ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ವಿಶ್ವ ಓಜೋನ್ ದಿನ

0
10

ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ” ವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಡಾ. ಎಸ್ ಆರ್ ಮೀಸೆ ನಿವೃತ್ತ ಪ್ರಾಂಶುಪಾಲರು, ಪಿ ಡಿ ಎ ಇಂಜಿನಿಯರ ಕಾಲೇಜ್ ಕಲಬುರ್ಗಿಯವರು ಓಜೋನ್ ಪದರದ ಸವಕಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅದನ್ನು ಸಂರಕ್ಷಿಸಲು ಸಂಭವನೀಯ ಪರಿಹಾರಗಳನ್ನು ಹುಡುಕಲು ಇದನ್ನು ಆಚರಿಸಲಾಗುತ್ತದೆ. ಸೂರ್ಯನ ಬೆಳಕು ಇಲ್ಲದೆ ಭೂಮಿಯ ಮೇಲಿನ ಜೀವನ ಸಾಧ್ಯವಿಲ್ಲ. ಆದರೆ ನಾವು ನಮ್ಮ ದಿನನಿತ್ಯದಲ್ಲಿ ಸಾಮಾನ್ಯವಾಗಿ ಬಳಸುವ ಹಲವಾರು ರಾಸಾಯನಿಕಗಳು ಓಜೋನ್ ಪದರಕ್ಕೆ ಅತ್ಯಂತ ಹಾನಿಕಾರಕವೆಂದು ಎಂದು ಹೇಳಿದರು.

Contact Your\'s Advertisement; 9902492681

ವಿಶ್ವ ಓಜೋನ್ ದಿನದ ಇತಿಹಾಸ: ಡಿಸೆಂಬರ್ 19, 1994 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸೆಪ್ಟೆಂಬರ್ 16 ರಂದು ಓಜೋನ್ ಪದರದ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ದಿನವನ್ನು ಘೋಷಿಸಿತು. 1987 ರಲ್ಲಿ ಓಜೋನ್ ಪದರವನ್ನು ಖಾಲಿ ಮಾಡುವ ವಸ್ತುಗಳ ಮೇಲಿನ ಮಾಂಟ್ರಿಯಲ್ ಪ್ರೋಟೋಕಾಲ್ಗೆ ಸಹಿ ಹಾಕಲಾಯಿತು. ಸೆಪ್ಟೆಂಬರ್ 16, 1987 ರಂದು, ವಿಶ್ವಸಂಸ್ಥೆ ಮತ್ತು ಇತರ 45 ದೇಶಗಳು ಮಾಂಟ್ರಿಯಲ್ ಶಿಷ್ಟಾಚಾರಕ್ಕೆ ಸಹಿ ಹಾಕಿದವು ಎಂದು ತಿಳಿಸಿದರು.

ಜನಸಂಖ್ಯೆ ಹೆಚ್ಚಳದಿಂದ, ದೊಡ್ಡ ದೊಡ್ಡ ಖಾರ್ಕನೆಗಳಿಂದ, ತ್ಯಾಜ್ಯ ವಸ್ತುವಗಳಿಂದ ವಾಯು ಮಾಲಿನ್ಯ, ಜಲ ಮಾಲಿನ್ಯ ಹಾಗೂ ಮಣ್ಣಿನ ಮಾಲಿನ್ಯವಾಗುತ್ತಿದೆ ಇದರಿಂದ ಜಾಗತಿಕ ಸಮಸ್ಸೆಗಳು ಉಟ್ಟಿಕೊಳ್ಳುತ್ತವೆ ಆದುದರಿಂದ ಪರಿಸರ ಪಾಲನೆ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಹನುಮಪ್ಪ, ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿ ವಿಭಾಗದವರು ಮಾತನಾಡಿ, ಮಾಲಿನ್ಯ ನಿಯಂತ್ರಣ ತಂಡಗಳು ಹೇಗೆ ಹುಟ್ಟಿಕೊಂಡವು, ಜಾಗತಿಕ ತಾಪಮಾನ, ಮಾನವನ ವಿಕಾಸಗಳು ಹೆಚ್ಚುತ್ತಿವೆ ಇದರಿಂದ ಮಾನವನ ಮೇಲೆ ಮತ್ತು ಪ್ರಾಣಿಗಳ ಮೇಲೆ ಅನಾರೋಗ್ಯದ ಅಡ್ಡಪರಿಣಾಮಗಳು ಬಿರುತ್ತವೆ ಆದುದರಿಂದ ನಾವು ನಮ್ಮ ಪರಿಸರವನ್ನು ಕಾಪಿಡಿಕೊಳ್ಳಬೇಕು ಹಾಗೆ ಒಝೋನ್ ಲಾಯೆರ್ ಮೇಲೆ ಪರಿಣಾಮ ಬಿರುತ್ತಿರುವ ಚಟುವಟಿಕೆಗಳನ್ನು ಕಡಿಮೆಮಾಡುವಲ್ಲಿ ಯುವಕರ ಪಾತ್ರ ದೊಡ್ಡದು ಎಂದು ಹೇಳಿದರು.

ಶಕುಂತಲಾ ಬಿರಾದಾರ್, ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿ ವಿಭಾಗದವರು ಮಾತನಾಡಿ, ಇಂಜಿನಿಯರ್ಗಳಾದ ನಾವು ಹೊಸ ಹೊಸ ಅನ್ವೇಷಣೆಗಳು ಮಾಡುವಲ್ಲಿ ಪರಿಣಿತರು ಆದರೆ ಹೊಸ ತಂತ್ರಜ್ಞಾನ ಅಥವಾ ಹೊಸ ಅನ್ವೇಷಣೆಯಿಂದ ಆಗುವ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಬಹಳ ಸಮಗ್ರ ಮಾಹಿತಿಯನ್ನು ತಿಳಿದುಕೊಂಡು ಮುನ್ನುಗ್ಗುಬೇಕು ಇಲ್ಲವಾದರೆ ಪರಿಸರದಲ್ಲಿ ಆಗುವ ನಾಶ ಮತ್ತು ಒಝೋನ್ ಲಾಯೆರ್ ಮೇಲೆ ಆಗುವ ಪರಿಣಾಮಗಳಿಗೆ ನಾವೇ ಜವಾಬ್ದಾರರಾಗುತ್ತೇವೆ ಎಂದು ತಿಳಿಹೇಳಿದರು.

ಪ್ರಾಚಾರ್ಯರಾದ ಡಾ.ಶರಣಬಸಪ್ಪ ಸಾಲಿಯವರು ಅತಿಥಿಗಳನ್ನು ಸ್ವಾಗತಿಸಿ ಸನ್ಮಾನಿಸಿದರು ಡಾ.ಅಶೋಕ್ ಪಾಟೀಲ್, ಪರೀಕ್ಷಾ ವಿಭಾಗ, ಪ್ರೊ. ಶರಣಗೌಡ ಪಾಟೀಲ, ಶೈಕ್ಷಣಿಕ ವಿಭಾಗ, ಪ್ರೊ. ಸಾಹೇಬಗೌಡ ಪಾಟೀಲ್ ಸಿವಿಲ್ ವಿಭಾಗದ ಮುಖ್ಯಸ್ಥರು ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಪ್ರೊ. ಸೂರಜ ಸೋನಾರ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here