ವಿದ್ಯಾರ್ಥಿಗಳಿಗೆ ಗುರಿ, ಗುರು ಎರಡೂ ಮುಖ್ಯ: ಬಣಗಾರ

0
150

ಕಲಬುರಗಿ: ಪ್ರತಿ ವಿದ್ಯಾರ್ಥಿಗೆ ಮುಂದೆ ಗುರಿ ಮತ್ತು ಹಿಂದೆ ಗುರು ಇರಬೇಕೆಂದು ಸಂಯುಕ್ತ ಕರ್ನಾಟಕ ಪತ್ರಿಕೆಯ ಕಲಬುರಗಿ ಆವೃತ್ತಿ ಸ್ಥಾನಿಕ ಸಂಪಾದಕ ಸುಭಾಷ ಬಣಗಾರ ಹೇಳಿದರು.

ನಗರದ ಶ್ರೀ ಗುರುಪಾದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಓದಬೇಕು ಎಂದು ಸಲಹೆ ಮಾಡಿದರು.
ಇದಕ್ಕೂ ಮೊದಲು ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು.

Contact Your\'s Advertisement; 9902492681

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖನದಾಳ ಸರಕಾರಿ ಪ್ರೌಢ ಶಾಲೆಯ ಸಂಗೀತ ಶಿಕ್ಷಕ ವೀರೇಶ ಹೂಗಾರ ಅವರನ್ನು ಸಂಸ್ಥೆಯ ಅಧ್ಯಕ್ಷ ವಾದಿರಾಜ ವ್ಯಾಸಮುದ್ರ ಸತ್ಕರಿಸಿದರು.

ಕಾಲೇಜಿನ ಉಪನ್ಯಾಸಕರಾದ ಡಾ. ಶರಣಬಸಮ್ಮ, ಸಿ. ಎಸ್. ಆನಂದ, ಜ್ಯೋತಿ ಗೋದೆ, ಭಾಗ್ಯಶ್ರೀ, ಮರಿಷಾ, ನಿಶಿತಾ, ಸವಿತಾ ಮತ್ತು ಸಹಾಯಕರಾದ ಗೌರಮ ಅವರನ್ನು ಸಂಸ್ಥೆಯ ಕಾರ್ಯದರ್ಶಿ ಗುರುಪ್ರಸಾದ್ ಅಂಬಲಗೀ ಮತ್ತು ನಿರ್ದೇಶಕರಾದ ಮೋಹಿನಿ ಬುದೂರ ಅವರು ಸತ್ಕರಿಸಿದರು.

ಸಂಸ್ಥೆಯ ಅಧ್ಯಕ್ಷ ವಾದಿರಾಜ ವ್ಯಾಸಮುದ್ರ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಪ್ರಭಂದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಕಾವೇರಿ ಮತ್ತು ಲಕ್ಷ್ಮಿ ನಿರ್ವಹಿಸಿದರು. ಸೌಮ್ಯಾ ಮತ್ತು ರಮ್ಯಾ ಪ್ರಾರ್ಥಿಸಿದರು. ಅಂಕಿತ ಸ್ವಾಗತಿಸಿದಳು. ವಿದ್ಯಾ ಒಂದಿಸಿದಳು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here