ಕಲಬುರಗಿ; ಅಭಿವೃದ್ಧಿಗೆ ಒಂದು ರುಪಾಯಿ ಕೂಡಾ ಅನುದಾನ ತಂದಿಲ್ಲವೆಂಬ ಮಾಜಿ ಶಾಸಕ ದತ್ತಾತ್ರೇಯ ಪಾಟೀಲರ ಹೇಳಿಕೆಗೆ ತಿರುಗೇಟು ನೀಡಿರುವ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ ಇವರು, ಮಹಾನಗರದ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ, ಒಂದೂವರೆ ವರ್ಷದಲ್ಲೇ ನಗರದ ವಿವಿಧ ಕೆಲಸಕಾರ್ಯಗಳಿಗಾಗಿ ಅಂದಾಜು 100 ಕೋಟಿ ರುಪಾಯಿ ಅನುದಾನ ಹರಿದು ಬಂದಿದೆ ಎಂದು ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಶಾಸಕರು, ಕಲಬುರಗಿ ಅಭಿವೃದ್ಧಿಗೆ ಸಿಎಂ ಅನುದಾನ 25 ಕೋಟಿ ರು ಮಂಜೂರಾಗಿದೆ, ಇದರಲ್ಲಿ ಸಮುದಾಯ ಭವನಗಳಿಗೆ 5 ಕೋಟಿ ರು, ರಸ್ತೆ ದುರಸ್ಥಿಗೆ 5 ಕೋಟಿ ರುಸೇರಿದಂತೆ ಸಮಗ್ರ ಪ್ರಗತಿ, ಮೂಲ ಸವಲತ್ತಿಗೆ ಅನುದಾನ ಮೀಸಲಿಡಲಾಗಿದೆ ಎಂದಿದ್ದಾರೆ.
ಇದನ್ನು ಹೊರತು ಪಡಿಸಿ ಪಾಲಿಕೆಯವರು ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿನ ಕೆಲಸಗಳಿಗಾಗಿ 2 ಕೋಟಿ ರು ಹೆಚ್ಚುವರಿ ಪ್ರಸ್ತಾವನೆ ಸಿದ್ಧಪಡಿಸಿದ್ದು ಇದಕ್ಕೂ ಮಂಜೂರಾತಿ ದೊರಕಿದೆ. ಪಾಲಿಕೆಯಡಿಯಲ್ಲಿ ಒಳ ಚರಂಡಿಗಳ ದುರಸ್ಥಿಗೆ 41 ಕೋಟಿ ರು ಅನುದಾನ ನಗರಾಭಿವೃದ್ಧಿ ಇಲಾಖೆಯಿಂದ ಬಂದಿದೆ.
ಕೆಕೆಆರ್‌ಡಿಬಿಯಿಂದ ಸಾಸಕರ ಅನುದಾನ 9 ಕೋಟಿ ರು ಹಾಗೂ ಹೆಚ್ಚುವರಿ ಅನುದಾನ 10 ಕೋಟಿ ರು ಬಂದಿದೆ. ಇದಲ್ಲದೆ ಕೆಪಿಟಿಸಿಎಲ್ ಉಪ ಕೇಂದ್ರಗಳು, ಕಾಲೇಜು ಕಟ್ಟಡ ನಿರ್ಮಾಣ, ಅಂಗನವಾಡಿಗಳ ನಿರ್ಮಾಣಕ್ಕೆಂದು ಬಿಡುಗಡೆಯಾಗಿರುವ ಅನುದಾನವೆಲ್ಲವೂ ಸೇರಿದಂತೆ ಒಂದೂವರೆ ವರ್ಷದಲ್ಲೇ 100 ಕೋಟಿ ರು ಅಭಿವೃೃದ್ಧಿ ಅನುದಾನ ಕಲಬುರಗಿಗೆ ತಾವು ತಂದಿರೋದಾಗಿ ಸ್ಪಷ್ಟಪಡಿಸಿದ್ದಾರೆ.
