ಅತಿವೃಷ್ಟಿ ಹಾನಿ: ಕಲಬುರಗಿಗೆ 25 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‍ಗೆ ಆಗ್ರಹಿಸಿ ರೈತರ ಪ್ರತಿಭಟನೆ

0
75

ಕಲಬುರಗಿ: ಅತಿವೃಷ್ಟಿ ಬೆಳೆ ಹಾನಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಜಿಲ್ಲೆಗೆ 25 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸುವಂತೆ, ತೊಗರಿ, ಉದ್ದು, ಹೆಸರು ಹಾನಿಯಾದ ಬಗ್ಗೆ ಬೆಳೆ ಸಮೀಕ್ಷೆ ನಡೆಸಿ, ಉತ್ಪಾದನೆ ಆಧಾರದಲ್ಲಿ ಪರಿಹಾರ ನೀಡುವಂತೆ ಮತ್ತು ಬೆಳೆ ವಿಮೆ ಮಂಜೂರು ಮಾಡಲು ಒತ್ತಾಯಿಸಿ ಶುಕ್ರವಾರ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರಸ್ತೆ ತಡೆ ಚಳುವಳಿ ಮಾಡಿದರು.

ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಾ. ಸಾಯಬಣ್ಣ ಗುಡುಬಾ, ಅಲ್ತಾಫ್ ಇನಾಂದಾರ್, ಎಂ.ಬಿ. ಸಜ್ಜನ್, ದಿಲೀಪ್ ನಾಗೂರೆ, ಜಾಫರಖಾನ್, ಪ್ರಭು ಪ್ಯಾರಾಬದ್ದಿ, ಶಿವಾ ಸಲಗರ್, ರೇವಣಸಿದ್ದಪ್ಪ ಗೌಡ್ರು, ಪ್ರಕಾಶ್ ಜಾನೆ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿ, ಜಿಲ್ಲೆಯಲ್ಲಿಈ ವರ್ಷ ರೈತರು ಸರಿಯಾದ ಸಮಯಕ್ಕೆ ಮಳೆ ಬಂದಿರುವುದು ಅನ್ನದಾತರು ಖುಷಿ ಪಟ್ಟಿದ್ದರು. ಸರಿಯಾದ ಸಮಯಕ್ಕೆ ಮುಂಗಾರು ಬಿತ್ತನೆ ಮಾಡಿದ ರೈತರು ಈ ವರ್ಷದ ರೊಕ್ಕದ ಮಾಲು ಉದ್ದು, ಹೆಸರು, ಬಂಪರ್ ಬೆಳೆಗಳು ಬೆಳೆದು ನಿಂತವು ಈ ವರ್ಷ ರೈತರು ನಿಟ್ಟುಸಿರು ಬಿಟ್ಟಂತಾಗಿತ್ತು ಮೊನ್ನೆ 4 ಹಗಲು 3 ರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ ಹೊಲದಲ್ಲಿನ ಉದ್ದು ಹೆಸರು, ಮೊಳಕೆ ಒಡೆದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ರೈತರು ನೆಲಕ್ಕೆ ಹಾಸಿಗೆ ಹಾಕಿದ್ದಾರೆ. ರೈತರ ನೆರವಿಗೆ ರಾಜ್ಯ ಸರ್ಕಾರ ಬರಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದು ಒಟ್ಟು 606884 ಹೆಕ್ಟೇರ್. ಹೆಸರು ಬಿತ್ತನೆ ಮಾಡಿದ್ದು ಒಟ್ಟು 28655 ಹೆಕ್ಟೇರ್. ಉದ್ದು ಬಿತ್ತನೆ ಮಾಡಿದ್ದು 55444 ಹೆಕ್ಟೇರ್. ರೈತರು ಬಿತ್ತಿದ್ದ ಬೆಳೆಗಳ ಮೇಲೆ ನಂಬಿ ಕುಳಿತ್ತಿದ್ದ ರೈತರಿಗೆ ಮಳೆ ಬಂದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಹೆಸರು ಇನ್ನೂ ಕನಿಷ್ಠ ಶೇಕಡಾ 30ರಷ್ಟು ಬೆಳೆ ಹೊಲದಲ್ಲಿ ಮಳೆ ನೀರಿನಲ್ಲಿ ನೆನೆದು ಗಿಡದಲ್ಲಿ ಹೆಸರು ಮೊಳಕೆ ಒಡೆದಿದೆ ಉದ್ದು ಸಂಪೂರ್ಣ ರಾಶಿಯೇ ಆಗಿಲ್ಲ. ಇನ್ನು ಹೊಲದಲ್ಲಿ ಇದೆ ಮತ್ತು ತೊಗರಿ ಬೆಳೆಯಲ್ಲಿ ಸಹ ಉದ್ದು ಮಿಶ್ರ ಬೆಳೆ ಬಿತ್ತನೆ ಮಾಡಿದ್ದಾರೆ. ಶೇಕಡಾ 10ರಷ್ಟು ಮಾತ್ರ ಅಷ್ಟೇ ಉದ್ದು ಕೊಯ್ದು ರಾಶಿ ಮಾಡಿದ್ದಾರೆ ಮತ್ತು ಇನ್ನೂ ಶೇಕಡಾ 90ರಷ್ಟು ಉದ್ದು ಹೊಲದಲ್ಲಿ ಗಿಡದಲ್ಲಿ ಉದ್ದು ಮೊಳಕೆ ಒಡೆದು ಹಾಳಾಗಿ ಹೋಗಿದೆ. ಮೊಳಕೆ ಒಡೆದ ಹೆಸರು ಮತ್ತು ಉದ್ದು ಅಲ್ಲೆ ಹೊಲದಲ್ಲಿ ಬಿಡುವಂತಿಲ್ಲ. ಕೊಯ್ದು ರಾಶಿ ಮಾಡಿ ಮನೆಗೆ ತಂದ ಮೇಲೆ ಅದಕ್ಕೆ ಬೆಲೆ ಸಿಗಲ್ಲ. ಲಾಗೊಡಿ ರೈತರಿಗೆ ಸಾಲ ಭಾರವಾಗುತ್ತದೆ. ಹೀಗಾಗಿ ಈ ವರ್ಷ ಸಂಪೂರ್ಣ ಬೆಳೆ ನಷ್ಟವಾಗಿದೆ. ರೈತರಿಗೆ ದಿಕ್ಕು ತೋಚದಂತಾಗಿದೆ. ರೈತರು ಮುಖಕ್ಕೆ ಟವೆಲು ಹಾಕಿ ಗೋಳಾಡುತ್ತಿದ್ದಾರೆ. ರೈತರು ಹತಾಶರಾಗಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತೊಗರಿಯ ನಾಡಿನಲ್ಲಿ ಈ ವರ್ಷ ತೊಗರಿ ಬೆಳೆ ಹಳ್ಳದ ಹೊಲಗಳು, ತೆಗ್ಗಿನ ಹೊಲಗಳು, ನಾಲದ ಹೊಲಗಳು, ಕೆರೆ ನದಿ ದಂಡೆಯಲ್ಲಿರುವ ಹೊಲಗಳು, ಮುಖ್ಯ ಕಾಲುವೆ, ಮರಿ ಗಾಲುವೆ ಪಕ್ಕದಲ್ಲಿರುವ ಹೊಲಗಳು ತೊಗರಿ ಹಳದಿ ಬಣ್ಣ ಆಗಿ ನೀರು ಜಾಸ್ತಿಯಾಗಿ ತೊಗರಿ ಹಾನಿಯುಂಟು ಆಗುವ ಸಾಧ್ಯತೆಗಳು ಹೆಚ್ಚು ಕಾಣುತ್ತೇವೆ. ಇಲ್ಲಿಯವರೆಗೆ ಜಿಲ್ಲೆಯ ರೈತರ ಪರಿಸ್ಥಿತಿ ಬಗ್ಗೆ ಕಿಂಚಿತ್ತು ಕಾಳಜಿ ತೋರಿಸಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜವಾಬ್ದಾರಿ ಮರೆತಂತೆ ಎದ್ದು ಕಾಣುತ್ತದೆ ಎಂದು ಟೀಕಿಸಿದರು.

