ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ

0
33

ಕಲಬುರಗಿ : ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ಕಲಬುರಗಿ ನಗರದ ಸುವರ್ಣ ಸಭಾ ಭವನದಲ್ಲಿ ವಿಶ್ವ ಜಾನಪದ ದಿನಾಚರಣೆ ಮತ್ತು ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ನಗರ ಪೋಲಿಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ. ಸರ ಅವರು ಉದ್ಘಾಟಿಸಿ , ಜಾನಪದ ಕಲಾವಿದರಿಗೆ ಸನ್ಮಾನಿಸಿದರು.ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಅವರು ಜಾನಪದ ಸಾಹಿತ್ಯ ಮತ್ತು ಜೀವನ ಮೌಲ್ಯಗಳು ಕುರಿತು ಉಪನ್ಯಾಸ ನೀಡಿದರು.

Contact Your\'s Advertisement; 9902492681

ಕ.ಸಾ.ಪ.ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮತ್ತು ಅಖಿಲ ಕರ್ನಾಟಕ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆ ರಾಜ್ಯಾಧ್ಯಕ್ಷರಾದ ಡಾ.ವಿಶಾಲಾಕ್ಷಿ.ವಿ.ಕರಡ್ಡಿ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಜಾಪ ಜಿಲ್ಲಾಧ್ಯಕ್ಷರಾದ ಸಿ.ಎಸ್.ಮಾಲಿಪಾಟೀಲ ವಹಿಸಿದರು.ಡಾ.ಸಿದ್ರಾಮಪ್ಪ ಪೋಲಿಸ್ ಪಾಟೀಲ, ಶರಣಮ್ಮ.ಪಿ.ಸಜ್ಜನ, ಗುಂಡಪ್ಪಗುಡ್ಲಾ ಕೊಲ್ಲೂರು, ರಾಮಲಿಂಗಪ್ಪ ಪ್ಯಾಟಿ ಕೊಲ್ಲೂರು, ಹಣಮಂತರಾಯ ಮಂಗಾಣೆ ಕಲಾವಿದರನ್ನು ವಿಶ್ವ ಜಾನಪದ ದಿನಾಚರಣೆ ಪ್ರಯುಕ್ತ ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಸಾಪ ತಾಲೂಕ ಅಧ್ಯಕ್ಷ ಗುರುಬಸಪ್ಪ ಎಸ್ ಸಜ್ಜನ ಶೆಟ್ಟಿ,ಗಂಗಾಧರ ಬಡೀಗೆರ,ಟೀಕಾಬಾಯಿ ಸಿ ಪಾಟೀಲ,ಡಾ.ಕೆ.ಎಸ್.ಬಂಧು, ರಾಜೇಂದ್ರ,ಎನ್.ಸಿ.ವಾರದ,ಅಪ್ಪಾಸಾಬ,ಸಿದ್ದರಾಮ ಸರಸಂಬಿ,ಕ.ಸಾ.ಪ. ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ,ಗೌರವ ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ,ಕ.ಜಾ.ಪ.ಕೋಶಾಧ್ಯಕ್ಷ ಭಾನುಕುಮಾರ ಗಿರೇಗೊಳ,ಮತ್ತು ಕಲಾವಿದರು ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಪ್ರಾರ್ಥನಾ ಗೀತೆ ಡಾ.ಸಿದ್ರಾಮಪ್ಪ ಪೋಲಿಸ್ ಪಾಟೀಲ, ಸ್ವಾಗತ ಕ.ಸಾ.ಪ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್.ದನ್ನಿ,ಕಲಾವಿದರ ಪರಿಚಯ ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಪಿ.ಸಜ್ಜನ, ವಂದರ್ನಾಪಣೆ ಕಜಾಪ ಕಾರ್ಯದರ್ಶಿ ಡಾ.ಹಣಮಂತರಾಯ ರಾಂಪುರೆ,ನಿರೂಪಣೆ ಕಜಾಪ ಕಾರ್ಯದರ್ಶಿ ಶ್ರೀಮತಿ ರೇಣುಕಾ ಎಸ್ ವಹಿಸಿದರು. ಕಜಾಪ ಸಂಘಟನಾ ಕಾರ್ಯದರ್ಶಿ ಶರಣಬಸಪ್ಪ ಬೇಳಕೇರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here