ಕಲಬುರಗಿ: ಶ್ರೀಮತಿ ಇಂದುಮತಿ ಚಾರಿಟೇಬಲ್ ಟ್ರಸ್ಟ್ (ರಿ)ನ ಸಂಸ್ಥಾಪಕರಾದ ದಿ.ಸಂಗನಬಸಪ್ಪ ಹತ್ತಿಯವರ 3ನೇ ಪುಣ್ಯತಿಥಿಯ ಸ್ಮರಣಾರ್ಥ ವಿಶೇಷ ಮಕ್ಕಳಿಗೆ ಆಟಿಕೆ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಹಾಗೂ ವಿಶೇಷ ಶಿಕ್ಷಣ ಕುರಿತು ಉಪನ್ಯಾಸವನ್ನು ಲಾಹೋಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಿ.ಆರ್. ಪಾಟೀಲ್ ಮುಖ್ಯಮಂತ್ರಿಯವರ ನೀತಿ ಮತ್ತು ಕಾರ್ಯಕ್ರಮ ಸಲಹೆಗಾರರು ಹಾಗು ವಿಧಾನಸಭೆ ಸದಸ್ಯರು ಆಳಂದ ಮತಕ್ಷೇತ್ರ ಇವರು ವಿಶೇಷ ಮಕ್ಕಳಿಗೆ ಆಟಿಕೆ ಸಾಮಗ್ರಿಗಳನ್ನು ವಿತರಿಸಿ ಸಂಸ್ಥೆಯ ಕಾರ್ಯವೈಖರಿಯನ್ನು ಹೊಗಳಿದಲ್ಲದೆ ಈ ಭಾಗದಲ್ಲಿ ವಿಶೇಷ ಶಿಕ್ಷಣದ ಕೊರತೆ ಇದ್ದು ಇನ್ನು ಹೆಚ್ಚಿನ ಬೆಳವಣಿಗೆಗಳು ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅಥಿತಿಗಳಾದ ಅಮರನಾಥ ಪಾಟೀಲ್ ಮಾಜಿ ವಿಧಾನ ಪರಿಷತ್ ಸದಸ್ಯರು ಇವರು ಸಂಸ್ಥೆಯ ಕುರಿತು ಒಂದೆರಡು ಮಾತನಾಡಿದರು.
ಈ ಕಾರ್ಯಕ್ರಮಕ್ಕೆ ಶ್ರೀ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಇವರು ಅತಿಥಿಗಳಾಗಿ ಭಾಗವಹಿಸಿ ದಿ.ಸಂಗನಬಸಪ್ಪ ಹತ್ತಿಯವರ ಬಗ್ಗೆ ಮಾತನಾಡಿದರು. ವಿಶೇಷ ಶಿಕ್ಷಣ ಕುರಿತು ಡಾ. ರೇಣುಕಾ ಬಗಾಲೆಯವರು ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ಸುರೇಶ್ ಹತ್ತಿ ಕಾರ್ಯದರ್ಶಿಗಳು ವಹಿಸಿದ್ದರು. ಅದೇರೀತಿ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಮೇಶ್ ಹತ್ತಿ, ಮನಸ್ವಿನಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಆಶಾ ನಿಪ್ಪಾಣಿ ಹಾಗೂ ಸಂಸ್ಥೆಯ ಸದ್ಯಸರುಗಳು, ಸಿಬ್ಬಂದಿಗಳು, ಶಾಲೆಯ ವಿಶೇಷ ಮಕ್ಕಳು ಹಾಗೂ ಮಹಾಗಾಂವ್ ಗ್ರಾಮದ ಹಿರಿಯರು ಭಾಗವಹಿಸಿದ್ದರು.