ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಕ್ಕೆ ಚಾಲನೆ

0
33

ಕಲಬುರಗಿ: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ “ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ” ಕಾರ್ಯಕ್ರಮಕ್ಕೆ ಧಾರವಾಡ ಸ್ಮೈಲ್ ಗ್ಲೋಬಲ್ ಟೀಚರ್ಸ್ ಅಕಾಡೆಮಿ ಸಂಸ್ಥಾಪಕ ಮಹೇಶ್ ಮಾಶಾಳ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ದೇವರು ಸೃಷ್ಟಿಸಿದ ಪ್ರಕೃತಿಯಲ್ಲಿ ಎಲ್ಲದರಲ್ಲಿಯೂ ಒಂದು ಶಕ್ತಿ ಇದೆ. ವಿದ್ಯಾರ್ಥಿಗಳು ತಮ್ಮ ಒಳಗಿನ ಶಕ್ತಿಯನ್ನು ಅರಿತುಕೊಂಡು ಅದರ ಪ್ರಯೋಜನ ಪಡೆದುಕೊಳ್ಳಬೇಕು. ತನ್ನ ಬಗ್ಗೆ ಹೆಮ್ಮೆಯಿಂದಿದ್ದು ಬಾಳಬೇಕು. ಪಾಲಕರ ಬಗ್ಗೆ ಪ್ರೀತಿ ಅಭಿಯಾನ ಹೊಂದಿರಬೇಕು. ಅವರು ನೀಡಿದ ಹಣ, ಸಮಯ, ಸ್ವಾತಂತ್ರ್ಯದ ಸದುಪಯೋಗ ಪಡಿಸಿಕೊಳ್ಳಬೇಕು. ಶಿಕ್ಷಕರ ಮಾರ್ಗದರ್ಶನ ಪಡೆದು ಕೇವಲ ಪುಸ್ತಕ ಪಠ್ಯ, ಪರೀಕ್ಷೆ, ಅಂಕಕ್ಕೆ ಮಾತ್ರ ಸೀಮಿತವಾಗಿರದೆ ಪ್ರಪಂಚದ ಜ್ಞಾನ ಪಡೆದು ಸುಸಂಸ್ಕøತ ನಾಗರಿಕನಾಗಿ ಬಾಳಬೇಕು. ನಿಮ್ಮಲ್ಲಿ ಇರುವ ಶಕ್ತಿ, ಸಾಮಥ್ರ್ಯವನ್ನು ಹುಡುಕುವುದೇ ಶಿಕ್ಷಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Contact Your\'s Advertisement; 9902492681

ವಿದ್ಯಾರ್ಥಿ ಜೀವನದಲ್ಲಿ ಅದನ್ನು ಉತ್ತಮವಾಗಿ ಪಡದುಕೊಳ್ಳಬೇಕು. ಮಕ್ಕಳು ಎಲ್ಲವನ್ನು ಪ್ರಶ್ನಿಸಿ ಉತ್ತರ ಕಂಡುಕೊಳ್ಳಬೇಕು. ನೋಡುವ ದೃಷ್ಠಿ ಚೆನ್ನಾಗಿದ್ದರು. ಸೃಷ್ಠಿ ಸುಂದರವಾಗಿಯೇ ಕಾಣುತ್ತದೆ. ಮನುಷ್ಯನಿಗೆ ಬುದ್ದಿಶಕ್ತಿ ದೇವರು ಕೊಟ್ಟ ಬಹುದೊಡ್ಡ ಕೊಡುಗೆ ಅದನ್ನು ಅರಿತಿರಬೇಕು. ಜಗತ್ತಿನಲ್ಲಿ ಎಲ್ಲವೂ ಇದೆ ಒಳ್ಳೆಯದು ಕೆಟ್ಟದು ಅದರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದು ನಿಮಗೆ ಬಿಟ್ಟಿದ್ದು ಉತ್ತಮವಾದದನ್ನು ಆರಿಸಿಕೊಂಡು ಆ ನಿಟ್ಟಿನಲ್ಲಿ ಸಾಧನೆ ಮಾಡಬೇಕೆಂದು ಪ್ರೋತ್ಸಾಹಿಸಿದರು.

ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ,ಎಸ್.ಎಸ್.ಹಿರೇಮಠ, ಪ್ರಭುಗೌಡ ಸಿದ್ಧಾರೆಡ್ಡಿ,ಪ್ರಶಾಂತ ಕುಲಕರ್ಣಿ, ಮತಿ ವಿನುತಾ ಆರ್.ಬಿ.,ಕರುಣೇಶ್ ಹಿರೇಮಠ,ಗುರುರಾಜ ಕುಲಕರ್ಣಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು. ವೀರ ಪ್ರಾರ್ಥಿಸಿದರು. ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here