ಅಫಜಲಪುರ: ಇಲ್ಲಿನ ಸರಕಾರಿ ಪಾಲಿಟೆಕ್ನಿಕ್ ಅಫಜಲಪೂರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಪ್ರಾದೇಶಿಕ ಕೇಂದ್ರ ಕಲಬುರಗಿಯ ಜಂಟಿ ಸಂಯುಕ್ತಾಶ್ರಯದಲ್ಲಿ ಅಭಿಯಂತರರ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಸೈಯದ ಸಮೀರ ಯೋಜನಾ ಅಭಿಯಂತರರು ಏSಅSಖಿ ಬೆಂಗಳೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸರ್. ಎಮ್. ವಿಶ್ವೇಶ್ವರಯ್ಯನವರ ಗರೀಮೆ ಕಾರ್ಯಗಳನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಪ್ರೇರೆಪಿಸಿದರು, ವಿದ್ಯಾರ್ಥಿಗಳು ಸ್ಥಳಿಯ ಸಮಸ್ಯೆಗಳಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಅವಿಶ್ಕಾರಗಳ ಫಲಿತಾಂಶಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂದು ವಿವರಿಸಿದರು.
ಏSಅSಖಿ ವತಿಯಿಂದ ನಡೆಸಲಾದ Engineering Solutions for Sustainable World ಎಂಬ ವಿಷಯದ ಮೇಲೆ ಜರುಗಿಸಿದ ರಸಪ್ರಶ್ನೆ ಸ್ವರ್ದೆ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಥೆಯ ಖeಜ ಅಡಿoss ಘಟಕದಿಂದ ಆಯೋಜಿಸಲಾಗಿದ್ದ, ಪೋಸ್ಟರ್ ಮೇಕಿಂಗ್ ಸ್ಪರ್ದೇಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರ. ಪ್ರಾಚಾರ್ಯರಾದ ಶ್ರೀ ಸುರೇಶ ಶಟಗಾರ ವಹಿಸಿಕೊಂಡು ಅತಿಥಿಗಳಿಗೆ ಅಭಿನಂದಿಸಿ, ಅತಿಥಿಗಳು ವಿವರಿಸಿರುವ ತಂತ್ರಜ್ಞಾನದ ಪ್ರೆರೇಪಣೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲ ವಿಭಾಗದ ವಿಭಾಗಾಧಿಕಾರಿಗಳು, ಹಿರಿಯ ಉಪನ್ಯಾಸಕರುಗಳು, ಬೋಧಕ/ಬೋಧಕೇತರ ಸಿಬ್ಬಂದಿಗಳು ಹಾಗೂ ಎಲ್ಲ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು. ಕು. ಮನೋಜ ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು, ಕು. ಪ್ರೀತಿ ಹಿರೇಮಠ ನಿರೂಪಿಸಿದರು, ಕು. ಸಮರ್ಥ ಸ್ವಾಗತಿಸಿದರು, ಕು. ಅಂಬಿಕಾ ವಂದಿಸಿದರು.