ಕಲಬುರಗಿ: ಹಿಂಗುಲಾಂಬಿಕಾ ಶಿಕ್ಷಣ ಸಂಸ್ಥೆಯ ಹಿಂಗುಲಾಂಬಿಕಾ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಶ್ರೀ ಮಲ್ಲೆಶಪ್ಪ ಮಿಣಜಗಿ ಪ್ರತಿಷ್ಠಾನ ದ ಆಶ್ರಯ ದಲ್ಲಿ ನಗರದ ಗಾಜೀಪುರ ಬಡಾವಣೆಯ ಅತ್ತರ ಕಂಪೌಂಡ್ ಆವರಣದಲ್ಲಿ ಉಚಿತ ತಪಾಸಣಾ ಶಿಬಿರ ನಡೆಯಿತು.
ಶಿಬಿರ ಉದ್ಘಾಟಿಸಿದ ಖ್ಯಾತ ಪ್ರಸ್ತುತಿ ಹಾಗೂ ಸ್ತ್ರೀ ರೋಗ ತಜ್ಞ ಡಾ. ಇಂದಿರಾ ಶಕ್ತಿ ಮಾತನಾಡಿ,ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯ ಕಡೆ ಗಮನ ಹರಿಸದೆ ಅನೇಕ ಕಾಯಿಲೆಗಳಿಗೆ ತುತ್ತಾಗುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೊಳಪಟ್ಟು ಸಂಶಯ ದೂರ ಮಾಡಿಕೊಳ್ಳಬೇಕು. ಇನ್ನೂ ಯುವತಿಯರಲ್ಲಿ ಗರ್ಭಕೋಶದ ಕಂಠದ ಕ್ಯಾನ್ಸರ್ ಕಂಡುಬರುತ್ತಿವೆ. ಇದಕ್ಕೆ ಸದ್ಯ ಬಸವೇಶ್ವರ ಹಾಗೂ ಸಂಗಮೇಶ್ವರ ಆಸ್ಪತ್ರೆ ಯಲ್ಲಿ ರಿಯಾಯತಿ ದರದಲ್ಲಿ ಲಸಿಕೆ ಲಭ್ಯವಾಗಿದೆ. ಮುಂಜಾಗ್ರತೆ ದೃಷ್ಟಿಯಿಂದ ವಯಸ್ಸಿನ ಅನುಸಾರ ಎರಡು ಅಥವಾ ಮೂರು ಲಸಿಕೆ ಪಡೆದುಕೊಂಡು ಆರೋಗ್ಯದಿಂದ ಇರುವಂತೆ ತಿಳಿಹೇಳಿದರು. ಇದರಿಂದ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಅಲ್ಲಮಪ್ರಭು ಗುಡ್ಡಾ, ಆಸ್ಪತ್ರೆ ಅಧೀಕ್ಷಕಿ ಡಾ. ವಿಜಯಲಕ್ಷ್ಮಿ ಹರನೂರಕರ್, ಪ್ರಾಧ್ಯಾಪಕ ಡಾ. ರಾಮರಾವ್ ದೇಶಮುಖ, ಸಂಯೋಜಕ ಡಾ. ಶರಣಕುಮಾರ ಸೇರಿದಂತೆ ಅನೇಕರು ಭಾಗವಹಿಸಿದರು. ನೂರಕ್ಕೂ ಅಧಿಕ ಜನ ಶಿಬಿರದ ಲಾಭ ಪಡೆದುಕೊಂಡರು.