ಕಲಬುರಗಿ: ನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಸಂಗಮ ವಿದ್ಯಾ ಮಂದಿರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಉತ್ತರ ವಲಯ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಾಡೋಜ ಡಾ.ಗೊ.ರು.ಚನ್ನಬಸಪ್ಪನವರ ಶತ,ಆನೋತ್ಸವ ಪ್ರಯುಕ್ತ ಕಬ್ಸ್, ಬುಲ್ ಬುಲ್, ಸ್ಕೌಟ್ಸ್ ಗೈಟ್ಸ್ ಮತ್ತು ರೇಂಜರ್ಸ್ ರವರಿಗಾಗಿ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಸಮಾರಂಭವನ್ನು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಡಾ. ಶಾಂತಾಬಾಯಿ ಬಿರಾದಾರ್ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾಯಕ್ರಮದಲ್ಲಿ ಸ್ಕೌಟ್ಸ್ ಜಿಲ್ಲಾ ಆಯುಕ್ತ ಎಸ್ ಪಿ ಸುಳ್ಳದ್, ಉತ್ತರ ವಲಯ ಬಿಎಸ್‍ಜಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪೀರಪ್ಪ ಹೂಗೊಂಡ, ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಸಂತೋಷ್ ಡಿಗ್ಗಿ, ವಿದ್ಯಾ ಮಂದಿರದ ಪ್ರಾಂಶುಪಾಲೆ ಜ್ಯೋತಿ ಇಮಡಾಪೂರ, ಜಿಲ್ಲಾ ತರಬೇತಿ ಆಯುಕ್ತರಾದ ಅಮರೇಶ್ ಕೋರಿ, ಸುಮಂಗಲ ಕೋರಿ, ಸಹ ಕಾರ್ಯದರ್ಶಿ ರಾಜಕುಮಾರ ಮರಾಠೆ, ಜೈಯಪ್ರಕಾಶ ಕಟ್ಟಿಮನಿ, ಡಾ. ಅವಿನಾಶ್, ನರಸಿಂಗ್ ರಾಠೋಡ್, ಸೇರದಂತೆ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.