ಭಾರತದಲ್ಲಿ ಬಂಡವಾಳಶಾಹಿ ಸರ್ಕಾರಗಳ ಆಡಳಿತ

0
38

ವಾಡಿ: ದೇಶ ಸ್ವಾತಂತ್ರ್ಯ ಹೊಂದಿದ ಗಳಿಗೆಯಿಂದ ಇಂದಿನ ವರೆಗೂ ಭಾರತದಲ್ಲಿ ಬಡವರ ಹೆಸರಿನ ಮೇಲೆ ರಾಜಕಾರಣ ನಡೆಯುತ್ತಿದ್ದರೂ ಬಂಡವಾಳಶಾಹಿ ಶೋಷಕರ ಪರವಾದ ಸರರ್ಕಾರಗಳೇ ಅಧಿಕಾರಕ್ಕೆ ಬಂದಿವೆ ಎಂದು ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ತಾಲೂಕು ಉಪಾಧ್ಯಕ್ಷ ಗುಂಡಣ್ಣ ಎಂ.ಕೆ ಆರೋಪಿಸಿದರು.

ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂಥ್ ಆರ್ಗನೈಸೇಷನ್ (ಎಐಡಿವೈಒ) ವತಿಯಿಂದ ರಾವೂರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಶಹೀದ್ ಭಗತ್‌ಸಿಂಗ್ ಅವರ ೧೧೨ ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಗರೀಬಿ ಹಟಾವ್ ಎಂಬ ಘೋಷಣೆ ಮುಂದಿಟ್ಟು ಕಳೆದ ಆರು ದಶಕಗಳಿಂದ ದೇಶದಲ್ಲಿ ಅಧಿಕಾರ ನಡೆಸಿರುವ ಕಾಂಗ್ರೆಸ್, ಬಡತನವನ್ನು ಬುಡ ಸಮೇತ ಕಿತ್ತೊಗೆಯಲು ಉದ್ಯೋಗ ಸೃಷ್ಠಿಯಂತಹ ಯೋಜನೆಗಳೆ ಮುಂದಾಗಲಿಲ್ಲ. ಬದಲಿಗೆ ಬಡತನವನ್ನು ಖಾಯಂ ಉಳಿಸಿರುವ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಅಚ್ಚೇ ದಿನಗಳು ತರುತ್ತೇವೆ ಎಂದು ಬಣ್ಣದ ಕಥೆ ಕಟ್ಟಿ ಅಧಿಕಾರಕ್ಕೆ ಬಿಜೆಪಿ, ಬಂಡವಾಳಶಾಹಿಗಳ ಪರವಾದ ಕಾನೂನುಗಳನ್ನು ಜಾರಿಗೆ ತರುವ ಮೂಲಕ ದೇಶದ ಜನತೆಗೆ ಮೋಸ ಮಾಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡೂ ರಾಜಕೀಯ ಪಕ್ಷಗಳಿಂದ ದೇಶದಲ್ಲಿ ಬಡತನ, ನಿರುದ್ಯೋಗ, ಬೆಲೆ ಏರಿಕೆ ಹಾಗೂ ಹಣದುಬ್ಬರ ಬಿಕ್ಕಟ್ಟು ಸೃಷ್ಠಿಯಾಗಿದೆ ಎಂದು ಆಪಾದಿಸಿದರು.

Contact Your\'s Advertisement; 9902492681

ಭಗತ್‌ಸಿಂಗ್ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಮಾತನಾಡಿದ ಎಐಡಿವೈಒ ಕಾರ್ಯದರ್ಶಿ ಮಲ್ಲಿನಾಥ ಹುಂಡೇಕಲ್, ದೇಶದ ಜನರ ಜೀವನಮಟ್ಟ ತೀರಾ ಕೆಳಮಟ್ಟಕ್ಕೆ ಜಾರಿದೆ. ಉಚಿತವಾಗಿ ಸಿಗಬೇಕಿದ್ದ ಶಿಕ್ಷಣ ಮತ್ತು ಆರೋಗ್ಯದ ಶುಲ್ಕ ದುಭಾರಿಯಾಗಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಯುವಜನರು ಬೀದಿ ಸುತ್ತುತ್ತಿದ್ದಾರೆ. ಮಾನವನ ಎಲ್ಲಾ ರೀತಿಯ ಶೋಷಣೆಗಳಿಂದ ಮುಕ್ತವಾದ ಸಮಾಜವಾದ ವ್ಯವಸ್ಥೆ ಜಾರಿಗೆ ಬರಬೇಕು ಎಂಬ ಗುರಿಯೊಂದಿಗೆ ಪ್ರಾಣದ ಹಂಗು ತೊರೆದು ಹೋರಾಡಿ ಮಡಿದ ಕ್ರಾಂತಿಕಾರಿ ಯುವಕ ಹುತಾತ್ಮ ಭಗತ್‌ಸಿಂಗ್ ಅವರ ಕನಸು ಈಡೇರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಗ್ರಾಮದ ಯುವ ಮುಖಂಡ ಮಲಿಕಪಾಶಾ ಮೌಜನ್ ಮಾತನಾಡಿದರು. ನಾಗಶೆಟ್ಟಿ ಸುಲೇಪೇಟ, ಮುಸಾಮಿಯ್ಯಾ ಮುಸಾವಾಲೆ, ಬಸವರಾಜ ಗೋಗಿ, ರಿಯಾಜ್ ಮೌಜನ್, ಸಿದ್ದಪ್ಪಾ ಕರಜಗಿ, ಕಾಶಪ್ಪಾ ಗುದಗಲ್, ಸಲಿಂ ಖುರೇಶಿ, ಸಾದಿಕ ಮಾಸುಲದಾರ, ಅಂಬಣ್ಣ ಉಡಗಿ, ಸಿದ್ದಪ್ಪಾ ತಳವಾರ, ಭೀಮರಾಯ ಅಲ್ಲೂರ, ಜಗದೀಶ ಪೂಜಾರಿ, ಮರಲಿಂಗ ಸಾಹುಕಾರ, ಬಾಷಾಮಿಯ್ಯಾ ಮುಸಾವಾಲೆ, ಶಿವರಾಯ ಹಾಬಾಳ, ನಿಂಗಪ್ಪಾ ಪೂಜಾರಿ, ಮುಸ್ತಫಾ ಪೀರಾವಾಲೇ, ಶಬ್ಬೀರ ಡಬರೋಟಿ, ಮುರಳಿಧರ ವೈಶ್ಣವ ಪಾಲ್ಗೊಂಡಿದ್ದರು. ರಮೇಶ ಕಲಾಲ್ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here