ಕಲಬುರಗಿ: ಮಹಾ ನಗರದ ಕರ್ನಾಟಕ ಕೋಳಚೆ ಅಭಿವೃದ್ಧಿ ಮಂಡಳಿಯ ಎ.ಇ.ಇ. ಮತ್ತು ಜೆ.ಇ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಅಕ್ರಮ ನಡೆಸಿದ ಗುತ್ತಿಗೆದಾರರ ಪರವಾನಿಗೆ ಕಪ್ಪುಪಟ್ಟಿಗೆ ಸೇರಿಸಲು ಆಗ್ರಹಿಸಿ ಸಚಿವ ಜಮೀರ ಅಹ್ಮದ ಖಾನ ಅವರಿಗೆ ಜೈಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಎಚ್.ಭಾಆಸಗಿ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಕಲಬುರಗಿ ನಗರದ ಹೀರಾಪೂರ ಬಡಾವಣೆಯಲ್ಲಿ ಪ್ರಸ್ತುತವಾಗಿ ಕರ್ನಾಟಕ, ಕೊಳಚೆ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸುತ್ತಿರುವ ಮನೆಗಳನ್ನು ಕ್ರಿಯಾ ಯೋಜನೆ ಪ್ರಕಾರ ಸರಿಯಾಗಿ ನಿರ್ಮಿಸಲಾಗುತ್ತಿಲ್ಲ ಕಳಪೆ ಕಾಮಗಾರಿ ಮಾಡಲಾಗುತ್ತಿದೆ.
ಕೆಲ ಕಾಮಗಾರಿಗಳು ಒಂದು ವರ್ಷದಿಂದ ಅರ್ಧದಲ್ಲಿ ನಿಂತಿವೆ. ಗುತ್ತಿಗೆದಾರೊಂದಿಗೆ ಶಾಮಿಲಾಗಿ ಅಕ್ರಮ ನಡೆಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ತನಿಖೆ ಕೈಗೊಂಡು ಕ್ರಮ ಜರುಗಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಫಲಾನುಭವಿಗಳು ಡಿ.ಡಿ. ಕಟ್ಟಿ 2 ವರಿ ವರ್ಷಗಳು ಕಳೆದರು ಕೂಡಾ ಇಲ್ಲಿಯವರೆಗೆ ಮನೆಯು ಪೂರ್ಣಗೊಂಡಿರುವುದಿಲ್ಲ. ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ಮತ್ತು ಇಲ್ಲಿಯವರೆಗೆ ಛತ್ತ ಕೂಡಾ ಹಾಕಿರುವುದಿಲ್ಲ. ವಿನಾ ಕಾರಣ ವಿಳಂಭ ಮಾಡಲಾಗುತ್ತಿದೆ. ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಸಂತೋಷ ಚಂದಪ್ಪ, ಹುಸ್ಸೇನ್, ನವೀನಕುಮಾರ, ಸಾಗರ, ಬಸವರಾಜ ಮಗಿ, ದುಮ್ಮನಸೂರ ಅನೀಲ ತಳವಾರ, ಮಲ್ಲು ಆಲಗೂಡ, ಪ್ರಕಾಶ, ಗೌತಮ್ ಗೋರೆ, ಶಿವಪ್ರಕಾಶ ಕುಸ್ತಿ, ರೋಹನ ಇದ್ದರು.