ಯಾವ ರೈತರ ಯಾವ ಬೆಳೆಗಳ ಬಗ್ಗೆ ಸಮಕ್ಷಮ ಕಾಣಲಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಗ್ರಾಮೀಣ ಪ್ರದೇಶಗಳಲ್ಲಿ ರೈತರು ಮಾತಾಡುವಂತಾಗಿದೆ. ಹೀಗಾದರೆ ರೈತರ ಒಕ್ಕಲುತನ ಗತಿ ಏನು ಎಂಬುದು ರೈತರು ಚಿಂತಾಜನಕರಾಗಿದ್ದಾರೆ. ತಕ್ಷಣವೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಅತಿ ಮಳೆಯಿಂದ ಹಾನಿಯುಂಟಾದ ಬೆಳೆ ಸಮೀಕ್ಷೆ ನಡೆಸಿ ಪ್ರತಿ ಎಕರೆ ಬೆಳೆವಾರು ಉತ್ಪಾದನೆ ಆಧಾರದಲ್ಲಿ ಬೆಳೆ ಹಾನಿ ಅಂದಾಜಿಸಿ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಾದ್ಯಂತ ನದಿ ಕೆರೆ ಹಳ್ಳಕೊಳ್ಳ, ನಾಲ ನರಿ ರಸ್ತೆಗಳು ಹದಗೆಟ್ಟು ಹೋಗಿವೆ. ಡಾಂಬರಿಕರಣ ರಸ್ತೆ ಕಿತ್ತಿ ಹೋಗಿವೆ. ತೆಗ್ಗು ಗುಂಡಿಗಳು ಬಿದ್ದಿವೆ. ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. ಜನ, ಜಾನುವಾರುಗಳು ಜನರು ಓಡಾಡಲು ಬಾರದಂತಾಗಿದೆ. ಅದು ಎಷ್ಟೋ ಗ್ರಾಮಗಳಲ್ಲಿ ಮನೆಗಳು ಬಿದ್ದಿವೆ. ಎಷ್ಟೋ ಗ್ರಾಮಗಳಲ್ಲಿನ ಮನೆಗಳಲ್ಲಿ ಸಹ ಮಳೆ ನೀರು ಹೊಕ್ಕು ಸತ್ಯಾನಾಸ್ ಆಗಿವೆ. ಬಡವರ ಮನೆಗಳು ಬೀದಿಗೆ ಬಿದ್ದಿವೆ. ಸೂರು ಇಲ್ಲದೆ ಜನರು ಸಾರ್ವಜನಿಕರು ಪರದಾಡುವಂತಾಗಿದೆ. ತಕ್ಷಣವೇ ರಸ್ತೆ ದುರಸ್ತಿ ಮಾಡಬೇಕು. ಮನೆಗಳಲ್ಲಿ ಮಳೆ ನೀರು ನುಗ್ಗಿರುವ ಕುಟುಂಬಸ್ಥರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here