ಮಕ್ಕಳಿಗೆ ಅನುಭವತ್ಮಾಕ ಕಲಿಕೆಗೆ ಶೈಕ್ಷಣಿಕ ಮೇಳಗಳು ಸಹಕಾರಿ; ಬಿಇಒ

0
20

ಸುರಪುರ: ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುರಬರಗಲ್ಲಿಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಅಜೀಮ್ ಪ್ರೇಮಜೀ ಫೌಂಡೇಷನ್ ಸಹಯೋಗದಲ್ಲಿ ಮಕ್ಕಳ ಕಲಿಕಾ ಮೇಳವನ್ನು ನಡೆಸಲಾಗಿದೆ.

ಮೇಳ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಮಾತಾನಾಡಿ, ಮಕ್ಕಳಲ್ಲಿ ಅನುಭವತ್ಮಾಕ ಕಲಿಕೆಗೆ ಶೈಕ್ಷಣಿಕ ಮೇಳಗಳು ತುಂಬಾ ಸಹಕಾರಿಯಾಗಿವೆ, ಮೇಳಗಳಿಂದ ಮಕ್ಕಳಲ್ಲಿ ಪ್ರಶ್ನಿಸುವ, ಮಾತನಾಡುವ ಸಾಮಥ್ರ್ಯಗಳು ಹೆಚ್ಚಾಗುವುದರ ಜೊತೆಗೆ ಮಕ್ಕಳಲ್ಲಿ ಗುಣಮಟ್ಟದ ಕಲಿಕೆಯಾಗುತ್ತದೆ ಎಂದು ಅಭಿಪ್ರಾಯಟ್ಟರು.

Contact Your\'s Advertisement; 9902492681

ಬಿ.ಆರ್.ಪಿ ಖಾದರಪಟೇಲ್ ಮಾತನಾಡುತ್ತಾ, ಶಾಲೆಯಲ್ಲಿ ನಡೆಯುವ ಈ ರೀತಿಯ ಶೈಕ್ಷಣಿಕ ಮೇಳಗಳಿಂದ ಮಕ್ಕಳಲ್ಲಿ ಕಲಿಯು ಆಸಕ್ತಿ ಹಾಗೂ ಕುತೂಹಲ ಹೆಚ್ಚಾಗುವುದರ ಜೊತೆಗೆ ಶಾಲಾ ಚಟುವಟಿಕೆಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಉತ್ತಮವಾಗುವುದು ಎಂದು ಅಭಿಪ್ರಾಯಪಟ್ಟರು.

ಮೇಳದಲ್ಲಿ ಭಾಷೆ, ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಚಟುವಟಿಕೆಗಳು ಮಕ್ಕಳು ಉತ್ತಮವಾಗಿ ಅಭಿವ್ಯಕ್ತಿಪಡಿಸಿದರು. ಮೇಳದಲ್ಲಿ ಪ್ರಾ.ಶಾ.ಶಿ.ಸಂಘದ ಜಿಲ್ಲಾ ಖಜಾಂಚಿ ಸೋಮರೆಡ್ಡಿ ಮಂಗಿಹಾಳ, ಶಿP್ಪ್ಷಕರಾದ ಸುಜಾತಾ ನಾಯಕ, ಭೀಮಪ್ಪ,ಅಮರಯ್ಯಸ್ವಾಮಿ, ಚಂದ್ರಖಶೇಖರ ಶಶಿಕಲಾ ಹಣಮಂತ ಪ್ರದಾನಿ ಎಸ್.ಡಿ.ಎಮ್.ಸಿ ಅಧ್ಯಕ್ಷರು ಮತ್ತು ಸದಸ್ಯರು ಪಾಲಕ ಪೋಷಕರು, ಸಿಆರ್.ಪಿ ಶಿವುಕುಮಾರ ಹಿರೇಮಠ, ಶಿವಲೀಲಾ, ಅಜೀಮ್ ಪ್ರೇಮಜೀ ಫೌಂಡೇಷನ್ ಅನಿಲ್ ಔಶಾ, ಕವಿತಾ, ಕೃಷ್ಣಾ ಬಿಜಾಸಪುರ, ಅನ್ವರ ಜಮಾದಾರ, ಸುರಪುರದ ವಿವಿಧ ಶಾಲೆಯ ಶಿಕ್ಷಕರಾದ ದೇವರಾಜ ಪಾಟೀಲ್, ಸಾಮುವೇಲ್, ಮಾಳಪ್ಪ ಪೂಜಾರಿ, ಅಬ್ದುಲ್ ರೆಹೆಮಾನ, ಮೌನೇಶ ಪತ್ತಾರ, ಭಾಗಮ್ಮ, ಪ್ರಿಯಾಂಕಾ, ವಿವಿಧ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here