ರಾಮಗಿರಿ ಮಹಾರಾಜ್ ಬಂಧನಕ್ಕೆ ಒತ್ತಾಯ: ಕಠಿಣ ಕಾನೂನು ಜಾರಿಗೆ ಆಗ್ರಹ

0
65

ಕಲಬುರಗಿ: ಸೌಹಾರ್ದ ಪ್ರೀತಿಯ ಸಾಕಾರ ಮೂರ್ತಿ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವ ಸಲ್ಲಮ್  ಅವರ ಕುರಿತು ಅವಹೇಳವಾಗಿ ಮಾತನಾಡಿದ ರಾಮಗಿರಿ ಮಹಾರಾಜ್ ಬಂಧನಕ್ಕೆ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಕಲಬುರಗಿಯಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ ನಡೆಸಿದ್ದರು.

ನಗರದಲ್ಲಿ ಮುಸ್ಲಿಂ ಚೌಕ್ ನಿಂದ ರೋಜಾ ಪೊಲೀಸ್ ಠಾಣೆ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ ಜನತಾ ಪರಿವಾರ ಮತ್ತು ನಗರದ ಇತರ ಸಂಘಟನೆಗಳಾದ ಜಾಯಿಂಟ್ ಆಕ್ಷನ್ ಕಮಿಟಿ ನೇತೃತ್ವದಲ್ಲಿ ಆಯೋಜಿಸಿರುವ ಪ್ರತಿಭಟನಾ ರ‍್ಯಾಲಿ ನಡೆಸಿದರು.

Contact Your\'s Advertisement; 9902492681

ದೇವರಿಗೆ, ಗೌತಮ ಬುದ್ಧ, ಈಸಾ (ಅ.ಸ.), ಮಹಾವೀರ ಜೈನ್ ವಿರುದ್ಧವೂ ಅವಮಾನ ಮಾಡುವಂತಿಲ್ಲ ಎಂದು ಕಾನೂನು ರೂಪಿಸಬೇಕು ಎಂದು  ಪ್ರತಿಭಟನೆಯಲ್ಲಿ ಕರ್ನಾಟಕ ವಿಧಾನ ಸಭೆ ಮತ್ತು ಸಂಸತ್ತಿನಲ್ಲಿ ಕಠಿಣ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಲಾಯಿತು.

ಸರಕಾರದ ಆಸಕ್ತಿ ಕೊರತೆಯಿಂದಾಗಿ ಕಲಬುರಗಿಯಲ್ಲಿ ರಾಮಗಿರಿ ಮಹಾರಾಜ್ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿಲ್ಲ ಎಂದು ಸೀರತ್ ಕಮಿಟಿ ಸದಸ್ಯರು ಹಾಗೂ ಸ್ಥಳೀಯ ನಾಯಕರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಕಾಂಗ್ರೆಸ್ ಶಾಸಕರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಕೇಂದ್ರದ ಬಿಜೆಪಿ ಮತ್ತು ರಾಜ್ಯ ಕಾಂಗ್ರೆಸ್ ಪಲೇಸ್ತೈನ್ ಮೇಲೆ ಇಸ್ರೇಲ್ ಬಾಂಬ್ ದಾಳಿ ಹಾಗೂ ಕೊಲ್ಹಾಪುರ ಮಸೀದಿಯಲ್ಲಿ ನಡೆದ ದಾಳಿ ಸಂಬಂಧಿಸಿ ಮುಸ್ಲಿಮರ ಪ್ರತಿಭಟನೆಯನ್ನು ಹತ್ತಿಕ್ಕಿವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿದರು.

ಜನತಾ ಪರಿವಾರದ ಅಧ್ಯಕ್ಷರಾದ ಸಿರಾಜ್ ಶಬ್ದಿ ಅಝರ್ ಮುಬಾರಕ್, ಅಲ್ಪಸಂಖ್ಯಾತರ ಅಧ್ಯಕ್ಷರು, ಹಿರಿಯ ಪತ್ರಕರ್ತ ಅಜೀಜುಲ್ಲಾ ಸರಮಸ್ತ್, ಅಫ್ಜಲ್ ಮಹ್ಮೂದ್, KMPF ಕಾರ್ಯದರ್ಶಿ ಇಮ್ತಿಯಾಜ್ ಸಿದ್ಧಿಕಿ, ಇತ್ತಿಹಾದ್ ಎ ಮಿಲ್ಲತ್ ಅಧ್ಯಕ್ಷ ಹಬೀಬ್ ಸರಮಸ್ತ್, ವಕ್ಫ್ ಸಲಹಾ ಸಮಿತಿ ಗುಲಬರ್ಗಾದ ಅಧ್ಯಕ್ಷ, ಹೈದರ ಭಾಗ್‌ಬನ್, ಅಡ್ವಕೇಟ್ ಅಬ್ದುಲ್ ಜಬಾರ್ ಗೋಲಾ, KMPF ಗುಲಬರ್ಗಾ ಅಧ್ಯಕ್ಷ, ಮೆರಾಜುದ್ದೀನ್ ಸಾಮಾಜಿಕ ಹೋರಾಟಗಾರ, IUML ನಾಯಕ ಬಸೀರ್ ಆಲಂ ಮತ್ತು ಇನ್ನಿತರ ಉಲಮಾ ಏ ಇಕ್ರಾಮ್ ಮತ್ತು ಯುವಕರು ಪ್ರಚುರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here