ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 51ನೇ ವಾರ್ಷಿಕ ಮಹಾಸಭೆಯನ್ನು ಸಂಘದ ಪ್ರಭಾರಿ ಅಧ್ಯಕ್ಷರಾದ ಜಿ.ಡಿ.ನಂದಿಕೂರ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚನ್ನವೀರಯ್ಯ ಸ್ವಾಮಿ, ಕೋಷಾಧ್ಯಕ್ಷ ಎಸ್. ಪಿ. ಸುಳ್ಳದ, ನಿರ್ದೇಶಕರಾದ ವಿಲಾಸರಾವ್ ಎಸ್. ಸಿನ್ನೂರಕರ್, ಈರಣ್ಣ ಪಾಟೀಲ್, ಸಿದ್ದಲಿಂಗ ಕುಲಕರ್ಣಿ, ಸಿದ್ದಪ್ಪ ಮಹಾಗಾಂ, ಸಿದ್ದಣ್ಣ ಪೂಜಾರಿ, ಜಯಶ್ರೀ ಪಾಟೀಲ್, ಪ್ರಮೀಳಾ ಪಾಟೀಲ್ ಸೇರಿದಂತೆ ಇತರರು ಇದ್ದರು.