ಕಾಳಗಿ ತಲುಪಿದ ವಿಕಾಸ ಪಥ ಯಾತ್ರೆ

0
215

ಕಾಳಗಿ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ವಿಕಾಸ ಪಥ ಯಾತ್ರೆಗೆ ಅದ್ದೂರಿ ಸ್ವಾಗತ ನೀಡಲಾಯಿತು.

7ನೇ ಭಾರತ ವಿಕಾಸ ಸಂಗಮದ (ಭಾರತ ಸಾಂಸ್ಕೃತಿಕ ಉತ್ಸವದ) ಮಾಹಿತಿ ನೀಡುವದಕ್ಕಾಗಿ ಸೇಡಂನ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ವಿಕಾಸ ಪಥ ರಥಯಾತ್ರೆ ಮಂಗಳವಾರ ಕಾಳಗಿಪಟ್ಟಣದ ಅಂಬೇಡ್ಕರ್ ವೃತ್ತಕ್ಕೆ ತಲುಪಿತು.

Contact Your\'s Advertisement; 9902492681

ವಿಕಾಸ ಪಥ ರಥ ಯಾತ್ರೆಯನ್ನು ಹಾಗೂ ಪೂಜ್ಯರನ್ನು ಸ್ವಾಗತಿಸುವ ಮೂಲಕ ರಥಯಾತ್ರೆಯನ್ನು ಕಾಳೇಶ್ವರ ಕಲ್ಯಾಣ ಮಂಟಪದ ವರೆಗೆ ಮೆರವಣಿಗೆ ಮೂಲಕ ಬರಮಾಡಿಕೊಂಡು ನಂತರ ಸೇಡಂನ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ದರ್ಶನ ಪಡೆದರು. ನಂತರ ಶ್ರೀಗಳಿಗೆ ದೇವಸ್ಥಾನ ಮತ್ತು ರಟಕಲ್ ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.

ಕಾಡಸಿದ್ದೇಶ್ವರ ಸ್ವಾಮೀಜಿ, ಸುತ್ತೂರು ಸ್ವಾಮೀಜಿ, ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ, ಸಚಿನ ತೆಂಡುಲ್ಕರ್, ಬಿಲ್ ಗೆಟ್ಸ್, ನಿತಿನ್ ಗಡ್ಕರಿ ಸೇರಿ ನಾಡಿನ ಮಠಾಧೀಶರು, ಸಂತರು, ಧರ್ಮ ದರ್ಶಿಗಳು, ಧಾರ್ಮಿಕ ಮುಖಂಡರು, ಚಿಂತಕರು, ವಿದ್ವಾಂಸರು ಭಾಗವಹಿಸಿ ಮಾರ್ಗದರ್ಶನ ನೀಡುವರು ಎಂದರು.

51 ಜನ ಪದಶ್ರೀ ಪುರಸ್ಕೃತರಿಗೆ ಸನ್ಮಾನ, ಕಲ್ಯಾಣ ಕರ್ನಾಟಕದ 51 ಜನ ಪೂಜ್ಯ ಸಾಧಕರಿಗೆ, ಭಾರತದ 51 ಸಾಧಕರಿಗೆ, 51 ಜನ ಅನಿವಾಸಿ ಭಾರತೀಯ ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಊಟ, ವಸತಿ ವ್ಯವಸ್ಥೆ ಇರುತ್ತದೆ. ಉತ್ಸವದ ಯಶಸ್ಸಿಗೆ ಎಲ್ಲರ ಇದಕ್ಕೂ ಮೊದಲು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ನೀಲಕಂಠ ಕಾಳೇಶ್ವರ ದೇವಸ್ಥಾನದ ವರೆಗೆ ವಿದ್ಯಾರ್ಥಿಗಳ ಕುಂಭ, ಕಳಸ, ವಿವಿಧ ವಾದ್ಯ ಮೇಳಗಳೊಂದಿಗೆ ವಿಕಾಸ ಪಥ ಯಾತ್ರೆ ಅದ್ದೂರಿ ಮೆರವಣಿಗೆ ಜರುಗಿತು.

ಸೂಗುರ(ಕೆ) ಪೂಜ್ಯ ಡಾ|ಚನ್ನರುದ್ರಮುನಿ ಶಿವಾ ಚಾರ್ಯರು, ರಟಕಲ್ ಪೂಜ್ಯ ರೇವಣಸಿದ್ದ ಶಿವಾಚಾರ್ಯರು, ಕೋಡ್ಲಿ ಬಸವಲಿಂಗ ಶಿವಾಚಾರ್ಯರು, ಮಂಗಲಗಿ ಪೂಜ್ಯ ಡಾ|ಶಾಂತ ಸೋಮನಾಥ ಶಿವಾಚಾರ್ಯರು, ಮುಖಂಡರಾದ ಶಿವಶರಣಪ್ಪ ಕಮಲಾಪೂರ, ವಿಶ್ವನಾಥ ವನಮಾಲಿ, ಶಿವರಾಜ್ ಪಾಟೀಲ ಗೊಣಗಿ, ವೀರಣ್ಣ ಗಂಗಾಣಿ, ಸತ್ಯನಾರಾಯಣ ವನಮಾಲಿ,” ಶಿವಶರಣಪ್ಪ ಗುತ್ತೇದಾರ, ರಾಜೇಂದ್ರಬಾಬು ಹೀರಾಪೂರ, ಜಗೇಶ ಮಾಲಿಪಾಟೀಲ, ಮಹೇಶ ಬಡಿಗೇರ, ಗುಂಡಪ್ಪ ಮಾಳಗಿ, ಸಂಜೀವರೆಡ್ಡಿ ರುಮ್ಮನಗೂಡ, ಅಣ್ಣರಾವ್ ಪೆದ್ದಿ ಶಿವಕುಮಾರ್ ಕಮಲಾಪೂರ, ಭೀಮರಾಯ ಮಲಘಾಣ, ಹಣಮಂತ ಕಾಂತಿ, ಶಾಮರಾವ್ ಕಡಬೂರ, ಬಸವರಾಜ ಹುಡದಳ್ಳಿ ಸುಂದರ ಸಾಗರ, ಪರಮೇಶ್ವರ ಮಡಿವಾಳ, ನೀಲಕಂಠ ಮಡಿವಾಳ ಇದ್ದರು. ಗುಂಡಪ್ಪ ಕರೆಮನೊರ ಪ್ರಾಸ್ತಾವಿಕ ಮಾತನಾಡಿದರು, ಸಂತೋಷ ಪತಂಗೆ ಸ್ವಾಗತಿಸಿದರು. ಶಿವಕುಮಾರ್ ಶಾಸ್ತ್ರಿ ನಿರೂಪಿಸಿದರು. ಅಣ್ಣರಾವ್ ಪದ್ದಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here