ದೇಶದ ಯುವ ಜನತೆ ಕಲ್ಯಾಣ ಕ್ರಾಂತಿ ಹಚ್ಚಬೇಕಾಗಿರುವುದು ಅನಿವಾರ್ಯ

0
105

ಶಹಾಬಾದ: ದೇಶದಲ್ಲಿ ಜಾತಿ-ಮತ, ಭೇದ-ಭಾವ, ಮೇಲು-ಕೀಳು ಎಂಬ ಮೌಢ್ಯಗಳು ಹೆಚ್ಚಾಗಿವೆ. ಹಾಗಾಗಿ ದೇಶದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ದೇಶದ ಯುವ ಜನತೆ ಬಸವಣ್ಣನವರ ಕಲ್ಯಾಣ ಕ್ರಾಂತಿಯನ್ನು ಮತ್ತೆ ಹಚ್ಚಬೇಕಾದ ಅನಿವಾರ್ಯತೆ ಇದೆ ಎಂದು ಮರತೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರವೀಂದ್ರ ನರೋಣಿ ಹೇಳಿದರು.

ಅವರು ಮರತೂರ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ 12ನೇ ಶತಮಾನದ ಕಲ್ಯಾಣ ಕ್ರಾಂತೀಯ ಕುರಿತು ಆಯೋಜಿಸಲಾದ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದರು.

Contact Your\'s Advertisement; 9902492681

ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ಸಮಾನತೆ ಸಮಾಜದ ರಚನೆ ಮೂಲ ಮಂತ್ರವಾಗಿತ್ತು. ಅಂತರಜಾತಿ ವಿವಾಹ ಬಸವಣ್ಣನವರ ತತ್ವಗಳು ನಮ್ಮೆಲ್ಲರ ರಕ್ತಗತವಾಗಿ ರೂಢಿಸಿಕೊಳ್ಳಬೇಕು. ಜಾತಿರಹಿತ ಸಮಾಜಕ್ಕೆ ಮನ್ನಣೆ ನೀಡಿ ಅದರಂತೆ ಬದುಕಿದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಉಪನ್ಯಾಸಕ ನೀಲಕಂಠರಾಯ.ಜಿ.ಕೊಂಡಗೂಳ ಮಾತನಾಡಿ,ವಿಶ್ವಕ್ಕೆ ವಚನದ ಮೂಲಕ ಜ್ಞಾನದ ಬೆಳಕು ನೀಡಿದ ವಿಶ್ವ ಗುರು ಬಸವಣ್ಣ. ವೈಚಾರಿಕ ಕಲ್ಪನೆ ಮೂಲಕ ಸಮ ಸಮಾಜ ರಚಿಸಿದವರು ಬಸವಣ್ಣ. ಕಾಯಕಕ್ಕೆ ಪ್ರಧಾನ ಸ್ಥಾನ ನೀಡಿದವರು ಅಪ್ಪ ಬಸವಣ್ಣನವರು. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ ಎಂದರು .

ಬಸವಣ್ಣವರು ಸಾಮಾಜಿಕ ಕ್ರಾಂತಿ ಮಾಡಿದ ಪ್ರಥಮರು. ದಯವಿಲ್ಲದ ಧರ್ಮಕ್ಕೆ ಮಹತ್ವವಿಲ್ಲ. ಸಕಲ ಜೀವಿಗಳಿಗೆ ಲೇಸನ್ನು ಬಯಸುವದೆ ಮಾನವೀಯ ಮೌಲ್ಯ. ಮೌಢ್ಯಗಳನ್ನು ಸಮಾಜದಿಂದ ಕಿತ್ತು ಹಾಕುವ ಬಸವಣ್ಣನವರ ಸಂಕಲ್ಪವಾಗಿತ್ತು . ಇಂದು ಬಸವಣ್ಣನವರ ವಿಚಾರಗಳನ್ನು ವಿಶ್ವವೇ ಸ್ವೀಕರಿಸಿದೆ ಎಂದರು. ಅಂತರಜಾತಿಯ ವಿವಾಹದಿಂದ ಕಲ್ಯಾಣ ಕ್ರಾಂತಿಗೆ ಕಾರಣವಾಯಿತು.

ಸಮಾಜದಲ್ಲಿ ಜಾತಿ ಪ್ರಭಾವ ಆಳವಾಗಿ ಬೇರೂರಿದ್ದ 12ನೇ ಶತಮಾನದಲ್ಲೇ ಬಸವಣ್ಣನವರು ಅಂತರ್ಜಾತಿ ವಿವಾಹದ ಮೂಲಕ ದೊಡ್ಡ ಕಲ್ಯಾಣ ಕ್ರಾಂತಿ ಮೂಡಿದರು. ಇದರಿಂದ ಇಡೀ ಬ್ರಾಹ್ಮಣ ಸಮುದಾಯ ಅವರನ್ನು ವಿರೋಧಿಸಿತು.

ಪರಿಣಾಮ ಬಸವಣ್ಣನವರು ತಮ್ಮ ಅಧಿಕಾರ, ಪದವಿಯನ್ನು ಕಳೆದುಕೊಂಡರು.ಇತ್ತೀಚಿನ ದಿನಗಳಲ್ಲಿ ಕೆಲವರು ಅಧಿಕಾರದ ಆಸೆಗಾಗಿ ಧರ್ಮ, ಭಾμÉಯನ್ನೇ ತೊರೆಯುತ್ತಿದ್ದಾರೆ. ಆದರೆ, 12ನೇ ಶತಮಾನದಲ್ಲೇ ಭಾμÉ, ಧರ್ಮಕ್ಕಾಗಿ ತನ್ನ ಅಧಿಕಾರವನ್ನೇ ತ್ಯಾಗ ಮಾಡಿದ ಶ್ರೇಷ್ಠ ನಾಯಕ ಬಸವಣ್ಣ ಎಂದು ಸ್ಮರಿಸಿದರು.

ಶರಣಯ್ಯಸ್ವಾಮಿ ಮಠಪತಿ ಉದ್ಘಾಟಿಸಿದರು. ಶಾಮರಾಯಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಿವಮೂರ್ತಿ ಹಿರೇಮಠ,ಶಂಕರ ನವಣಿ,ಸಂಗಣ್ಣ ಮೈನಾಳ,ಶಿವಯ್ಯಸ್ವಾಮಿ ಹರಸೂರ ಅವರನ್ನು ಸನ್ಮಾನಿಸಲಾಯಿತು.ಶರಣಬಸಪ್ಪ ಪಟೇದ್,ಹುಣಚಪ್ಪ ಮಸಗಲ್,ಮಲ್ಲಣ್ಣ ಅಣಕಲ್,ನಾಗಣ್ಣ ರಾಯನಾಡ,ಬಸವರಾಜ ಪಾಳಾ, ಶಿವಾನಂದ. ಕೆ.ಪಾಟೀಲ,ಶರಣು ಪರಗೊಂಡ, ಲಕ್ಷ್ಮಿಕಾಂತ ಮಡಿವಾಳ, ಭೀಮರಾಯ ದುಗ್ಗುಂಡ,ಭಗವಂತರಾಯ ಕಲಬುರಗಿ,ಸಿದ್ಧರಾನ ಪ್ಯಾರಸಾಬಾದಿ, ಶಿವಾನಂದ ಮೈನಾಳ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here