ಶಾಸಕರ ಪತ್ರಿಕಾ ಹೇಳಿಕೆಯ ಮುಖ್ಯ ಸಂಗತಿಗಳು,
1) ಕಲಬುರಗಿಗೆ ಉತ್ಕೃಷ್ಟ ವೈದ್ಯಕೀಯ ಸೇವೆಗಳು ಬರಬೇಕು ಎಂಬುದಕ್ಕೆ ಸಂಪೂರ್ಣ ಸಹಮತವಿದೆ. ಆದರೆ ಮೂಲ ಸವಲತ್ತು ನಿಮ್ರಿಸುವವರು ಪಾಲಿಕೆಯ ನಿಯಮದಂತೆ ತೆರಿಗೆ ಕಟ್ಟಬೇಕು ತಾನೆ. 1 ಕೋಟಿ ರು ತೆರಿಗೆಯ ಪೈಕಿ ಇದುವರೆಗೂ 34 ಲಕ್ಷ ಮಾತ್ರ ಭರಿಸಿದ್ದಾರೆ. ಕಟ್ಟಡ ಪರವಾನಿಗೆಯಂತೆ ಅವದಿಯೊಳಗೇ ಕಟ್ಟಡ ಕಟ್ಟಲಾಗಿಲ್ಲ, ಇವೆಲ್ಲ ಕಾರಣಕ್ಕಾಗಿ ನಾನು ತೆರಿಗೆ ಹಣ ಪಾವತಿ ವಿಚಾರದಲ್ಲಿ ಆಕ್ಷೇಪಣೆ ಎತ್ತಿರುವೆ.
ಹೀಗೆ ಆಕ್ಷೇಪಣೆ ಎತ್ತಿದರೆ ಎಸ್‌ಐ ಆಗುತ್ತಾರಾ? ಪಾಲಕೆಗೆ ಮೊದಲೇ ತೆರಿಗೆ ಬರುತ್ತಿಲ್ಲ. ಬರೋ ತೆರಿಗೆಯೂ ಹೀಗೆ ಬಾಕಿ ಉಳಿದರೆ ಹೇಗೆ? ಶಾಸಕನಾದವ ಜನಪರ ಕೆಲಸಗಳನ್ನು ಮಾಡುವಾಗ ಎಸ್ಸೈ ಅಲ್ಲ, ಸಿಪಾಯಿಯಾಗಿಯೂ ಕೆಲಸ ಮಾಡಬೇಕಾಗುತ್ತದೆ. ಕಲೆದ 4 ದಶಕದಲ್ಲಿ ಇಂತಹ ಜನಪರ ಕೆಲಸಗಳಿಗೆಗಾಗಿ ತಾವು ಏನೆಲ್ಲಾ ಟೀಕೆ ಟಿಪಪಣಿ ಸ್ವೀಕರಿಸಿದ್ದಾಗಿಯೂ, ಇಂತಹ ಟೀಕೆಗಳು ವೈಯಕ್ತಿಕ ಎಂದು ಹೇಳೋದು ಸರಿಯಲ್ಲ
2) ಕಳೆದ ಪಾರ್ಲಿಮಂಟ್ ಚುನಾವಣೆಯಲ್ಲಿ ದಕ್ಷಿಣದಿಂದ 10 ಸಾವಿರ ಬಿಜಪಿಗೆ ಲೀಡ್ ಬಂದಿದೆ, ಅಲ್ಲಂಪ್ರಭು ಉಮೇಶ ಜಾದವ ಪರ ಕೆಲಸ ಮಾಡಿದ್ದಾರೆಯೆ ಎಂದು ದತ್ತಾತ್ರೇಯ ಪಾಟೀಲರು ಕೇಳಿದ್ದಾರೆ. ರಾಜಕೀಯ ಬದುಕಲ್ಲೇ ಅವರು ತಿಳಿದಂತೆ ಇಂತಹ ಕೀಳು ರಾಜಕಾರಣ ಮಾಡಿಲ್ಲ. ಹಿಂದೆ ಬಿಜೆಪಿ ಅಭ್ಯರ್ಥಿ ಬಿಜಿ ಪಾಟೀಲರ ಎಂಎಲ್‌ಸಿ ಚುನಾವಣೆಯಲ್ಲಿ ದತ್ತಾತ್ರೇಯ ಪಾಟೀಲರು ಅದೇನು ಮಾಡಿದ್ದಾರೆಂಬುದು ಎಲ್ಲರಿಗೂ ಗೊತ್ತಿಗೆ. ಅದನ್ನು ಅವರು ವಿವರಿಸಲಿ ನೋಡೋಣ
