ಚಿತ್ತಾಪುರ | ನಾಗಾವಿ ಸಂಕೀರ್ಣ ಅಭಿವೃದ್ದಿ ಪಡಿಸಲು ಕಾರ್ಯಯೋಜನೆ: ಸಚಿವ ಪ್ರಿಯಾಂಕ್ ಖರ್ಗೆ

0
23

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿರುವ ಐತಿಹಾಸಿಕ ನಾಗಾವಿ ಸ್ಥಳವನ್ನು ಅಭಿವೃದ್ಧಿ ಪಡಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರಿನಲ್ಲಿ‌ ನಿನ್ನೆ (10/09/24) ಅಧಿಕಾರಿಗಳ ಸಭೆ ನಡೆಸಿ, ಮಾತನಾಡುತ್ತಿದ್ದ ಅವರು,
ಸ್ಮಾರಕಗಳನ್ನು ಉಳಿಸಿಕೊಂಡು ಸುಂದರ ಪ್ರವಾಸಿ ತಾಣವಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

Contact Your\'s Advertisement; 9902492681

ನಾಗಾವಿಯಲ್ಲಿ 10-13 ಶತಮಾನಗಳ ನಡುವೆ ಘಟಿಕಾಸ್ಥಾನವಿದ್ದು 400ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪಾಠ-ಪ್ರವಚನಗಳಲ್ಲಿ ನಿರತರಾಗಿರುತ್ತಿದ್ದು ಅವರಿಗೆ ಉಳಿದುಕೊಳ್ಳಲು ವಸತಿ ನಿಲಯಗಳ ವ್ಯವಸ್ಥೆ ಹಾಗೂ ಅತ್ಯುತ್ತಮ ಗ್ರಂಥಾಲಯವನ್ನೂ ಹೊಂದಿತ್ತು ಎಂಬ ಐತಿಹ್ಯಗಳಿವೆ. ಇಂತಹ ಇತಿಹಾಸ ಹೊಂದಿರುವ ಈ ಸ್ಥಳವನ್ನು ಉಳಿಸಿಕೊಂಡು, ಸ್ಮಾರಕಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿರುವುದರಿಂದ ನಾಗಾವಿ ದೇಗುಲಗಳು, ಶಾಸನ ಹಾಗೂ ಸ್ಮಾರಕಗಳನ್ನು ಒಳಗೊಂಡ ಸಂಕೀರ್ಣವನ್ನು ರೂಪಿಸಲಾಗುವುದರ ಜೊತೆಗೆ ಪ್ರವಾಸಿಗರಿಗೆ ವಾಹನ ತಂಗುದಾಣ, ವಿಶ್ರಾಂತಿ ಕೊಠಡಿ, ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು ಎಂದರು.

ಯಲ್ಲಮ್ಮ ದೇಗುಲ, ನಂದೀಶ್ವರ ದೇಗುಲ, ರಾಮೇಶ್ವರ ಹಾಗೂ ರಾವಣೇಶ್ವರ ದೇಗುಲಗಳು, ಕಡ್ಲೆ ಬಸವಣ್ಣ, ಹನುಮಾನ್‌ ಹಾಗೂ ವೀರಪ್ಪಯ್ಯ ದೇಗುಲಗಳು, ಮಧುಸೂಧನಾಲಯ, ಮಲ್ಲಯ್ಯನ ಹಾಗೂ ಈಶ್ವರನ ದೇಗುಲಗಳು, ಎರಡು ಮಸೀದಿಗಳು, ಒಂದು ಜೈನ ಬಸದಿಯನ್ನು ಒಳಗೊಂಡಂತೆ ನಾಗಾವಿ ಸಂಕೀರ್ಣವನ್ನು ರೂಪಿಸಲಾಗುವುದೆಂಬ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಮ್, ಪುರಾತತ್ವ ಇಲಾಖೆಯ ನಿರ್ದೇಶಕರಾದ ಸ್ಮಿತಾ ರೆಡ್ಡಿ ಸಭೆಯಲ್ಲಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here