ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ನೀಡುವಂತೆ ಒತ್ತಾಯ

0
24

ಸುರಪುರ: ಮೊದಲೆ ಬರಗಾಲದಿಂದ ಹಾಗೂ ನೆರೆ ಪ್ರವಾಹದಿಂದ ತತ್ತರಿಸಿಹೋಗಿರುವ ಜನರಿಗೆ ಉದ್ಯೋಗ ಖಾತ್ರಿಯೋಜನೆ ಅಡಿಯಲ್ಲಿ ಕಾಮಗಾರಿಗಳ ಫಾರಂ ೬ನ್ನಿ ಸಲ್ಲಿಸಿದರು ಸಹ ಕೆಲಸ ನೀಡದೆ ಪಂಚಾಯತ ಅಭಿವೃದ್ಧಿ ಅಧಿಕಾರಿ ಸತಾಯಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದವಲಸಾಬ ನದಾಫ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.

ನಗರದ ತಾಲೂಕು ಪಂಚಾಯತ ಕಛೇರಿ ಆವರಣದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಬೋನಾಳ, ಆಲ್ದಾಳ ಮತ್ತು ನಾಗರಾಳ ಗ್ರಾಮ ಜನರು ಬರಗಾಲದಿಂದ ತುಂಬಾ ನಷ್ಟದಲ್ಲಿದ್ದಾರೆ ಮೊನ್ನೆ ಮಹಾರಾಷ್ಟ್ರದಲ್ಲಿ ಸುರಿದ ಸತತ ಮಳೆಯಿಂದ ನಾಗರಾಳ ಗ್ರಾಮದ ಜಮೀನುಗಳು ಮುಳಿಗೆ ತೀರ ಸಂಕಷ್ಟ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ ಇತಂಹ ಸಮಯದಲ್ಲಿ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನೀಡಿ ಅವರ ಜೀವನಕ್ಕೆ ಆಸರೆ ಆಗುವುದನ್ನು ಬಿಟ್ಟು ಪ್ರಭಾವಿ ವ್ಯಕ್ತಿಗಳಿಗೆ ಮಣಿದು ಕೊಟ್ಟಿರುವ ಕೆಲಸವನ್ನು ಕಸಿದುಕೊಂಡಿರುವುದು ಯಾವ ನ್ಯಾಯ ಎಂದು ಖಾರವಾಗಿ ಇಓ ಜಗದೇವಪ್ಪ ಅವರನ್ನು ಪ್ರಶ್ನಿಸಿದರು.

Contact Your\'s Advertisement; 9902492681

ಪ್ರತಿಭಟನಾಕಾರರ ಬಳಿ ಬಂದ ತಾಲೂಕು ಪಂಚಾಯತ ಇಓ ಜಗದೇವಪ್ಪ ಸಮಸ್ಯಗಳ ಕುರಿತು ಮಾತನಾಡಿ ಶೀಘ್ರದಲ್ಲೆ ಕೋಲಿಕಾರ್ಮಿಕರಿಗೆ ನ್ಯಾಯ ಒದಗಿಸಿಕೋಡುವುದಾಗಿ ಭರವಸೆ ನೀಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರು ಯಲ್ಲಪ್ಪ ಚಿನ್ನಾಕಾರ, ಶರಣಪ್ಪ ಅನಸೂರ, ರಾಜು ದೊಡ್ಡಮನಿ, ಶರಣಪ್ಪ ಜಂಬಲದಿನ್ನಿ, ಲಕ್ಷ್ಮೀ ಅನಸೂರ, ಯಲ್ಲಪ್ಪ ಗುಡಿಮನಿ ಸೇರಿದಂತೆ ನೂರಾರು ಕಾರ್ಮಿಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here