ಮುನಿರತ್ನ ಶಾಸಕ ಸ್ಥಾನ ಅನರ್ಹಗೊಳಿಸಲು ಪರಶುರಾಮ ಕೆರೆಹಳ್ಳಿ ಆಗ್ರಹ

0
50

ಕೊಪ್ಪಳ: ‘ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿರುವ ಹಾಗೂ ದಲಿತರ ಬಗ್ಗೆ ಜಾತಿ ನಿಂದನೆ ಮಾಡಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ, ಗಡಿಪಾರು ಮಾಡಬೇಕೆಂದು ಕಾಂಗ್ರೆಸ್ ಕೆಪಿಸಿಸಿ ಪರಿಶಿಷ್ಟ ವಿಭಾಗದ ಜಿಲ್ಲಾ ಮಾಧ್ಯಮ ವಕ್ತಾರ ಪರಶುರಾಮ ಕೆರೆಹಳ್ಳಿ ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿಯ ಶಾಸಕರಾದ ಮುನಿಯಪ್ಪ ನಾಯ್ಡು ಅವರು ಫೇಸ್ಬುಕ್ ವಾಟ್ಸಾಪ್ ಗಳಲ್ಲಿ ಮಾತನಾಡಿದ ಆಡಿಯೋ ವೈರಲ್ ಆಗಿದ್ದು, ಹೀಗಾಗಿ ಬಿಜೆಪಿ ಪಕ್ಷವು ಶಾಸಕ ಮುನಿರತ್ನ ಅವರನ್ನು ಪಕ್ಷದಿಂದ ವಜಾಗೊಳಿಸದೆ ಮೌನವಹಿಸಿರುವದು ಸರಿಯಲ್ಲ ಎಂದರು.

Contact Your\'s Advertisement; 9902492681

ಒಕ್ಕಲಿಗರ ಸಮುದಾಯದ ಮಹಿಳೆಯರ ಬಗ್ಗೆ ಕೆಟ್ಟ ಪದಗಳಿಂದ ಮಾತನಾಡಿದಾರೆ, ಮತ್ತು ನಮ್ಮ ದಲಿತ ವ್ಯಕ್ತಿಯನ್ನು ಜಾತಿ ನಿಂದನೆಯನ್ನು ಮಾಡಿ, ದಲಿತರಂದರೆ ಕೀಳು ಜಾತಿಯವರು ಅನ್ನೋ ರೀತಿಯಲ್ಲಿ ಜಾತಿ ನಿಂದನೆ ಮಾಡಿದ್ದಾರೆ. ಇಂತಹ ದಲಿತರ ವಿರೋಧಿ ವ್ಯಕ್ತಿಯನ್ನು ಶಾಸಕರಾಗಿರುವುದೆ ನಮ್ಮ ರಾಜ್ಯಕ್ಕೆ ದುರದೃಷ್ಟಕರ ಸಂಗತಿ ಎಂದು ಹೇಳಿದರು.

ಹಾಗಾಗಿ ಇವರನ್ನು ಅತಿ ಶೀಘ್ರದಲ್ಲೇ ಸಭಾಧ್ಯಕ್ಷ ಯು. ಟಿ. ಖಾದರ್ ಅವರು ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು, ಹಾಗೂ ಅವರನ್ನು ಕರ್ನಾಟಕ ರಾಜ್ಯದಿಂದ ಗಡಿಪಾರು ಮಾಡಬೇಕು ಆಗ್ರಹಿಸಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ರಾಗಿರುವ ಅವರು, ಪರಿಶಿಷ್ಟ ಜಾತಿಯ ಬಗ್ಗೆ ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ, ಭ್ರಷ್ಟಾಚಾರ, ಮತ್ತು 30 ಪರ್ಸೆಂಟ್ ಲಂಚ ನೀಡುವಂತೆ ಒತ್ತಾಯ, ಮಾಡಿರುವದು ಆಡಿಯೋದಲ್ಲಿರುವುದು ಇಡೀ ರಾಜ್ಯಕ್ಕೆ ಗೊತ್ತಾಗಿದೆ.

ಅಧಿಕಾರ ದುರುಪಯೋಗದಿಂದ ಅತ್ಯಂತ ಕೀಳು ಮಟ್ಟದ ಮಾತುಗಳನ್ನಾಡಿ ಒಕ್ಕಲಿಗರ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುವ ನಿಕೃಷ್ಟ ಮನಸ್ಥಿತಿಯನ್ನು ಹೊಂದಿರುವಂತಹ ಈ ವ್ಯಕ್ತಿಯನ್ನು ಶಾಸಕ ಸ್ಥಾನದಲ್ಲಿರುವುದು ಅಕ್ಷಮ್ಯ ಅಪರಾಧ ಎಂದು ಕಿಡಿ ಕಾರಿದರು.

ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಗಾಳೆಪ್ಪ ಎಚ್ ಪೂಜಾರ ಇದೇ ಪತ್ರಿಕೆ ಹೇಳಿಕೆಗೆ ಧ್ವನಿಗೂಡಿಸಿದ ಅವರು, ಕೂಡಲೇ ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸಿ, ಈಗಾಗಲೇ ಬಂಧನವಾಗಿ ಜೈಲು ಸೇರಿರುವ ಮುನಿರತ್ನರನ್ನು ಅಟ್ರಾಸಿಟಿ ಕೇಸಿನಲ್ಲಿ ನಾನ್ ಬೇಲ್ ಲೆಬೆಲ್ ಅಂದರೆ ಬೇಲ್ ನೀಡದೆ, ಕಠಿಣ ಶಿಕ್ಷೆ ಜೀವಾವಧಿ ಶಿಕ್ಷೆ ನೀಡಬೇಕು ಒತ್ತಾಯಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here