖಂಡನಿಯ ವಾಗಿದೆ ಎಂದು ಕಲಬುರಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ ತಿಳಿಸಿದ್ದಾರೆ.
ಈ ಕುರುತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಸಿದ್ದಸಿರಿ ಇಥೆನಾಲ್ ಕಂಪನಿ ಪ್ರಾರಂಭಿಸಲು ಮಾಜಿ ಸಂಸದ ಡಾ. ಉಮೇಶ ಜಾಧವ, ಶಾಸಕ ಅವಿನಾಶ ಜಾಧವ ಹಾಗೂ ಚಿಂಚೋಳಿ ತಾಲೂಕಿನ ರೈತರ ಹಲವು ವರ್ಷಗಳ ಸತತ ಹೊರಾಟದ ಪ್ರಯತ್ನದಿಂದ ಪ್ರಾರಂಭವಾಗಿದ್ದು ಚಿಂಚೋಳಿ, ಸೇಡಂ,ಕಾಳಗಿ, ಈ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗ, ಗುಣಮಟ್ಟದ ಶಿಕ್ಷಣ, ಆರೋಗ್ಯ, ರೈತರಿಗೆ ಉತ್ತಮ ಬೆಂಬಲ ಬೆಲೆ ಸೇರಿ ಹಲವು ಸೌಲಭ್ಯ ದೊರೆಯುತ್ತಿದ್ದರು.
ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ವಾಯು ಮಾಲಿನ್ಯದ ನೆಪ ಹೇಳಿ ಕಂಪನಿಯನ್ನು ಮುಚ್ಚಿಸಿದೆ. ಸಿದ್ಧಸಿರಿ ಪ್ಯಾಕ್ಟರಿಯಿಂದ ಮಾತ್ರ ಮಾಲಿನ್ಯ ಆಗುತ್ತಿದೆಯಾ ? ಸಿಮೆಂಟ್ ಕಂಪನಿ, ಪವರ್ ಪ್ಲಾಂಟ್ ಗಳು ಯಾವುದೇ ಮಾಲಿನ್ಯ ಮಾಡ್ತಿಲ್ವಾ ಎಂದು ಕಿಡಿಕಾರಿದರು. ಇದು ಕೇವಲ ರಾಜಕೀಯ ಪ್ರೇರಿತವಾಗಿದೆ. ನ್ಯಾಯಾಲಯವೇ ಕಂಪನಿ ಪ್ರಾರಂಭಕ್ಕೆ ಅವಕಾಶ ನೀಡಿದೆ. ಆದರೆ ಸರ್ಕಾರ ಏಕೆ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ? ಸರ್ಕಾರ ಈ ಧೋರಣೆಯನ್ನು ರೈತರು ಗಮನಿಸುತ್ತಿದ್ದಾರೆ.
ಸರ್ಕಾರಕ್ಕೆ ಸರಿಯಾದ ಉತ್ತರ ನೀಡಲಿದ್ದಾರೆ ಎಂದು ಹೇಳಿದರು. ರೈತರ ಹಿತಕ್ಕಾಗಿ ಈ ಭಾಗದ ಎಲ್ಲರೂ ಒಂದಾಗಬೇಕು. ಪ್ಯಾಕ್ಟರಿ ಬಂದ್ ಆಗಿದ್ದರಿಂದ ಕಬ್ಬು ಬೆಳೆದ ರೈತರು ಕಂಗಾಲಾಗಿದ್ದಾರೆ. ಮುಂದೆ ಏನಾದರೂ ಅನಾಹುತ ಸಂಭವಿಸಿದರೆ ಸರ್ಕಾರವೇ ಹೊಣೆ ಆಗುತ್ತದೆ. ಕೂಡಲೆ ರಾಜ್ಯದ ವಾಯು ಮಾಲಿನ್ಯ ಇಲಾಖೆ ಅಧಿಕಾರಿಗಳು ಕೊರ್ಟನ ಆದೇಶವನ್ನು ಪಾಲಿಸಿ ಅನುಮತಿ ನೀಡಬೇಕು ಎಂದು ಆಗ್ರಹಿಸಿದ್ದರು.
ಹಿಂದುಳಿದ ಪ್ರದೇಶವಾದ ಕಲಬುರ್ಗಿಯಲ್ಲಿ ಮುಳುಗಿಹೋಗಿದ್ದ ಸಕ್ಕರೆ ಕಾರ್ಖಾನೆಯನ್ನು ಶಾಸಕ ಯತ್ನಾಳ್ ಅಭಿವೃದ್ಧಿಪಡಿಸಿದ್ದಾರೆ. ಈ ಕಾರ್ಖಾನೆಯಿಂದ ಎರಡು ಸಾವಿರ ಜನರಿಗೆ ಉದ್ಯೋಗ ದೊರೆತಿದೆ, ಸಾವಿರಾರು ರೈತರಿಗೆ ಲಾಭವಾಗುತ್ತಿದೆ. ಆದರೆ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಹೈಕೋರ್ಟ್ ಆದೇಶವಿದ್ದರೂ ಕಾರ್ಖಾನೆ ಮರು ಆರಂಭಕ್ಕೆ ಅನುಮತಿ ನೀಡುತ್ತಿಲ್ಲ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ನಾವೆಲ್ಲರೂ ಅವರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. – ಬಾಲರಾಜ್ ಗುತ್ತೇದಾರ, ಜಿಲ್ಲಾ ಜೆಡಿಎಸ್ ಅಧ್ಯಕ್ಷರು ಕಲಬುರಗಿ