ಪೃಥ್ವಿರಾಜ ರಾಂಪೂರ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಮನವಿ

0
80

ಕಲಬುರಗಿ: ಎಸ್.ಎಸ್.ಎಲ್.ಸಿ. ಪಾವಿತ್ರ್ಯತೆ ಉಲ್ಲಂಘಿಸಿರುವ ಹಿನ್ನೆಲ್ಲೆಯಲ್ಲಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯ ವಿರುದ್ಧ ಸೂಕ್ರ ಕ್ರಮಕೈಕೊಂಡು ಸೇವೆಯಿಂದ ಅಮಾನತ್ತು ಮಾಡಬೇಕೆಂದು ಕರುನಾಡ ವಿಜಯಸೇನೆಯ ಜಿಲ್ಲಾಧ್ಯಕ್ಷ ಪೃಥ್ವಿರಾಜ ಎಸ್. ರಾಂಪೂರ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ  ಅಪರ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಮುಖ್ಯ ಗುರುಗಳಾಗಿ ಯಾದಗೀರಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಪುತ್ರನನ್ನು ಎಸ್.ಎಸ್.ಎಲ್.ಸಿ. ಪಾಸು ಮಾಡಲು ಕಳ್ಳತನದಿಂದ ಹಾಗೂ ವಾಮಮಾರ್ಗದಿಂದ ಪರೀಕ್ಷಾ ಅಧೀಕ್ಷಕರಿಗೆ ಕರೆ ಮಾಡಿ ಮೊದಲನೇ ಆಡಿಯೋದಲ್ಲಿ ಈ ಸಲ ಏನಾದರೂ ಮಾಡಿ ಪಾಸ್ ಮಾಡೋಣ ಎಂದು ಮತ್ತು ಎರಡನೇ ಆಡಿಯೋದಲ್ಲಿ ಮುಂದಿನ ಪೇಪರಕ್ಕೆ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನನ್ನ ಮಗನ ಬದಲಿಗೆ ಓದುವ ಬೇರೆ ವಿದ್ಯಾರ್ಥಿಯನ್ನು ಕೂಡಿಸೋಣ ಎಂದು ಮೂರನೇ ಆಡಿಯೋದಲ್ಲಿ ನಿಮ್ಮ ದಯದಿಂದ ಪಾಸಾಗಲಿ ಸರ್. ಅಲ್ಲಿ ಗಣಿತದವರು ಇದ್ದಾರೆ ಎಂದು ತಿಳಿಸಿರುತ್ತಾರೆ ಎಂದು ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.

Contact Your\'s Advertisement; 9902492681

ಸ್ವತಃ ಸರಕಾರಿ ಪ್ರೌಢಶಾಲೆ ಮುಖ್ಯ ಗುರುಗಳಾಗಿರುವ ಇವರು ಒಬ್ಬ ಸಮಾಜಕ್ಕೆ ಮಾದರಿ ಗುರುಗಳಾಗುವ ಬದಲು ವಾಮಮಾರ್ಗ ಹಾಗೂ ಕಳ್ಳಾಟದಿಂದ ಎಸ್.ಎಸ್.ಎಲ್.ಸಿ. ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ ಆರೋಪಿಸಿ ಪ್ರಾಮಾಣಿಕವಾಗಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬಿದ್ದಾಂತಾಗುತ್ತದೆ ಎಂದು ಮನವಿಯಲ್ಲಿ ದೂರಿದ್ದಾರೆ.

ಕೂಡಲೇ ಸೇವೆಯಿಂದ ಅಮಾನತ್ತು ಮಾಡಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ  ಜಿಲ್ಲಾಧ್ಯಕ್ಷ ಪೃಥ್ವಿರಾಜ ಎಸ್ ರಾಂಪುರ, ತಾಲೂಕ ಅಧ್ಯಕ್ಷ ಕಲ್ಯಾಣಿ ಎಸ್ ತಳವಾರ್ , ಚಿಂಚೋಳಿ ತಾಲೂಕ ಅಧ್ಯಕ್ಷ ಝರಣಪ್ಪ ಎಸ್ ತಳವಾರ, ಜೀಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ  ಅರ್ಜುನ್ ಮೈತ್ರೆ , ಜೀಲ್ಲಾ ಸಹ ಕಾರ್ಯದರ್ಶಿ ಸತೀಶ್ ಮೊಲೆ, ಕಾರ್ಯದರ್ಶಿ  ಪ್ರಶಾಂತ್ ಸಣ್ಣೂರ್,  ಜಿಲ್ಲಾ ಚಾಲಕ ಘಟಕ  ಉಪಾಧ್ಯಕ್ಷ ಸೈಬಣ್ಣ ಪರಸನಹಳ್ಳಿ, ನಗರ ಉಪಾಧ್ಯಕ್ಷ  ಶ್ರೀನಿವಾಸ್, ರಾಹುಲ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here