ಕಲ್ಯಾಣ ಕರ್ನಾಟಕ ಭಾಗದಲ್ಲಿ 3ದಿನ ಅಧಿವೇಶನ ನಡೆಸಲು ಕರವೇ ಮನವಿ

0
16

ಕಲಬುರಗಿ: ಬೆಂಗಳೂರು ಇಲ್ಲಿನ ಶಾಸಕರ ಭವನದಲ್ಲಿ ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲೆಯ ಉಸ್ತುವಾರಿ ಮತ್ತು ಸಾರ್ವಜನಿಕ ಉದ್ದಿಮೆ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ ಗದ್ದುಗೆ ನೇತ್ರತ್ವದಲ್ಲಿ ಮುಂಬರುವ ದಿನಗಳಲ್ಲಿ ಕಲಬುರ್ಗಿಯಲ್ಲಿ ಮೂರು ದಿನ ಸಚಿವ ಸಂಪುಟ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯ ಮಾಡಬೇಕೆಂದು ಮನವಿ ಮಾಡಿದರು.

ಈ ಭಾಗದ ಕೊನೆ ಭಾಗದ ರೈತರಿಗೆ ನೀರು ಹಾಗೂ ಏಳು ಜಿಲ್ಲೆಗಳಲ್ಲಿ ಕ್ರೀಡಾಂಗಣ, ಮಿನಿವಿಧಾನಸೌಧ, ತಾಲೂಕಗಳಲ್ಲಿ ನಾಡ ತಾಸಿಲ್ದಾರ್ ಕಚೇರಿ, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಇಲಾಖೆಗಳನ್ನು ಸ್ಥಾಪಿಸಲು ಹಾಗೂ ಕಲಬುರಗಿ ಜಿಲ್ಲೆಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಮಾಡಲು ಮತ್ತು ವಾಡಿಯಿಂದ ಗದಗ್ ರೈಲು ಮಾರ್ಗ, ಆಲಮಟ್ಟಿ ಆಣೆಕಟ್ಟುಯಿಂದ ಯಾದಗಿರಿ ರೈಲು ಮಾರ್ಗವನ್ನು ಕೂಡಲೇ ಪ್ರಾರಂಭ ಮಾಡಲು ಮತ್ತು ಕಲಬುರ್ಗಿಯನ್ನು ಸ್ಮಾರ್ಟ್ ಸಿಟಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಬೇಕು ಸಭೆಯಲ್ಲಿ ಚರ್ಚೆ ಆಗುವಂತೆ ಮತ್ತು ಸಚಿವರಿಗೆ ಶಾಸಕರಿಗೆ ಸಂಸದರಿಗೆ ಧ್ವನಿ ಎತ್ತಲು ತಾವು ಕೂಡ ಒತ್ತಾಯ ಮಾಡಬೇಕೆಂದು ಮನವಿ ಮಾಡಿದರು.

Contact Your\'s Advertisement; 9902492681

ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಗೋಪಾಲ ನಾಟಿಕಾರ. ಸಂಚಾಲಕರಾದ ನಾಗರಾಜ್ ಪೂಜಾರಿ, ಯಡ್ರಾಮಿ ತಾಲೂಕಿನ ಅಧ್ಯಕ್ಷರಾದ ವಿಶ್ವನಾಥ ಪಾಟೀಲ್ ,ಶಹಾಬಾದ ಅಧ್ಯಕ್ಷರಾದ ವಿಶ್ವರಾಧ್ಯ ಫಿರೋಜಬಾದ್, ಕಲ್ಯಾಣ ಕರ್ನಾಟಕದ ಮುಖಂಡರಾದ ಮಂಜು ಕುಸೂನೂರು, ಸಂತೋಷ್ ಚೌದ್ರಿ,ನಗರ ಉಪಾಧ್ಯಕ್ಷರಾದ ಶರಣು ಡ್ಯಾಮ,ಯಡ್ರಾಮಿಯ ಅನಿಲ್ ಗುತ್ತೇದಾರ್, ಸಿದ್ದು ಗೌಡ, ಮಲ್ಲಯ್ಯ ಕುಕುನೂರು ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here