“ಸ್ವಚ್ಛತಾ ಹೀ ಸೇವಾ” ಅಂಗವಾಗಿ ಸ್ವಚ್ಛತಾ ಅಭಿಯಾನ

0
32

ಕಲಬುರಗಿ; ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ, ನಗರದ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಾಗೂ ಈಗಾಗಲೇ ಪಾಲಿಕೆಯಿಂದ ಇತರೆ ಸ್ವಚ್ಛತಾ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ “ಸ್ವಚ್ಛತಾ ಹೀ ಸೇವಾ” ಅಂಗವಾಗಿ 2ನೇ ಅಕ್ಟೋಬರ್-2024 ರಂದು ಕಾರ್ಯಕ್ರಮ ಇಂದು ಬೆಳಿಗ್ಗೆ 9 ಗಂಟೆಗೆ ಪಾಲಿಕೆ ಕಚೇರಿ ಮುಂದೆ ಜರುಗಿತು.

ಪಾಲಿಕೆ ಪೂಜ್ಯ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ ಹಾಗೂ ಸಾರ್ವಜನಿಕ ಆರ್ಯೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Contact Your\'s Advertisement; 9902492681

ಇದೇ ವೇಳೆ ಸ್ವಚ್ಚತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಂತರ ಗಣ್ಯರು ಪಾಲಿಕೆ ಕಚೇರಿ ಪಕ್ಕದ ಆವರಣವನ್ನು ಸ್ವತಃ ತಮ್ಮ ಕೈಯಲ್ಲಿ ಪೆÇರಕೆ ಹಿಡಿದು ಗುಡಿಸುವ್ ಮೂಲಕ ಸ್ವಚ್ಛಗೊಳಿಸಿದರು. ವಿವಿಧ ಶಾಲೆಗಳಿಂದ ಆಗಮಿಸಿದ್ದ ಎನ್‍ಸಿಸಿ ವಿದ್ಯಾರ್ಥಿಗಳು ಕೂಡ ಅಪ್ಪ ಕೆರೆ ಪಕ್ಕದ ಉದ್ಯಾನವನವನ್ನು ಸ್ವಚ್ಛಗೊಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ಪಾಟೀಲ್ ಭುವನಿಷ್ ದೇವಿದಾಸ, ಉಪ ಆಯುಕ್ತರಾದ ಆರ್ ಪಿ ಜಾಧವ್, ಮಹಾನಗರ ಪಾಲಿಕೆ ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಪರವೀನ್, ಪಾಲಿಕೆ ಸದಸ್ಯರಾದ ಲತಾ ರವಿ ರಾಠೋಡ್, ನಿಂಗಮ್ಮ ಕಟ್ಟಿಮನಿ, ರೇಣುಕಾ ಸೇರಿದಂತೆ ಸುಷ್ಮಾ ಸಾಗರ್, ಬಾಬುರಾವ್, ಸುಭಾಷ್, ವೈಶಾಲಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಮಾಜ ಸೇವಕರು ಭಾಗವಹಿಸಿದ್ದರು. ಆರ್ ಜೇ ಮಂಜು ಹಿರೋಳಿ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here