ಕಲಬುರಗಿ : 371 ಜೆ ಜಾರಿಗೆ ತಂದಿದ್ದು ನಾವು ಈ ಕಾನೂನನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸಿತೇ ಹೊರತರು ಬೆರೆಯವರಲ್ಲ ಎಂದು ಕಲಬುರಗಿಯಲ್ಲಿ ಮುಖ್ಯಮಂತ್ರಿಗಳು ಹೇಳಿರುವುದನ್ನು ಕಲಬುರಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು 371 ಜೆ ಕುರಿತು ಹೊರಾಟ ಪ್ರಾರಂಭಿಸಿರುವುದು ಮಾಜಿ ಸಚಿವರಾದ ದಿ. ವೈಜನಾಥ ಪಾಟೀಲ್ ಅವರು ಆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಲ್ಲಿದರು ಆ ಸಮಯದಲ್ಲಿ ತಾವೂ ಕೂಡ ಜೆಡಿಎಸ್ ಪಕ್ಷದಲ್ಲಿದಿರಿ ತಮಗೂ ಕೂಡ ಇದರ ಬಗ್ಗೆ ಗೊತ್ತಿದ್ದೆ ಆದಕಾರಣ 371 ಜೆ ಶ್ರೇಯಸ್ಸು ದಿ. ವೈಜನಾಥ ಪಾಟೀಲ್ ಅವರಿಗೆ ಸಲ್ಲೂತ್ತದೆ ಎಂದು ತಿಳಿಸಿದ್ದರು.
ಇನ್ನೂ ಸಚಿವ ಸಂಪುಟದಲ್ಲಿ ತೊಗರಿ ಮಂಡಳಿಗೆ ಬಲಿಷ್ಠ ಸ್ವರೂಪ ನೀಡಿ, ಇದರ ಮುಖಾಂತರ ಬೆಳೆಗೆ ಪೆÇ್ರೀತ್ಸಾಹ ಧನ, ಬೆಂಬಲ ಬೆಲೆ ನೀಡಿ, ಖರೀದಿಸಿ ಇದರ ಉತ್ಪನ್ನಗಳ ವಿವಿಧ ಸ್ವರೂಪದ ಮಾರುಕಟ್ಟೆ ನಿರ್ಮಾಣ ಮಾಡಬೇಕು. ಕಲಬುರಗಿಯ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಸಂಪುಟ ಸಭೆಯಿಂದ ಕೇಂದ್ರಕ್ಕೆ ಒತ್ತಡ ತರಬೇಕು, ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು 371ನೇ(ಜೆ) ಕಲಂ ಪರಿಣಾಮಕಾರಿ ಅನುμÁ್ಠನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಗುಳೆ ಹೋಗುವುದನ್ನು ತಪ್ಪಿಸಲು ಕೃಷಿ ಕ್ಷೇತ್ರದಲ್ಲಿ ಮತ್ತು ಕೃಷಿಯೇತರ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ವಿಶೇಷ ಆದ್ಯತೆ ನೀಡುವುದು. ಅದರಂತೆ ಕೌಶಲ್ಯ ಅಭಿವೃದ್ಧಿ ತರಬೇತಿಗಳು ಸಮಾರೋಪಾದಿಯಲ್ಲಿ ನಡೆಸುವುದು.
ಕಲ್ಯಾಣ ಕರ್ನಾಟಕ ಪ್ರದೇಶದ ಬೃಹತ್ ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆಗಳು ಕೃμÁ್ಣ ಭಾಗ್ಯ ಜಲನಿಗಮದ ವ್ಯಪ್ತಿಗೆ ಸೇರಿಸಲು ನಿರ್ಧಾರ ತೆಗೆದುಕೊಳ್ಳಬೇಕು. ಇದರಿಂದ ನಮ್ಮ ಭಾಗದ ನೀರಾವರಿ ಯೋಜನೆಗಳು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅನುಕೂಲವಾಗುತ್ತದೆ. ಅದರಂತೆ ಕಲ್ಯಣ ಕರ್ನಾಟಕದಲ್ಲಿ ಬ್ರಿಡ್ಜ್-ಕಂ-ಬ್ಯಾರೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಿ ನೀರಿನ ಸದುಪಯೋಗ ಮಾಡಿಕೊಳ್ಳುವುದು. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಕೃಷಿ ಮತ್ತು ಕೈಗರಿಕೆ ನೀತಿ ರೂಪಿಸಲು ಸಂಪುಟದಲ್ಲಿ ಅನುಮೊದನೆ ನೀಡಬೇಕು ಎಂದು ಒತ್ತಾಯಿಸಿದ್ದರು