ಎಕರೆಗೆ 25 ಸಾವಿರ ಪರಿಹಾರ ನೀಡಲು ರೈತರ ಆಗ್ರಹ

0
28
  • ಎಂ.ಡಿ ಮಶಾಖ ಚಿತ್ತಾಪುರ

ಚಿತ್ತಾಪುರ: ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ರೈತರು ಬೆಳೆದ ಉದ್ದಿನ ಬೆಳೆಯು ಕಟಾವು ಮಾಡಲು ಸಾಧ್ಯವಾಗದೇ ಇರುವುದರಿಂದ ಉದ್ದು ನೆನೆದು ಮೊಳಕೆಯೊಡೆಯುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಮೌನೇಶ ಕರದಾಳಕ‌ರ್ ಮತ್ತು ರೈತರು ತಮ್ಮ ಅಳಲು ತೊಡಿಕೊಂಡಿದ್ದಾರೆ.

ಐದು ಎಕರೆ ಜಮೀನಿನಲ್ಲಿ ಉದ್ದು ಬಿತ್ತನೆ ಮಾಡಿದ್ದೇ ಬೆಳೆಯೂ ಉತ್ತಮವಾಗಿಯೇ ಬಂದಿದೆ. ಆದರೆ ಸತತವಾಗಿ ಬರುತ್ತಿರುವ ಮಳೆಯಿಂದ ಉದ್ದಿನ ರಾಶಿ ಮಾಡಲು ಸಾಧ್ಯವಾಗುತ್ತಿಲ್ಲ. ಮಳೆಬರುತ್ತಿರುವ ವಾತಾವರಣ ನೋಡಿದರೆ ನಾವು ಬೆಳೆದಿರುವ ಬೆಳೆಯು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದ ನಮಗೆ ದಿಕ್ಕೇ ತೊಚದಂತಾಗಿದೆ.

Contact Your\'s Advertisement; 9902492681

ಇಷ್ಟೆಲ್ಲಾ ಬೆಳೆ ಹಾಳಾಗಿ ರೈತರು ಸಂಕಷ್ಟದಲ್ಲಿದ್ದರೂ ಕಂದಾಯ, ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಬೆಳೆ ಹಾಳಾಗಿರುವ ಕುರಿತು ಸಮೀಕ್ಷೆ ಮಾಡುತ್ತಿಲ್ಲ ಎಂದು ಆರೋಪಿಸಿದ ರೈತರು, ನಾವು ಬೆಳೆದ ಬೆಳೆ ಹಾಳಾಗಿರುವುದಕ್ಕೆ ಸರ್ಕಾರವು ಎಕರೆಗೆ 25 ಸಾವಿರ ಪರಿಹಾರ ಘೋಷಣೆ ಮಾಡಬೇಕು.

ಇಲ್ಲವಾದಲ್ಲಿ ರೈತ ಸಂಘವು ತಾಲೂಕು ಆಡಳಿತ ವಿರುದ್ಧ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here