3) ನಾನು, ನನ್ನ ಮಗ ಇಬ್ಬರೂ ಕ್ಲಾಸ್ ಒನ್ ಗುತ್ತಿಗೆದಾರರು. ಆದರೆ ಇಂದಿಗೂ ಒಂದೂ ಕಾಮಗಾರಿ ನಮ್ಮ ಪರವಾನಿಗೆಯ ಮೇಲೆ ಮಾಡಿಲ್ಲ. ಒಂದೂ ತಿಳಿಯದೆ ದತ್ತಾತ್ರೇಯ ಪಾಟೀಲ್ ಆರೋಪ ಮಾಡೋದು ಸರಿಯಲ್ಲ. ಅಕ್ರಮ ಮರಳುಗಾರಿಕೆಯಲ್ಲಿ ನನ್ನ ಮಗನಾಗಲಿ, ನಾನಾಗಲಿ ಯಾವುದೇ ಪ್ರಭಾವ ಬೀರಿಲ್ಲ. ಅಂತಹದ್ದೇನಾದರೂ ಇದ್ರೆ ದಾಖಲೆ ಸಮೇತ ಹೇಳಲಿ. ಸುಳ್ಳು ಹೇಳಿ ದಿಕ್ಕು ತಪ್ಪಿಸೋದು ಬಿಡಿ
4) ಸಿಎ ಸೈಟ್‌ನಲ್ಲಿ ಮಳಿಗೆ ಮಾಡೋದಾಗಲಿ, ಔಷಧಿ ಭವನ ಬಾಡಿಗೆ ಕೊಡೋದಾಗಲಿ ಕಾನೂನು ವಿರುದವಾದದ್ದು್ಧ ಎಂಬುದು ಗೊತ್ತಿದ್ದರೂ ಕಮ್ಮಿ ಬಾಡಿಗೆ ಪಡೆದು ಭವನ ಬಾಡಿಗೆ ಕೊಡುತ್ತಿದ್ದೇವೆಂದು ಮಾಜಿ ಶಾಸಕರೇ ಒಪ್ಪಿಕೊಂಡಿದ್ದಾರೆ. ಉಲ್ಲಂಘನೆ ಉಲ್ಲಂಘನೆಯೇ ಅದು ಸಣ್ಣದು, ದೊಡ್ಡದು ಅಂತಿರೋದಿಲ್ಲ. ಅಲ್ಲಿ ಮಲಿಗೆ ನಿರ್ಮಿಸಿ ಕೆಲಸಗಾರರಿಗೆ ಕೊಟ್ಟಿದ್ದೇವವೆಂದು ಹೇಳಿದ್ದಾರೆ. ಮಳಿಗೆ ಮಾಡೋದೇ ತಪ್ಪು, ಇನ್ನು ಬಾಡಿಗೆಯೋ, ಉಚಿತವೋ ಇದೆಲ್ಲವೂ ಅನಗತ್ಯ.
5) ನನ್ನ ಅಧ್ಯಕ್ಷತೆಯಲ್ಲಿರೋ ಗೊಲ್ಲಾಲೇಶ್ವರ ಶಿಕ್ಷಣ ಸಂಸ್ಥೆ ಸಿಎ ಸೈಟ್‌ನಲ್ಲಿ ಶಿಕ್ಷಣ ಕೆಲಸಗಳನ್ನೇ ಮಾಡುತ್ತಿದೆ. ಬಡ ಮಕ್ಕಳಿಗೆ ಅನುಕೂಲವಾಗುವಂತೆ ಕೆಲಸ ಸಾಗಿದೆ. ಅಲ್ಲಿ ಪಿಯುಸಿ ಕಾಲೇಜು ಮಾಡಿರೋದೇ ತಪ್ಪು ಅನ್ನೋದಾದ್ರೆ ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವೆ, ಶಾಸಕರು ಔಷಧಿ ವರ್ತಕರ ಸಂಘದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಡಲಿ ನೋಡೋಣ?
