ಧಾರಾಕಾರವಾಗಿ ಸುರಿದ ಮಳೆಗೆ ನಡುಗಡ್ಡೆಯಾದ ಮುತ್ತಗಾ ಗ್ರಾಮದ

0
150

ಶಹಾಬಾದ: ಧಾರಾಕಾರವಾಗಿ ಸುರಿದ ಮಳೆ, ಬೆಣ್ಣೆತೊರಾ ಹಾಗೂ ಚಂದ್ರಂಪಳ್ಳಿ ಜಲಾಶಯದಿಂದ ಹರಿಬಿಟ್ಟ ಅಪಾರ ಪ್ರಮಾಣದ ನೀರು ಮುತ್ತಗಾ ಗ್ರಾಮಕ್ಕೆ ನುಗ್ಗಿದ್ದರಿಂದ ಮುತ್ತಗಾ ಗ್ರಾಮ ಸೋಮವಾರ ಬೆಳಿಗ್ಗೆ ಅಕ್ಷರಶಃ ನಡುಗಡ್ಡೆಯಾದಂತಾಗಿದೆ.

ರಾತ್ರಿಯೆಲ್ಲಾ ಮಳೆಯಾಗಿ ಬೆಳಿಗ್ಗೆ ನೀರಿನ ಮಟ್ಟ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಮುತ್ತಗಾ ಗ್ರಾಮಸ್ಥರು ಭಯಬೀತರಾಗಿದ್ದರು. ಅಲ್ಲದೇ ಭಂಕೂರ ಗ್ರಾಮದಿಂದ ಮುತ್ತಗಾ ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯದಲ್ಲಿರುವ ಸೇತುವೆ ಹಾಗೂ ಮುತ್ತಗಾ ಗ್ರಾಮದಿಂದ-ಕದ್ದರಗಿ ಗ್ರಾಮಕ್ಕೆ ಹೋಗುವ ಮಧ್ಯದ ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ತುಂಬಿ ಗ್ರಾಮವನ್ನು ಸುತ್ತುವರೆದಿದೆ. ಸಂಚಾರ ವ್ಯವಸ್ಥೆ ಸಂಪೂರ್ಣ ಕಡಿತಗೊಂಡಿದೆ.

Contact Your\'s Advertisement; 9902492681

ರಾತ್ರಿ ನಿದ್ದೆಯಿಲ್ಲದೇ ಆತಂಕದಲ್ಲಿಯೇ ಕಾಲ ಕಳೆದಿದ್ದಾರೆ. ಗ್ರಾಮದ ಬಹುತೇಕ ಮನೆಗಳ ಮುಂಭಾಗದವರೆಗೆ ನೀರು ಆವೃತವಾಗಿದೆ. ಬೆಳಿಗ್ಗೆಯಿಂದ – ಮಧ್ಯಾನವರೆಗೆ ನೀರಿನ ಮಟ್ಟ ಹೆಚ್ಚಾಗುತ್ತಲೇ ಗ್ರಾಮಸ್ಥರು ಆತಂಕದಲ್ಲಿಯೇ ಕಾಲಕಳೆಯುತ್ತಿದ್ದರು. ಸಂಜೆಂiÀiವರೆಗೆ ನೀರಿನ ಮಟ್ಟ ಇಳಿಯುತ್ತಿರುವುದರಿಂದ ಜನರು ನಿಟ್ಟಿಸಿರು ಬಿಟ್ಟರು. ಮತ್ತೆ ಸೋಮವಾರ ಸಂಜೆ ಜಲಾಶಯದಿಂದ ನೀರು ಬಿಡುವ ಮುನ್ಸೂಚನೆ ಇದೆ.ಅಲ್ಲದೇ ಒಂದು ವೇಳೆ ರಾತ್ರಿ ಮಳೆ ಮತ್ತೆ ಪ್ರಾರಂಭವಾದರೆ ಗ್ರಾಮ ಸಂಪೂರ್ಣ ಜಲಾವೃತವಾಗುತ್ತದೆ. ಹೊಲಗಳಿಗೆ ಅಪಾರ ಪ್ರಾಮಣದ ನೀರು ನುಗ್ಗಿದ್ದರಿಂದ ಹೆಸರು, ಉದ್ದು, ತೊಗರೆ, ಕಬ್ಬಿನ ಬೆಳೆ ಸಂಪೂರ್ಣ ನಾಶವಾಗಿದೆ.

ಪರಿಹಾರಕ್ಕೆ ಒತ್ತಾಯ: ಮಳೆ ಹಾಗೂ ಜಲಾಶಯದಿಂದ ಬಿಟ್ಟ ನೀರಿನಿಂದ ನದಿ ಉಕ್ಕಿ ಹರಿದು, ನೂರಾರು ಹೊಲಗಳಲ್ಲಿ ನೀರು ತುಂಬಿಕೊಂಡಿದೆ.ಇದರಿಂದ ಬೆಳೆ ಹಾನಿಯಾಗಿ ರೈತ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಆತಂಕದ ಸ್ಥಿತಿಯಲ್ಲಿದ್ದಾರೆ.

ಕೂಡಲೇ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿ ಹಾನಿಗೀಡಾ ರೈತನಿಗೆ ಪರಿಹಾರ ಒದಗಿಸಿ, ರೈತರಿಗೆ ನೆರವು ನೀಡುವ ಕೆಲಸ ಮಾಡಬೇಕು.ಅಲ್ಲದೇ ಮುತ್ತಗಾ ಗ್ರಾಮಸ್ಥರಿಗೆ ಯಾವುದೇ ರೀತಿ ಅಪಾಯವಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಬಿಜೆಪಿ ಮುಖಂಡ ಮಹೇಂದ್ರ ಕೋರಿ ಆಗ್ರಹಿಸಿದ್ದಾರೆ.

ಮುತ್ತಗಾ ಗ್ರಾಮ ಸಂಪೂರ್ಣ ನೀರಿನಿಂದ ಸುತ್ತವರೆದಿದೆ. ಗ್ರಾಮಕ್ಕೆ ಹೋಗಿ ಬರಲು ಮಾರ್ಗಗಳು ನೀರಿನಿಂದ ಜಲಾವೃತಗೊಂಡಿವೆ. ಇದರಿಂದ ಈ ಗ್ರಾಮಕ್ಕೆ ಹೋಗಲು ಮತ್ತು ಬರಲು ಸಂಚಾರ ವ್ಯವಸ್ಥೆಯಿಲ್ಲ. ತಾಲೂಕಿನಲ್ಲಿ ಇನ್ನೂ ಮಳೆಯಾಗುವ ಸಾಧ್ಯತೆಯಿದೆ.ಅಲ್ಲದೇ ಜಲಾಶಯಗಳಿಂದ ನೀರು ಹರಿದು ಬರುತ್ತಿದ್ದು, ಯಾರು ಹಳ್ಳ ಹಾಗೂ ನದಿಯ ಹತ್ತಿರ ಹೋಗಕೂಡದು ಎಂದು ಮನವಿ ಮಾಡಿದ್ದಾರೆ- ಜಗದೀಶ ಚೌರ್ ತಹಸೀಲ್ದಾರ ಶಹಾಬಾದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here