ಕಲಬುರಗಿ: ಈದ್ ಮಿಲಾದ್ (ಪ್ರವಾದಿ ಮುಹಮ್ಮದ್ ಅವರ ಜನ್ಮದಿನಾಚರಣೆ) ನಿಮಿತ್ತ ಕಲಬುರಗಿ ಮೂಲದ ಕಲಾವಿದರು ತಮ್ಮ 4 ನೇ ಇಸ್ಲಾಮಿಕ್ ಕಲಾ ಪ್ರದರ್ಶನ ಮತ್ತು ಸೆಮಿನಾರ್ ಅನ್ನು ಸೆಪ್ಟೆಂಬರ್ 16 ಮತ್ತು 17 ರಂದು ಕಲಬುರಗಿಯ ಸಂಗತ್ರಾಶ್ವಾಡಿಯ ಹಿದಾಯತ್ ಸೆಂಟರ್‍ನಲ್ಲಿ ಆಯೋಜಿಸುತ್ತಿದ್ದಾರೆ.
ಕಲಬುರಗಿ, ಚಿತ್ರದುರ್ಗ, ಧಾರವಾಡ, ಹುಮನಾಬಾದ್, ಬೀದರ್, ಬಿಜಾಪುರ, ಬಸವಕಲ್ಯಾಣ ಮತ್ತು ಶಹಾಪುರ ಸೇರಿದಂತೆ ಕರ್ನಾಟಕದಾದ್ಯಂತ 32 ಕಲಾವಿದರು ರಚಿಸಿದ ಚಿತ್ರಗಳನ್ನು ಎರಡು ದಿನಗಳ ಕಲಾ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು ಎಂದು ಸಂಚಾಲಕ ಮಹಮ್ಮದ್ ಅಯಾಜೋದ್ದೀನ್ ಪಟೇಲ್ ತಿಳಿಸಿದ್ದಾರೆ.
ಬಹಮನಿ ಫೌಂಡೇಶನ್ ಅಧ್ಯಕ್ಷ ರಿಜ್ವಾನ್ ಉರ್ ರೆಹಮಾನ್ ಸಿದ್ದಿಕಿ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.ಖ್ಯಾತ ಚಿತ್ರಕಲಾವಿದ ಬಸವರಾಜ ಆರ್.ಉಪ್ಪಿನ್, ಜೀ ಮೌಂಟ್ ಲಿಟರಾ ಶಾಲೆಯ ಅಧ್ಯಕ್ಷ ತಾಹೆರ್ ಅಲಿ, ಸರ್ಕಾರಿ ನಿವೃತ್ತ ಅಲ್ಪಸಂಖ್ಯಾತ ನೌಕರರ ಸಂಘದ ಅಧ್ಯಕ್ಷ ಸೈಯದ್ ನಜೀರುದ್ದೀನ್ ಮುತವಳ್ಳಿ, ಎಂಜಿನಿಯರ್ ಅಬ್ದುಲ್ ಕಾದರ್ ಅತಿಥಿಗಳಾಗಿ ಆಗಮಿಸುವರು.ಸಾಮಾಜಿಕ ಕಾರ್ಯಕರ್ತೆ ನೀಲಾ ಕೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಲಾವಿದ ರೆಹಮಾನ್ ಪಟೇಲ್ ತಿಳಿಸಿದರು.
ಪ್ರದರ್ಶನವು ಬೆಳಿಗ್ಗೆ 10.30 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ.
ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿರುವ ಲಾಹೋಟಿ ಮೋಟಾರ್ಸ್ ಶೋರೂಂನಲ್ಲಿ ಮಾರುತಿ ಅರೇನಾ ಕಂಪನಿಯ ದಿ ಡಾಸ್ಲಿಂಗ್ ನ್ಯೂ ಡಿಸೈರ್ ಕಾರ್…
ಕಲಬುರಗಿ: ನಗರದ ಜೀಮ್ಸ್ ಆಸ್ಪತ್ರೆಯಲ್ಲಿರುವ ಇಂದಿರಾ ಕ್ಯಾಂಟಿನ್‍ನಲ್ಲಿ ಕಳಪೆ ಆಹಾರ ವಿತರಣೆ ಮಾಡುತ್ತಿರುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಜೈ ಕನ್ನಡಿಗರ ಸೇನೆಯಿಂದ…
ಕಲಬುರಗಿ: ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾ ಸಮಿತಿವತಿಯಿಂದ ನವೆಂಬರ್ 14ರಂದು 8ನೇ ಪೀಠಾಧಿಪತಿಗಳು ಪೂಜ್ಯ ಡಾ. ಶ್ರೀ ಶರಣಬಸಪ್ಪ…
ವಿಜಯನಗರ (ಹೊಸಪೇಟೆ):ಪ್ರಸಕ್ತ ವರ್ಷದಲ್ಲಿ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಕೆಆರ್ ಡಿಬಿಯಿಂದ ರೂ. 348 ಕೋಟಿ ನೀಡಲಾಗಿದೆ ಎಂದು ಕಲ್ಯಾಣ…
ಕಲಬುರಗಿ; ಮೌನವಾಗಿರುವವರೆಲ್ಲ ದಡ್ಡರಲ್ಲ, ತುಂಬಾ ಮಾತನಾಡುವವರೆಲ್ಲ ಬುದ್ಧಿವಂತರಲ್ಲ, ಮಾತಿಗೆ ಒಂದರ್ಥವಿದ್ದರೆ, ಮೌನಕ್ಕೆ ಸಾವಿರ ಅರ್ಥವಿದೆ, ಅದರಂತೆ ಬಬಲಾದ ಗುರುಪಾದಲಿಂಗ ಪೂಜ್ಯರು…
ಕಲಬುರಗಿ: ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ವಿಜಯದಾಸರ ಆರಾಧನೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮಹಿಳಾ ಭಜನಾ…