6) ಪಿಡಬ್ಲೂಡಿಯಲ್ಲಿ ನನ್ನ ಅಳಿಯ ಶಿವಕುಮಾರ ಪಟ್ಟಣಸೆಟ್ಟಿಯವರನ್ನು ಪೋಸ್ಟಿಂಗ್ ಮಾಡಿಸಲು ನಾನು ಪ್ರಭಾವ ಬೀರಿದೆ ಎಂದಿದ್ದಾರೆ. ಇದು ಶುದ್ದ ಸುಳ್ಳು. ಅವರು ಬಂಗಳೂರಲ್ಲಿದ್ದರು. ಇಲಾಖೆಯ ನಿರ್ಧಾರದಿಂದಾಗಿ ಅವರ ಪೋಸ್ಟಿಂಗ್ ಕಲಬುರಗಿಗೆ ಆಗಿದೆ.
ನನ್ನ ಬಂಧುವಾಗಿರುವ ಇದೇ ಶಿವಕುಮಾರ್ ಪಟ್ಟಣಶೆಟ್ಟಿಯವರು ಕಳೆದ 20 ವರ್ಷದಿಂದ ಕಲಬುರಗಿಯಲ್ಲೇ ಎಇ, ಎಇಇವರೆಗೂ ಇದ್ದರೂ ಕೂಡಾ ಯಾಕೆ ಪ್ರಶ್ನೆ ಉದ್ಭವವಾಗಲಿಲ್ಲ. ಆ ಅವಧಿಯಲ್ಲಿ ರೇವೂರ್ ಪರಿವಾರದವರೇ ಶಾಸಕರಾಗಿದ್ದರಲ್ಲ. ಆಗ ಉದ್ಭವವಾಗದ ಪ್ರಶ್ನೆ ಈಗೇಕೆ? ಶಿವಕುಮಾರ ಪಟ್ಟಣಶೆಟ್ಟಿ ನನ್ನ ಬಂಧು, ಆದರೆ ಅವರ ಪೋಸ್ಟಿಂಗ್ ಇಲಾಖೆಯ ನಿರ್ಣಯವೇ ಹೊರತು ನನ್ನ ಪ್ರಭಾವ, ಲೇಟರ್‌ನಿಂದ ಆದದ್ದಲ್ಲ. ಅವರನ್ನು 20 ವರ್ಷದಿಂದ ಇಲ್ಲೇ ಇಟ್ಟುಕೊಂಡವರೇ ಹೀಗೆ ಕೇಳಿದರೆ ಅವರಿಗೆ ನಾನು ಪ್ರಶ್ನಿಸುವಂತಾಗಿದೆ.
6) ನಾನು 2 ಬಾರಿ ಸೋತಿದ್ದೇನೆ, ಜನತಾ ತೀರ್ಪು ಗೌರವಿಸಿ ಮನೆಯಲ್ಲಿದ್ದೆ, ಈಗಿನ ಮಾಜಿ ಶಾಸಕರಂತೆ ನಾನು ವರ್ತಿಸಿಲ್ಲ. ನನಗೆ ಜನ ಗೆಲಲಿಸಿದ್ದಾರೆ, ಇದು ಸುಳ್ಳೆ, ನನಗೆ ಜನ ಗೆಲ್ಲಿಸಿದ್ದಾರೆಂದು ಹೇಳಿದರೂ ದತ್ತಾತ್ರೇಯ ರೇವೂರ್ ಅವರಿಗೆ ಕಿರಿಕಿರಿ ಆಗುತ್ತದೆ ಎಂದರೆ ಹೇಗೆ? ಜನಪರ ಕೆಲಸಗಳು ಸಾಕಷ್ಟು ಸಾಗಿವೆ. ಕ್ಷೇತ್ರದಲ್ಲಿ ಕೆಲಸಗಲು ಆಗಲು ಸಹಕರಿಸಲಿ. ವಿನಾಕಾರಣ ಆರೋಪ ಮಾಡೋದು ಇನ್ನಾದರೂ ಬಿಡಲಿ.
7) ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ತಹಶೀಲ್ ಕಚೇರಿಯ ಪ್ರಕರಣ ಬಗ್ಗೆ ಮಾತನಾಡಿದ್ದಾರೆ. ಅದೂ ಸುಳ್ಳು. ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಇವರು ಬಿಡಹಬೇಕು. ಕಾನೂನು ಪಾಲಿಸಬೇಕು.