ರಾಮಗಿರಿ ಮಹಾರಾಜರ ಹೇಳಿಕೆ ಖಂಡಿಸಿ ಪ್ರತಿಭಟನೆ

0
90

ಶಹಾಬಾದ: ಪ್ರವಾದಿ ಮೊಹಮ್ಮದ್ ಮತ್ತು ಇಸ್ಲಾಂ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ್ ವಿರುದ್ಧ ನಗರದ ಮುಸ್ಲಿಂ ಫೋರಂ ಸಂಘಟನೆ ವತಿಯಿಂದ ಸೋಮವಾರ ನೆಹರು ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ಮಾತನಾಡಿ, ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ ಅವರ ಕುರಿತು ಮಹಾಂತ ರಾಮಗಿರಿ ಮಹಾರಾಜರು ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅವರ ಕುರಿತಾಗಿ ರಾಮಗಿರಿ ಮಹಾರಾಜ ಅವಹೇಳನಕಾರಿ ಭಾಷಣ ಮಾಡಿದ್ದು, ಈ ಸ್ವಾಮೀಜಿ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಭಾರತದ ಸಂವಿಧಾನವು ಎಲ್ಲ ಧರ್ಮದವರಿಗೆ ಸಮಾಜ ಬಂಧುಗಳಿಗೆ ಸಮಾನ ರೀತಿಯಲ್ಲಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದರೂ ಕೂಡ ಮಹಾಂತ ರಾಮಗಿರಿ ಮಹಾರಾಜ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿರುವುದು ಇಸ್ಲಾಂ ಸಮಾಜದ ಬಾಂಧವರಿಗೆ ತೀವ್ರ ನೋವನ್ನುಂಟು ಮಾಡಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಇಂತಹ ಸ್ವಾಮೀಜಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮಹ್ಮದ್ ಮಸ್ತಾನ್, ಜಹೀರ್ ಅಹಮದ್ ಪಟವೇಗರ್, ಮೌಲಾನಾ ಅಬ್ದುಲ್ ಖಾದೀರ್ ಸಾಬ್,ಮೌಲಾನಾ ಕೈಸರ್, ಮೌಲಾನಾ ಹಿದಾಯತ, ಅಜರ್ ಜುನೈದಿ, ಮೆಹಬೂಬ ಪಟೇಲ್, ಅಫಸರ್ ಸೇoಟ್ಡಾ.ಅಹ್ಮದ್ ಪಟೇಲ್, ಮುಬೀನ್ ಮೋಟಗಿ, ಯುನೂಸ್ ಹುಸೇನಿ,ಮಹ್ಮದ್ ಇಮ್ರಾನ್, ಮಹ್ಮದ್ ಖಾಜಾ, ಮಹ್ಮದ್ ಅಜರ್,ಅಬ್ದುಲ್ ಗನಿ ಸಾಬೀರ್,ಅನ್ವರ ಪಾಶಾ,ಶಮಸ್ ಮರ್ಚಂಟ್,ಮತೀನ್ ಬಾದಲ್,ಶೇಖ್ ಹಸನ್, ಅಲೀಮ್ ಪಟೇಲ್,ಅಮೀರ್ ಮರ್ಚಂಟ್,ಫಯಾಜ್ ಗೋಳಾ,ಮಹ್ಮದ್ ಜಾವೀದ್, ಫೀರೋಜ್ ಶೇಖ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here